ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಬಣಕಲ್ ಸಮೀಪದ ತ್ರಿಪುರ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಬಿರುಗಾಳಿ ಮಳೆಯ ಆರ್ಭಟ ಭಾರೀ ಅವಾಂತರವನ್ನುಂಟು ಮಾಡಿದೆ.
ಇದನ್ನೂ ಓದಿ: ಈ ದಿನ SSLC ಫಲಿತಾಂಶ ಪ್ರಕಟ

ಬಿರುಗಾಳಿ ಮಳೆಯಿಂದ ಪದ್ಮ ಪೂಜಾರಿ ಎಂಬುವವರ ಮನೆಯ ಮೇಲ್ಛಾವಣಿಯ ಲೋಹದ ಶೀಟ್ ಗಾಳಿ ಅಬ್ಬರದಿಂದ ಹಾರಿ ಹೋಗಿದೆ. ಈ ವೇಳೆ ಮನೆಯೊಳಗೆಯಿದ್ದ ಮಕ್ಕಳು ತೀವ್ರ ಭೀತಿಗೆ ಒಳಗಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯರ ನೆರವಿನಿಂದ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇದನ್ನೂ ಓದಿ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
ಇನ್ನೂ ಕೆಲವೊಂದು ಮನೆಗಳಿಗೆ ಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿದ್ಯುತ್ ಮಾರ್ಗಗಳು ಸಹ ಕೆಲವು ಕಡೆಗಳಲ್ಲಿ ಹಾನಿಗೀಡಾಗಿವೆ. ಸ್ಥಳೀಯ ಹವಾಮಾನ ಇಲಾಖೆಯ ಪ್ರಕಾರ ಈ ಬಿರುಗಾಳಿ ಮಳೆ ಇನ್ನೂ ಕೆಲವು ದಿನ ಮುಂದುವರೆಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನು ನೀಡಿದೆ.
ಇದನ್ನೂ ಓದಿ: ಮನೆಯಲ್ಲಿ ಪಾಲಿಶ್ ಅಕ್ಕಿ ಬಳಸೋ ಮುನ್ನ ಹುಷಾರ್; ಹೊರಬಿತ್ತು ಅಘಾತಕಾರಿ ಅಂಶ!
ಪದ್ಮ ಪೂಜಾರಿ ಅವರ ಕುಟುಂಬಕ್ಕೆ ಹಾಗೂ ಬೇರೆಯವರ ಹಾನಿಗೊಳಗಾದ ಮನೆಗಳಿಗೆ ಕೂಡ ಸರಕಾರದಿಂದ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ಯಜಮಾನಿಯರಿಗೆ ಗುಡ್ ನ್ಯೂಸ್; 3 ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ!












