
ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಹಾಡ್‌ರ್ವೇರ್ ಅಂಗಡಿವೊಂದಕ್ಕೆ ಒಳ್ಳನುಗ್ಗಿ ದೇವರಿಗೆ ಕೈ ಮುಗಿದು ತಿಜೋರಿಯಲ್ಲಿದ್ದ ನಗದನ್ನು ದೋಚಿರುವ ಘಟನೆ ತರೀಕೆರೆ ಪಟ್ಟಣದಲ್ಲಿ ನಡೆದಿದೆ.
ಇದನ್ನೂ ಓದಿ: ಬಸ್ ಗಳ ಸುರಕ್ಷತೆಗೆ ಮಹತ್ವದ ಕ್ರಮ; ಈ ನಿಯಮಗಳ ಪಾಲನೆ ಕಡ್ಡಾಯ!

ಮುಖ ಮುಚ್ಚಿಕೊಂಡು ಕಳ್ಳ ದಾರಿಯಲ್ಲಿ ಮಂಜುನಾಥ್ ಪೈಂಟ್ ಅಂಡ್ ಹಾರ್ಡ್ ವೇರ್ ಅಂಗಡಿಗೆ ಬಂದು ಕ್ಯಾಶ್‌ಬಾಕ್ಸ್ ನಲ್ಲಿದ್ದ ಸುಮಾರು 80 ಸಾವಿರ ರೂಪಾಯಿ ದೋಚಿದ್ದಾರೆ. ಈ ಕಳ್ಳತನದ ದೃಶ್ಯಾವಳಿ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಪೊಲೀಸ್ ಸಿಬ್ಬಂದಿಗಳ ಸ್ಲೋಚ್ ಕ್ಯಾಪ್ ಗೆ ಗುಡ್ ಬೈ; ಪೊಲೀಸ್ ಪೇದೆಗಳಿಗೆ ಹೊಸ ಟೋಪಿ
















