
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಬಣ್ಣದ ಲೋಕದಲ್ಲಿ ಮಿಂಚಬೇಕು ಎನ್ನುವ ಆಸೆ ಅನೇಕರಿಗಿದೆ. ಸಿನಿಮಾದಲ್ಲಿ ನಟಿಸಲು ಒಂದೇ ಒಂದು ಚಾನ್ಸ್ ಸಿಕ್ಕಿದ್ರೆ ಸಾಕು ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಕಾಯುತ್ತಿರುವ ಕಲಾವಿದರಿಗೆ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಅನೇಕರಿಗೆ ಗೋಲ್ಡನ್ ಅವಕಾಶ ಸಿಕ್ಕಿದೆ.
ಕನ್ನಡದ ಹೊಂಬಾಳೆ ಫಿಲ್ಮ್ಸ್ (Hombale Films) ಇದೀಗ ಸೌತ್ ಸಿನಿಮಾ ಇಂಡಸ್ಟ್ರಿಯ ಅತಿದೊಡ್ಡ ನಿರ್ಮಾಣ ಸಂಸ್ಥೆಯಾಗಿ ಬೆಳೆದಿದೆ. ಉದ್ಯಮಿ ವಿಜಯ್ ಕಿರಗಂದೂರು (Vijay Kiragandur) ಈ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್ ಬಣ್ಣದ ಲೋಕದಲ್ಲಿ ಮಿಂಚುವ ಕನಸು ಕಂಡವರನ್ನು ಕೈಬೀಸಿ ಕರೆದು ಹೊಸ ಕಲಾವಿದರಿಗೆ ಅವಕಾಶ ನೀಡಿತ್ತು.

ಇದನ್ನೂ ಓದಿ: ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನ

ಅವಕಾಶ ಬಳಸಿಕೊಂಡ ಮಲೆನಾಡಿನ ಅನೇಕ ಕಲಾವಿದರು:
ಹೌದು, ಕಾಂತರಾ ಚಾಪ್ಟರ್ 1 ಚಿತ್ರ ಚಿತ್ರಿಕರಣಕ್ಕೆ ಮೊದಲೇ ಹೊಸ ಕಲಾವಿದರಿಗೆ ಅವಕಾಶ ನೀಡುವುದಾಗಿ ಪ್ರಕಟಣೆ ಹೋರಾಡಿಸಿತ್ತು. ಇದನ್ನು ಬಳಸಿಕೊಂಡ ಅನೇಕರು ಈ ಚಿತ್ರದಲ್ಲಿ ನಟಿಸುವ ಅವಕಾಶ ಲಭಿಸಿತ್ತು. ಅದರಲ್ಲಿ ನಾಗೇಶ್ ಕೊಳೆಗೋಡು, ಗುಡ್ಡೆತೋಟದ ರವಿ, ಕುಮಾರ್, ಕೃಷ್ಣ ಕುಮಾರ್, ಅರಳಿಕಟ್ಟೆ ವಿಜಯ್ ಕುಮಾರ್, ಬಿಳಾಲುಕೊಪ್ಪ ಸುಂದೀದ್ರ, ನಾಗರಾಜ ಪ್ರಭ ಜೊತೆಗೆ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ತ್ರಿಶಾ ಜೈನ್ ಅವರಿಗೆ ನಟನೆಯ ಅವಕಾಶ ಗಿಟ್ಟಿಸಿಕೊಂಡಿದ್ದರು.
ಕನಸು ನನಸಾಗಿಸಿಕೊಂಡ ಮಲೆನಾಡಿನ ಪ್ರತಿಭೆ:
ಕಾಂತರಾ ಚಾಪ್ಟರ್ 1 ಚಿತ್ರ ಚಿತ್ರಿಕರಣಕ್ಕೆ ಹೊಸ ಕಲಾವಿದರಿಗೆ ಅವಕಾಶ ನೀಡುವುದಾಗಿ ಪ್ರಕಟಣೆ ಹೋರಾಡಿಸಿತ್ತು. ಹಾಗೆ ನಾನು ಕೂಡ ನನ್ನ ಪ್ರೊಫೈಲ್ ನೀಡಿದ್ದೆ. ನನಗೆ ಕೂಡ ಒಂದು ಪಾತ್ರಕ್ಕೆ ಸೆಲೆಕ್ಟ್ ಮಾಡಿದರು. ಕುಂದಾಪುರ ಸಮೀಪ ಬೃಹತ್ ಸೆಟ್ ನಲ್ಲಿ ಚಿತ್ರಿಕರಣ ನಡೆದಿದ್ದು, ಸತತ 16 ದಿನಗಳ ಕಾಲ ಚಿತ್ರಿಕರಣಕ್ಕೆ ಹೋಗಿದ್ದೆ. ಈ ಚಿತ್ರದಲ್ಲಿ ಅಭಿನಯಿಸುವುದು ನನ್ನ ಕನಸಾಗಿತ್ತು. ಪ್ಯಾನ್ ಇಂಡಿಯಾ ಸಿನಿಮಾ ಕೂಡ ಇದಾಗಿದ್ದು, ದೊಡ್ಡ ಕಲಾವಿದರ ಜೊತೆ ನಟಿಸಿದ್ದು ಖುಷಿ ತಂದಿದೆ ಎಂದು ನಾಗೇಶ್ ಕೊಳೆಗೋಡು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರೈತರಿಗೆ ಹೊಸ ಪಹಣಿ, ನಕ್ಷೆ ನೀಡಲು ಅಭಿಯಾನ; ಸಚಿವ ಕೃಷ್ಣ ಬೈರೇಗೌಡ ಮಾಹಿತಿ
ಕಾಂತಾರ- ಚಾಪ್ಟರ್ 1 ಸಿನಿಮಾದಲ್ಲಿ ನಟನೆಗೆ ಅವಕಾಶ ಗಿಟ್ಟಿಸಿಕೊಂಡ ತ್ರಿಶಾ ಜೈನ್:
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮದ ಅನುಶ್ರೀ, ಸತೀಶ್ ಜೈನ್ ವರ ಮಗಳಾದ ತ್ರಿಶಾ ಜೈನ್ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ನಟಿಸಿದ್ದಾರೆ. ಕಳೆದ ಜೂ.10ರಿಂದ 30ರವರೆಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸಮೀಪದ ಮಾಸ್ತಿಕಟ್ಟೆ ಬಳಿ ನಿರ್ಮಿಸಿದ್ದ ಬೃಹತ್ ಸೆಟ್‌ನಲ್ಲಿ ನಡೆದಿತ್ತು. ಈ ವೇಳೆ ತ್ರಿಶಾ ಜೈನ್ 20 ದಿನಗಳ ಕಾಲ ನಟಿಸಿದ್ದಾರೆ.
ಇದಲ್ಲದೆ ಜುಲೈ 26ರಿಂದ 29ರವರೆಗೆ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಚಿತ್ರೀಕರಣ ನಡೆಯಲಿರುವ, ನಟ ಜಗ್ಗೇಶ್ ಅವರ ಸಹೋದರ ಕೋಮಲ್ ಅವರ ಚಿತ್ರದ ಪಾತ್ರಕ್ಕೂ ತ್ರಿಶಾ ಜೈನ್ ಆಯ್ಕೆಯಾಗಿದ್ದಾರೆ. ತ್ರಿಶಾ ಜೈನ್ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ ಇಂಡಸ್ಟ್ರಿಯತ್ತ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅಂದ್ರೆ ಅದು ಕಾಂತಾರ. ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಮಲೆನಾಡಿನ ಅನೇಕ ಕಲಾವಿದರಿಗೆ ಬಣ್ಣದ ಲೋಕದಲ್ಲಿ ಮಿಂಚುವ ಅವಕಾಶ ಸಿಕ್ಕಿದೆ. ಕಾಂತಾರ ಚಾಪ್ಟರ್ 1 ಫಸ್ಟ್ ಲುಕ್ ಟೀಸರ್ ನೋಡಿ ಸಿನಿಪ್ರಿಯರು ಮಂತ್ರಮುಗ್ದರಾಗಿದ್ದು, ಸಿನಿಮಾ ಕ್ರೇಜ್ ಅನ್ನು ದುಪ್ಪಾಟ್ಟಾಗಿಸಿದ್ದು, ಅಕ್ಟೋಬರ್ 2ರಂದು ವಿಶ್ವದಾದ್ಯಂತ ಕಾಂತಾರ ಚಾಪ್ಟರ್ 1 ಸಿನಿಮಾ ತೆರೆ ಕಾಣಲಿದೆ.
ಇದನ್ನೂ ಓದಿ: 500 ಮೀಟರ್ ಒಳಗಿನ ಪಂಪ್ಸೆಟ್ ಗಳಿಗೆ ಇಲಾಖೆಯಿಂದಲೇ ಟ್ರಾನ್ಸ್ಫಾರ್ಮರ್!; ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿಕೆ
















