ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪ್ರವಾಸಿಗರ ಪಾಲಿನ ಸ್ವರ್ಗ ಎಂದೆ ಖ್ಯಾತಿ ಪಡೆದಿರುವ ಕಾಫಿನಾಡು ಚಿಕ್ಕಮಗಳೂರು ಇದೀಗ ಡೇಂಜರಸ್ ಪಟ್ಟಿಗೆ ಸೇರಿದೆ.
ಇದನ್ನೂ ಓದಿ: 31 ಸಾವಿರ ರೈತರ ಬೆಳೆ ಸಾಲ ಮನ್ನಾ ಮಾಡಲು 232 ಕೋಟಿ ಹಣ ಬಿಡುಗಡೆ; ಬೆಳೆ ಸಾಲ ಮನ್ನಾ ರೈತರ ಪಟ್ಟಿ ಇಲ್ಲಿದೆ

ಹೌದು, ಮಲೆನಾಡಿನ 5 ತಾಲೂಕಿನ 88 ಪ್ರದೇಶಗಳು ಡೇಂಜರಸ್ ಪಟ್ಟಿಗೆ ಸೇರಿದ್ದು, ಇಂದಿನಿಂದ ಜಿಯೋಲಾಜಿಕಲ್ ಸರ್ವೆ ಆರಂಭವಾಗಲಿದೆ. ವಯನಾಡು ದುರಂತದ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅಪಾಯಕಾರಿ ಸ್ಥಳಗಳ ವರದಿ ಕೇಳಿತ್ತು. ಈ ಹಿನ್ನೆಲೆಯಲ್ಲಿ 88 ಡೇಂಜರಸ್ ಸ್ಥಳಗಳನ್ನ ಚಿಕ್ಕಮಗಳೂರು ಜಿಲ್ಲಾಡಳಿತ ಗುರುತು ಮಾಡಿದ್ದು ಇಂದಿನಿಂದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಪರಿಶೀಲನೆ ನಡೆಯಲಿದೆ.

ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್; ಈ ದಿನ ಬೆಳೆಹಾನಿ ಪರಿಹಾರ ಜಮಾ!
ಚಾರ್ಮಾಡಿ ಸೇರಿದಂತೆ 88 ಸ್ಥಳ ಡೇಂಜರಸ್ ಪಟ್ಟಿಗೆ:
ಹೌದು, ಮುಳ್ಳಯ್ಯನಗಿರಿ, ಪ್ರವಾಸಿತಾಣ ಚಂದ್ರದ್ರೋಣ ಪರ್ವತದ ಸಾಲು, ಚಾರ್ಮಾಡಿ ಘಾಟಿ ಸೇರಿದಂತೆ ಮಲೆನಾಡು ಭಾಗದ ಚಿಕ್ಕಮಗಳೂರು, ಕೊಪ್ಪ, ಕಳಸ, ಮೂಡಿಗೆರೆ, ಶೃಂಗೇರಿ ಸೇರಿದಂತೆ ಒಟ್ಟು 88 ಪ್ರದೇಶಗಳು ಡೇಂಜರಸ್ ಎಂದು ವರದಿ ನೀಡಿದ್ದು, ಇಂದಿನಿಂದ ಜಿಯೋಲಾಜಿಕಲ್ ಸರ್ವೇ ಸೆಂಥಿಲ್ ನೇತೃತ್ವದಲ್ಲಿ ಸರ್ವೇ ಕಾರ್ಯ ನಡೆಯಲಿದೆ.
ಇದನ್ನೂ ಓದಿ: ಬೆಳೆ ಹಾನಿ, ಅತಿವೃಷ್ಟಿ ಹಾನಿಗೊಳಗಾದವರಿಗೆ ₹775 ಕೋಟಿ ರೂ. ಬಿಡುಗಡೆ; ಯಾರಿಗೆ ಈ ಪರಿಹಾರದ ಹಣ ಸಿಗಲಿದೆ?















