ಜಯಪುರ: ಕಟ್ಟಡ, ನಿವೇಶನ ಆಸ್ತಿಗಳ ಪರಿಷ್ಕೃತ ತೆರಿಗೆಯ ವಿರುದ್ಧ ಬೃಹತ್ ಪ್ರತಿಭಟನೆ ಹಾಗೂ ಬಂದ್ ಗೆ ಕರೆ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಜಯಪುರ ಗ್ರಾಮ ಪಂಚಾಯ್ತಿ ಆವರಣದಲ್ಲಿ 03.02.2024 ಶನಿವಾರದಂದು (ನಾಳೆ) 2023-24ನೇ ಸಾಲಿನಲ್ಲಿ ಕಟ್ಟಡ ಹಾಗೂ ನಿವೇಶನ ಆಸ್ತಿಗಳ ಪರಿಷ್ಕೃತ ತೆರಿಗೆಯ ವಿರುದ್ಧ ವರ್ತರಕರ ಸಂಘ, ಜಯಪುರ ಸಾರ್ವಜನಿಕರು ಹಾಗೂ ನಿವೇಶನ ಮಾಲೀಕರು ಬೃಹತ್ ಪ್ರತಿಭಟನೆ ಹಾಗೂ ಜಯಪುರ ಬಂದ್ ಗೆ ಕರೆ ನೀಡಿದ್ದಾರೆ.

 

ಇದನ್ನೂ ಓದಿ; ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ; ಇಲ್ಲಿದೆ ಜಿಲ್ಲಾವಾರು ಹುದ್ದೆಗಳ ಮಾಹಿತಿ

ಕಂದಾಯ ತೆರಿಗೆ ದುಬಾರಿ ಹಾಗೂ ಜಯಪುರ ಪಟ್ಟಣ ಪ್ರದೇಶದ ರಸ್ತೆ ಅಗಲೀಕರಣ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿರುವುದು ಹಾಗೂ ಕ್ಷೇತ್ರದಾದ್ಯಂತ ಬರ ಇರುವುದರ ಕುರಿತು ಪಂಚಾಯ್ತಿಯ ಆಡಳಿತ ಮಂಡಳಿ ಸ್ಪಂದಿಸದೇ ಇರುವ ಕಾರಣ ಜಯಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ಗ್ರಾಮ ಪಂಚಾಯ್ತಿ ಆವರಣದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಜಯಪುರ ಬಂದ್ ಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ; ಪರಿವರ್ತನೆಗೊಂಡ ಎಸ್ಸಿ-ಎಸ್ಟಿ ಭೂಮಿ ಮಾರಾಟಕ್ಕೆ ಪೂರ್ವಾನುಮತಿ ಬೇಕಿಲ್ಲ: ಹೈಕೋರ್ಟ್

ರಸ್ತೆಗೆ ಉರುಳಿದ ಬೃಹದಾಕಾರದ ಮರದ ದಿಮ್ಮಿಗಳು

 

ಆಲ್ದೂರು: (ನ್ಯೂಸ್ ಮಲ್ನಾಡ್ ವರದಿ) ಟಿಂಬರ್ ಲಾರಿಯಲ್ಲಿ ಮರದ ದಿಮ್ಮಿಗಳು ಸಾಗಿಸುತ್ತಿದ್ದ ವೇಳೆ ಹಗ್ಗ ತುಂಡಾಗಿ ಮರದ ದಿಮ್ಮಿ ಉರುಳಿ ಬಿದ್ದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ನಡೆದಿದೆ.

ಇದನ್ನೂ ಓದಿ; ಕೃಷಿ ಉಪಕರಣ ಪಡೆಯಲು ಅರ್ಜಿ ಆಹ್ವಾನ

 

ಪಟ್ಟಣದ ರಾಜ್ಯ ಹೆದ್ದಾರಿಯ ಅಂಬೇಡ್ಕರ್ ವೃತ್ತದ ತಿರುವಿನಲ್ಲಿ ಟಿಂಬರ್ ಲಾರಿ ಚಿಕ್ಕಮಗಳೂರು ಮಾರ್ಗವಾಗಿ ಚಲಿಸುತ್ತಿರುವಾಗಲೇ ಗೂಟ ಹಾಗೂ ಹಗ್ಗ ಸಡಿಲಗೊಂಡು 5 ಸಿಲ್ವರ್ ಮರದ ದಿಮ್ಮಿಗಳು ಹೆದ್ದಾರಿ ಮೇಲೆ ಉರುಳಿ ಬಿದ್ದಿದೆ. ದ್ವಿಚಕ್ರ ವಾಹನ ಸವಾರರು ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ.

ಇದನ್ನೂ ಓದಿ; ಇಸ್ರೊದಿಂದ ಉದ್ಯೋಗಾವಕಾಶ

ಬಾರಿ ಗಾತ್ರದ ಸರಕುಗಳು ಸಾಗಿಸುವಾಗ ಪರಿಶೀಲಿಸಿ, ವಾಹನ ಚಾಲನೆಗೆ ತರಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.