ಕಳಸ: (ನ್ಯೂಸ್ ಮಲ್ನಾಡ್ ವರದಿ) ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಕಳಸದ ಬಿಎಸ್ಎಫ್ ಎಎಸೈ ಯೋಧ ರಾಜಪ್ಪ ಬಿ.ಟಿ ಅವರಿಗೆ ವಿದ್ಯಾರ್ಥಿಯೊಬ್ಬ ಪಾಕೆಟ್ ಮನಿಯನ್ನು ಕೊಟ್ಟು ದೇಶದ ಸೈನಿಕರ ಬಗ್ಗೆ ಗೌರವ ತೋರಿಸಿದ್ದಾನೆ.
ಇದನ್ನೂ ಓದಿ: ಶಾಲಾ ಶಿಕ್ಷಕರು, ಸಿಬ್ಬಂದಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್; ಸರ್ಕಾರದ ಈ ಆದೇಶ ನೋಡಿ

ಕಳಸ ತಾಲ್ಲೂಕಿನ ಹಳುವಳ್ಳಿ ದಂದಾಡಿಯ ಬಿಎಸ್ಎಫ್ ಎಎಸೈ ಯೋಧ ರಾಜಪ್ಪ ಬಿ.ಟಿ ಅವರು ಆಪರೇಷನ್ ಸಿಂಧೂರ ಕಾರ್ಯಚರಣೆಯಲ್ಲಿ ಪಾಲ್ಗೊಂಡು ಗಾಯಗೊಂಡು ತವರಿಗೆ ಮರುಳಿದಾಗ ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ವಿವಿಧ ಇಲಾಖೆಗಳು ಗೌರವ ಸಮರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಕಳಸ ಪ್ರಬೋಧಿನಿ ವಿದ್ಯಾಕೇಂದ್ರದ ಐದನೇ ತರಗತಿ ವಿದ್ಯಾರ್ಥಿ ಅಭಿನವ್ ಒಂದು ವರ್ಷದಿಂದ ಕೂಡಿಟ್ಟ ಪಾಕೆಟ್ ಮನಿಯನ್ನು ಯೋಧ ರಾಜಪ್ಪ ಬಿ.ಟಿ ಅವರಿಗೆ ನೀಡುವ ಮೂಲಕ ದೇಶ ಸೇವೆ ಮಾಡುವ ನಮ್ಮ ಸೈನಿಕರ ಮೇಲಿನ ಅಭಿಮಾನವನ್ನು ತೋರಿಸಿದ್ದಾನೆ. ಈ ವಿದ್ಯಾರ್ಥಿಗಿದ್ದ ದೇಶಾಭಿಮಾನ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 10th ಹಾಗೂ PUC ವಿದ್ಯಾರ್ಥಿಗಳ ಗಮನಕ್ಕೆ; 40,000 ಸ್ಕಾಲರ್ ಶಿಪ್ ಗೆ ಹೀಗೆ ಅರ್ಜಿ ಸಲ್ಲಿಸಿ













