ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಲ್ಲಿ ಮುಸುಕುಧಾರಿ ಗ್ಯಾಂಗ್ ಅಟ್ಟಹಾಸ ಮುಂದುವರೆದಿದ್ದು, ಚಿಕ್ಕಮಗಳೂರಲ್ಲಿ ಮನೆಗೆ ನುಗ್ಗಿ ಹಣ, ಚಿನ್ನ ದೋಚಿ ಪರಾರಿಯಾದ ಘಟನೆ ನಡೆದಿದೆ.
ಇದನ್ನೂ ಓದಿ: ಜೀವವಿಲ್ಲದ ದೇಹಗಳೊಂದಿಗೆ ಅಘೋರಿಗಳ ಜೀವನ…!; ಅಘೋರಿಗಳ ವಿಚಿತ್ರ ಜೀವನ ಶೈಲಿ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಚಿಕ್ಕಮಗಳೂರು ತಾಲೂಕಿನ ಹೀರೇಮಗಳೂರಿನಲ್ಲಿ ಈ ಘಟನೆ ನಡೆದಿದ್ದು, ಜಿಲ್ಲೆಯಲ್ಲಿ ಖತರ್ನಾಕ್ ಗ್ಯಾಂಗ್ ಒಂದು ಆಯಕ್ಟೀವ್ ಆಗಿದೆ.
ಹೀರೇಮಗಳೂರಿನಲ್ಲಿ ರಾಮಮ್ಮ ಎಂಬುವವರ ಮನೆಗೆ ನುಗ್ಗಿ ಕನ್ನ ಹಾಕಿರುವ ಕಳ್ಳರು, ಮನೆಯಲ್ಲಿದ್ದ 35 ಸಾವಿರ ನಗದು ಬೆಳ್ಳಿ ವಸ್ತುಗಳ ಕಳ್ಳತನ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯದ BPL ಕಾರ್ಡ್ ದಾರರಿಗೆ ಮುಖ್ಯಮಂತ್ರಿಯಿಂದ ಮುಖ್ಯ ಮಾಹಿತಿ; ಮಿಸ್ ಮಾಡ್ದೆ ಈ ಸುದ್ದಿ ಓದಿ
ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬರುವ ಗ್ಯಾಂಗ್:
ಮುಖದ ಗುರುತು ಪತ್ತೆಯಾಗದಂತೆ ಬಟ್ಟೆ ಸುತ್ತಿಕೊಂಡು ಬರುವ ಈ ಗ್ಯಾಂಗ್, ಮನೆಯಲ್ಲಿದ್ದ ಸಿಸಿಟಿವಿ ಧ್ವಂಸ ಮಾಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸ್ಕೂಲ್ ಬಸ್ಗೆ ಹಳದಿ ಕಲರ್ ಯಾಕೆ ಇರುತ್ತೆ ಗೊತ್ತಾ!; ಇದರ ಹಿಂದಿದೆ ರಹಸ್ಯ ಸಂದೇಶ!












