ತೇಜಸ್ವಿ ಸೂರ್ಯರ ಅಮೆರಿಕ ಪ್ರವಾಸ | ಶಿಷ್ಟಾಚಾರ ಉಲ್ಲಂಘನೆಗೆ ಕಾಂಗ್ರೆಸ್ ವಕ್ತಾರರಿಂದ ಟೀಕೆ

ಕೊಟ್ಟಿಗೆಹಾರ:  (ನ್ಯೂಸ್ ಮಲ್ನಾಡ್ ವರದಿ) ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅನಧಿಕೃತವಾಗಿ ಭೇಟಿಯಾಗಲು ಯತ್ನಿಸಿರುವುದನ್ನು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ. ಎಸ್. ಅನಂತ್ ತೀವ್ರವಾಗಿ ಟೀಕಿಸಿದ್ದಾರೆ. ಈ ಘಟನೆ ಭಾರತದ ಸಂಸತ್ ಹಾಗೂ ರಾಜ್ಯದ ಜನರಿಗೂ ಅವಮಾನವಾಗಿದೆಯೆಂದು ಹೇಳಿದ್ದಾರೆ.


ನ್ನೂ ಓದಿ: 1ಲಕ್ಷ ಹೂಡಿಕೆ ಮಾಡಿದ್ರೆ ಸಿಗುತ್ತೆ 2ಲಕ್ಷ…!; ಅಂಚೆ ಅಚೇರಿಯಲ್ಲಿದೆ ಭರ್ಜರಿ ಸ್ಕೀಮ್


ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ಅವರು, ಒಬ್ಬ ಸಂಸದರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಷ್ಟಾಚಾರ ಮತ್ತು ನಿಯಮಗಳನ್ನು ಪಾಲಿಸದೇ ನಡೆದುಕೊಂಡು, ತಮ್ಮ ವೈಯಕ್ತಿಕ ಕೀರ್ತಿಗಾಗಿ ದೇಶದ ಗೌರವವನ್ನೇ ಹರಾಜು ಹಾಕಿದ್ದಾರೆ ಎಂದು ಆರೋಪಿಸಿದರು.

ತೇಜಸ್ವಿ ಸೂರ್ಯ ಅವರಂತಹ ಎಳಸು ವ್ಯಕ್ತಿತ್ವದವರು. ಸಂಸದರಾಗಿರುವುದು ದುರದೃಷ್ಟಕರ. ಅವರು ಹಿಂದುತ್ವದ ಮಾತುಗಳಿಂದ ಮಾತ್ರ ಜನರ ಗಮನ ಸೆಳೆಯುತ್ತಿದ್ದು, ಯಾವುದೇ ಜನಪರ ಸಾಧನೆ ಅವರ ರಾಜಕೀಯ ಜೀವನದಲ್ಲಿ ಕಾಣಿಸುತ್ತಿಲ್ಲ ಎಂದು ವ್ಯಂಗ್ಯವಾಡಿದರು.


ನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಜಾಬ್; ವಿದ್ಯಾರ್ಹತೆ ಡಿಟೈಲ್ಸ್‌ ಇಲ್ಲಿದೆ ನೋಡಿ


ಅಮೆರಿಕ ಅಧ್ಯಕ್ಷರನ್ನು ಭೇಟಿಯಾಗುವುದು ಸುಲಭ ವಿಷಯವಲ್ಲ. ಅದರ ಬಗ್ಗೆ ಶಿಷ್ಟಾಚಾರ ಮತ್ತು ಅಧಿಕೃತ ಪ್ರಕ್ರಿಯೆಗಳಿವೆ. ಆದರೆ, ತೇಜಸ್ವಿ ಸೂರ್ಯ ಅವರು ಇದನ್ನು ಲೆಕ್ಕಿಸದೆ ವ್ಯಕ್ತಿಗತ ಮಟ್ಟದಲ್ಲಿ ಭೇಟಿಯಾಗಲು ಯತ್ನಿಸಿದ್ದು, ದೇಶದ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಅನಂತ್ ಅಭಿಪ್ರಾಯಪಟ್ಟರು.

ಬಿಜೆಪಿ ಪಕ್ಷ ತೇಜಸ್ವಿ ಸೂರ್ಯರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಅವರು ಕೂಡಲೇ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶದ ಜನರಿಂದ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು. (ವರದಿ- ತನು ಕೊಟ್ಟಿಗೆಹಾರ)


ನ್ನೂ ಓದಿ: 40% & 60% ಅಂಕ ಪಡೆದ ವಿದ್ಯಾರ್ಥಿಗಳ ಗಮನಕ್ಕೆ; ಸಿಗಲಿದೆ 50,000 ಸ್ಕಾಲರ್‌ ಶಿಪ್


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.