ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕರ್ನಾಟಕ ಸರ್ಕಾರ, ಚಿಕ್ಕಮಗಳೂರು ಜಿಲ್ಲೆಯಿಂದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ 8-15 ವರ್ಷದ ಮಕ್ಕಳಿಗೆ ನೀಡಲಾಗುವ 2023-24 ನೇ ಸಾಲಿನ ಜಿಲ್ಲಾ ಪ್ರಶಸ್ತಿ ಕುಮಾರಿ ನಾಟ್ಯ ಎನ್ ಗೌಡ ಇವರಿಗೆ ಲಭಿಸಿದೆ.
ಇದನ್ನೂ ಓದಿ; ರೈತರೇ ಗಮನಿಸಿ; PM KISAN ನೋಂದಣಿ ಸಂಖ್ಯೆ ಮರೆತಿದ್ರೆ ಜಸ್ಟ್ ಹೀಗೆ ತಿಳಿಯಿರಿ

ದರ್ಶಿನಿ ಸಂಯುಕ್ತ ಪ್ರೌಡಶಾಲೆ ಶೃಂಗೇರಿಯಲ್ಲಿ 8 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು, ಪೊಲೀಸ್ ಇಲಾಖೆಯ ನವೀನ್, ಹಾಗೂ ಭರತನಾಟ್ಯ ಶಿಕ್ಷಕಿ ವಿದುಷಿ ಶ್ರೀಮತಿ ಸುನೀತ ನವೀನ್ ಗೌಡರವರ ಪುತ್ರಿಯಾಗಿದ್ದಾರೆ.
ಇದನ್ನೂ ಓದಿ; ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; 96 ಕಾರ್ಯಕರ್ತೆ ಹಾಗೂ ಸಹಾಯಕಿಯರ ಭರ್ತಿಗೆ ಅಧಿಸೂಚನೆ
ಬಹುಮುಖ ಪ್ರತಿಭೆಯ ಈಕೆಯ ಸಾಧನೆಗೆ ಶಾಲಾ ಶಿಕ್ಷಕ ವೃಂದ, ಕುಟುಂಬಸ್ಥರು ಹಾಗೂ ಸ್ನೇಹಿತರು ಅಭಿನಂದಿಸಿದ್ದಾರೆ.
ಮೂಡಿಗೆರೆ: ಗುರುತು ಸಿಗದಂತೆ ಮಂಕಿ ಕ್ಯಾಪ್ ಧರಿಸಿ ಗೋವು ಕಳ್ಳತನ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಗುರುತು ಸಿಗದಂತೆ ಮಂಕಿ ಕ್ಯಾಪ್ ಧರಿಸಿ ಗೋವು ಕಳ್ಳತನ ಮಾಡಿರುವ ಘಟನೆ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಐಷಾರಾಮಿ ಕಾರಿನಲ್ಲಿ ಬಂದು ಗುರುತು ಸಿಗದಂತೆ ಮಂಕಿ ಕ್ಯಾಪ್ ಧರಿಸಿ ಗೋವು ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ; ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ವನ್ಯಜೀವಿ ಅಂಗಾಂಗಗಳನ್ನು ಸರ್ಕಾರಕ್ಕೆ ಮರಳಿಸಲು ಅವಕಾಶ
ರಸ್ತೆ ಬದಿ ಮಲಗಿದ್ದ ಗೋವನ್ನು ಮಧ್ಯರಾತ್ರಿ ಕದ್ದೊಯ್ದಿದ್ದಾರೆ. ಕಾರಿನಲ್ಲಿ ಒಂದು ಗೋವನ್ನು ತುಂಬಿಕೊಳ್ಳುತ್ತಿದ್ದಂತೆ ಮತ್ತೊಂದು ಗೋವು ಕಾರಿನ ಹಿಂದೆಯೇ ಓಡಿದೆ. ಆ ಗೋವನ್ನು ರಕ್ಷಿಸಲು ಯತ್ನಿಸಿದೆ. ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ; ರಾಮಮಂದಿರ ಉದ್ಘಾಟನೆಗೆ ನೇರ ವಿ.ಐ.ಪಿ ಪಾಸ್ ಎಂಬ ಸಂದೇಶ ವೈರಲ್: ಏನಿದರ ಸತ್ಯಾಸತ್ಯತೆ?












