
ಹರಿಹರಪುರ: (ನ್ಯೂಸ್ ಮಲ್ನಾಡ್ ವರದಿ) ಶ್ರೀ ಕಿರಣಕೆರೆ ಪ್ರತಿಷ್ಠಾನದಿಂದ ಏಪ್ರಿಲ್ 20 ರಿಂದ 26ನೇ ಶನಿವಾರದ ವರೆಗೆ ಶೃಂಗೇರಿ ಹಾಗೂ ಕೊಪ್ಪ ತಾಲೂಕಿನ ಆಯ್ದ ಸ್ಥಳಗಳಲ್ಲಿ ಪ್ರತಿಷ್ಠಿತ “ತಾಳ ಮದ್ದಳೆ ಸಪ್ತಾಹ” ಹಮ್ಮಿಕೊಂಡಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮದ ಸಂಘಟನಾ ಸಂಚಾಲಕರಾದ ಪ್ರವರ ಇವೆಂಟ್ಸ್ʼನ ಶ್ರೀಹರ್ಷ ಸೂರಳಿ ಹಾಗೂ ಶುಭಶ್ರೀ ಹರ್ಷ ತಿಳಿಸಿದ್ದಾರೆ.
ಇದನ್ನೂ ಓದಿ: ಯಜಮಾನಿಯರಿಗೆ ಸಿಹಿಸುದ್ದಿ; ಫೆಬ್ರವರಿ, ಮಾರ್ಚ್ 2 ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ

ಇದೆ ಏಪ್ರಿಲ್ 24ರಂದು ಸಪ್ತಾಹದ 5ನೇ ದಿನದ ಕಾರ್ಯಕ್ರಮವನ್ನು ಹರಿಹರಪುರ ಸಮೀಪದ ಸೂರ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಪ್ರವರ ಇವೆಂಟ್ಸ್ ನ ಸಹಯೋಗದಲ್ಲಿ ನಡೆಯುತ್ತಿದ್ದು, (ಹಳೆಮಕ್ಕಿ ರಾಮ ವಿರಚಿತ) ಶ್ರೀ ಕೃಷ್ಣಾರ್ಜುನ ಕಾಳಗ” ಎಂಬ ಪ್ರಸಂಗವನ್ನು ಆಯೋಜಿಸಲಾಗಿದೆ.

ಶ್ರೀ ಕಿರಣಕೆರೆ ಪ್ರತಿಷ್ಠಾನ (ರಿ)ದ ಅಧ್ಯಕ್ಷರು, ಉಪನ್ಯಾಸಕರು, ಪ್ರಸಿದ್ಧ ಪ್ರಸಂಗಕರ್ತರು, ಅರ್ಥದಾರಿಗಳು ಆದ ಕಲಾಶ್ರೀ I ಪ್ರೊ. ಪವನ್ ಕಿರಣಕೆರೆ ಇವರ ನೇತೃತ್ವದಲ್ಲಿ ಈ ಅಧ್ಭುತ ಪ್ರಸಂಗ ಮೂಡಿಬರಲಿದ್ದು, ಯಕ್ಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಪ್ತಾಹದ ಎಲ್ಲಾ ದಿನಗಳ ಕಾರ್ಯಕ್ರಮಕ್ಕೆ ಆಗಮಿಸಬೇಕೇಂದು ಕಾರ್ಯಕ್ರಮದ ಸಂಘಟನಾ ಸಂಚಾಲಕರಾದ ಪ್ರವರ ಇವೆಂಟ್ಸ್ʼನ ಶ್ರೀಹರ್ಷ ಸೂರಳಿ ಹಾಗೂ ಶುಭಶ್ರೀ ಹರ್ಷ ತಿಳಿಸಿದ್ದಾರೆ.
ಇದನ್ನೂ ಓದಿ: ರೇಷನ್ ಕಾರ್ಡ್ ಹೊಂದಿರುವವರು ಈ ಸುದ್ದಿ ಓದಿ; ಆಹಾರ ಇಲಾಖೆಯಿಂದ ಮುಖ್ಯ ಮಾಹಿತಿ
ಇನ್ನು ಈ ಸಪ್ತಾಹವು ಏಪ್ರಿಲ್ 20 ರಂದು- ನೆಮ್ಮಾರು ವಿನಲ್ಲಿ ಉದ್ಘಾಟನೆಗೊಂಡು, ಏಪ್ರಿಲ್ 21 ಅಂದರೆ ಇಂದು – ತೊರೆಹಡ್ಲು, ಏಪ್ರಿಲ್ 22 – ಮಸಿಗೆ /ಹಾಲ0ದೂರು, ಏಪ್ರಿಲ್ 23 – ಮಾನಗಾರು – ಶೃಂಗೇರಿ, ಏಪ್ರಿಲ್ 24 – ಸೂರಳಿ – ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಏಪ್ರಿಲ್ 25 – ಕೊಪ್ಪ, ಏಪ್ರಿಲ್ 26 – ಹೊಂಬಾಗಿ / ಶೃಂಗೇರಿಯಲ್ಲಿ ಪ್ರಸಂಗದೊಂದಿಗೆ ಸಮಾರೋಪ ಸಮಾರಂಭ ನಡೆಯಲಿದೆ.
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 9970 ಹುದ್ದೆಗೆ ಅರ್ಜಿ ಆಹ್ವಾನ; 10th ವಿದ್ಯಾರ್ಹತೆ, ಆಕರ್ಷಕ ಸಂಬಳ
















