ಚಿಕ್ಕಮಗಳೂರು: ಮದುವೆ ಮಂಟಪಕ್ಕೆ ನುಗ್ಗಿದ ಯುವಕನ ಮಾಜಿ ಲವರ್: ಫುಲ್​​ ಹೈಡ್ರಾಮಾ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಯುವಕನೊಬ್ಬ ಮೊದಲನೇ ಪತ್ನಿಗೆ ಡಿವೋರ್ಸ್ ಕೊಟ್ಟು ಮತ್ತೊಬ್ಬ ಯುವತಿಯನ್ನು ಪ್ರೀತಿಸಿ 5 ಲಕ್ಷ ಹಣ ಪಡೆದು ಕೈ ಕೊಟ್ಟು ಇದೀಗ ಬೇರೆ ಯುವತಿಯ ಜೊತೆಗೆ ಮದುವೆ ಆಗೋಕೆ ರೆಡಿ ಆಗಿದ್ದಾನೆ. ಈ ವೇಳೆ ಮದುವೆ ಮಂಟಪಕ್ಕೆ ನುಗ್ಗಿ ಪ್ರಿಯತಮೆ ಗಲಾಟೆ ಮಾಡಿದ್ದಾಳೆ. ಯುವಕನ ಮದುವೆಯ ವೇಳೆ ಯುವತಿ ರಂಪಾಟ ಮಾಡಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.

ಇದನ್ನೂ ಓದಿ: ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಚಿಕ್ಕಮಗಳೂರು ನಗರದ ಕಲ್ಯಾಣ ನಗರದ ಯುವಕ ಶರತ್, ಬೇಲೂರು ಮೂಲದ ಅಶ್ವಿನಿಯನ್ನು 10 ವರ್ಷದಿಂದ ಪ್ರೀತಿ ಮಾಡುತ್ತಿದ್ದನಂತೆ ಆದರೆ ಈಗ ಪ್ರೀತಿಸಿ ಕೈ ಕೊಟ್ಟು ಬೇರೆಯವರೊಂದಿಗೆ ಮದುವೆಯಾಗಲು ಶರತ್ ಮುಂದಾಗಿದ್ದ. ಅಲ್ಲದೇ ಅಶ್ವಿನಿ ಹತ್ತಿರ 5 ಲಕ್ಷ ಹಣ ಕೂಡ ಪಡೆದಿದ್ದ ಎನ್ನಲಾಗಿದೆ. ಹಾಗಾಗಿ ನಿನ್ನೆ ಅಶ್ವಿನಿ ಮನೆ ಮುಂದೆ ಹೋಗಿ ಗಲಾಟೆ ಮಾಡಿದಳು. ಇಂದು ಮದುವೆ ಮಂಟಪಕ್ಕೆ ನುಗ್ಗಿ ಅಶ್ವಿನಿ ಗಲಾಟೆ ಮಾಡಿದ್ದಾಳೆ.

ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ

ಆದರೆ, ಚಿಕ್ಕಮಗಳೂರು ನಗರದ ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ನಿಗದಿಯಾದ ಮುಹೂರ್ತದಲ್ಲಿ ವಿವಾಹ ಕಾರ್ಯ ಮುಗಿದಿದೆ. ಆದರೂ ಯುವತಿ ಇದೇ ಮಂಟಪದಲ್ಲಿ ತನ್ನನ್ನು ಆತ ಮದುವೆಯಾಗಬೇಕು ಎಂದು ಪಟ್ಟು ಹಿಡಿದ್ದಾಳೆ. ಜೊತೆಗೆ ನನ್ನ ಮೇಲೆ ಹಲ್ಲೆ ಮಾಡಿದ್ರು ಎಂದು ಆಕ್ರೋಶ ಹೊರಹಾಕಿದ್ದಾಳೆ. ನಾನು ಬರುವ ಮೊದಲೇ ಮದುವೆಯಾಗಿದೆ. ನನ್ನ ಬಳಿ ಹಣ ಕೊಡ್ತೀವಿ ಇಲ್ಲಿಂದ ಹೋಗು ಅಂದ್ರು. ನನಗೆ ಯಾವುದೇ ಹಣ ಬೇಡ, ಆತ ನನ್ನ ಮದುವೆ ಆಗಬೇಕಷ್ಟೇ ಎಂದು ಯುವತಿ ತಿಳಿಸಿದ್ದಾಳೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.