ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ರಾಜ್ಯ ಘಟಕದ ಅಧ್ಯಕ್ಷರಾಗಿ ವಕೀಲ ಎಂ. ಎಚ್. ಸುಧೀರ್ ಕುಮಾರ್ ಮುರೊಳ್ಳಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ʼಗೆ ಅರ್ಜಿ ಸಲ್ಲಿಕೆ ಆರಂಭ!; ಈ ದಾಖಲೆ ಕಡ್ಡಾಯ

ಬೆಂಗಳೂರಿನ ಬ್ಯಾರೀಸ್ ಅಸೋಸಿಯೇಷನ್ ಭವನದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಎಪಿಸಿಆರ್ ಕರ್ನಾಟಕ ರಾಜ್ಯ ಘಟಕವನ್ನು ಸ್ಥಾಪಿಸಲಾಗಿದ್ದು, ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ, ನ್ಯಾಯವನ್ನು ಉತ್ತೇಜಿಸುವ ಮತ್ತು ಕರ್ನಾಟಕದಲ್ಲಿ ಅಂಚಿನಲ್ಲಿರುವ ಸಮುದಾಯಗಳ ಪರವಾಗಿ ವಕಾಲತ್ತು ವಹಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಜಾಬ್ ಆಫರ್; 10th ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ
2025-26ನೇ ಸಾಲಿನ ರಾಜ್ಯ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಸಮಿತಿಯಲ್ಲಿ ಕಾನೂನು ತಜ್ಞರು, ನಿವೃತ್ತ ಅಧಿಕಾರಿಗಳು, ಶಿಕ್ಷಣ ತಜ್ಞರು, ನಾಗರಿಕ ಹಕ್ಕುಗಳ ಹೋರಾಟಗಾರರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಇದ್ದಾರೆ.ʼ
ಇದನ್ನೂ ಓದಿ: ಒಂದೇ ಚಾರ್ಜ್ನಲ್ಲಿ 320 ಕಿ.ಮೀ. ಪ್ರಯಾಣ; ಮತ್ತೊಂದು ಹೊಸ ಸ್ಕೂಟರ್ ಅನಾವರಣ
ಉಪಾಧ್ಯಕ್ಷರಾಗಿ ಹೈಕೋರ್ಟ್ ವಕೀಲೆ ಅಖಿಲಾ ವಿದ್ಯಾಸಂದ್ರ ಮತ್ತು ಮಾಜಿ ಐಜಿಪಿ ಸೈಯದ್ ಉಲ್ಬತ್ ಹುಸೇನ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ವಕೀಲ ಮುಹಮ್ಮದ್ ನಿಯಾಝ್, ಕಾರ್ಯದರ್ಶಿಯಾಗಿ ಸಾಮಾಜಿಕ ಕಾರ್ಯಕರ್ತ ಹುಸೇನ್ ಕೋಡಿಬೆಂಗ್ರೆ, ಜಂಟಿ ಕಾರ್ಯದರ್ಶಿಗಳಾಗಿ ಜೀಶನ್ ಆಕಿಲ್ ಸಿದ್ದಿಕಿ, ವಕೀಲ ಶಾಜೀಹಾ ಪಿ ಮತ್ತು ಕೋಶಾಧಿಕಾರಿಯಾಗಿ ವಕೀಲ ಎನ್.ಕೆ. ಅಬ್ದುಲ್ ಸಲಾಂ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: ಇ-ಖಾತೆ ಕುರಿತು ಮತ್ತೊಂದು ಬಿಗ್ ಅಪ್ಡೇಟ್; ಮಿಸ್ ಮಾಡ್ದೆ ಈ ಸುದ್ದಿ ಓದಿ












