ಶೃಂಗೇರಿ: ಸಚಿವರ ಆಪ್ತ ಸಹಾಯಕನ ವಿರುದ್ಧ ಲಂಚದ ಆರೋಪ ಮಾಡಿದ್ದ ಸಬ್ ರಿಜಿಸ್ಟಾರ್ ಅಧಿಕಾರಿ ಕರ್ತವ್ಯದಿಂದ ವಜಾ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಉಪನೋಂದಣಿ ಕಚೇರಿಯಲ್ಲಿ ಈ ಹಿಂದೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚೆಲುವರಾಜು ಅವರನ್ನು ಹಿಂದಿನ ಸರ್ಕಾರ ಇವರನ್ನು ಏಕಾಏಕಿ ಸೇವೆಯಿಂದ ವಜಾ ಮಾಡಿದ್ದು, ಈಗಿನ ಸರ್ಕಾರ ತನಿಖೆ ನಡೆಸಿ ಇವರನ್ನು ಪುನಃ ಸೇವೆಗೆ ನಿಯೋಜನೆಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಕ್ರಮ ಕೈಗೊಳ್ಳಲ್ಲಿ ಎಂಬುದು ಸಾರ್ವಜನಿಕರ ಒತ್ತಾಯ ಕೇಳಿ ಬಂದಿದೆ.

 

ಇದನ್ನೂ ಓದಿ; ಕರ್ನಾಟಕ ಅರಣ್ಯ ವೀಕ್ಷಕ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ; ಅರ್ಜಿ ಸಲ್ಲಿಸುವುದು ಹೇಗೆ?; ಅರಣ್ಯ ವೀಕ್ಷಕರ ಹುದ್ದೆಗೆ ವೇತನ ಎಷ್ಟು?

ಏನಿದು ಘಟನೆ:
ಇಲ್ಲಿನ ಉಪನೋಂದಣಿ ಕಚೇರಿಯಲ್ಲಿ ಸ್ಥಿರಾಸ್ಥಿ ನೋಂದಣಿ ಮಾಡಿದ ಖಜಾನೆ 2 ಚಲನ್ ಮೂಲಕ ಸರ್ಕಾರಕ್ಕೆ ಪಾವತಿಗೊಂಡಿದ್ದು ಬಳಿಕ 15-20 ದಿನಗಳ ನಂತರ ಸರ್ಕಾರಿ ಹಣ ತಂತ್ರಾಂಶದಲ್ಲಿ ಪಾವತಿಯನ್ನು ವಿಫಲಗೊಳಿಸಲಾಗಿತ್ತು ಸರ್ಕಾರಕ್ಕೆ ಪಾವತಿಸಿದ ಹಣ ಹಿಂಬಾಗಿಲಿನಿಮದ ವಾಪಾಸ್ ಹಿಂದಿರುಗಿಸಿ ಅಕ್ರಮಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಈ ಬಗ್ಗೆ ನಡೆದ ಭ್ರಷ್ಟಾಚಾರ ಹಗರಣಗಳ ಬಗ್ಗೆ, ಬಿಜೆಪಿ ನೇತೃತ್ವದದ ಹಿಂದಿನ ಸರ್ಕಾರದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಶೃಂಗೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವರಿಗೆ ದೂರು ಸಲ್ಲಿಸುವ ವೇಳೆ ಚೆಲುವರಾಜ್ ಹತ್ತಿರ ಸಚಿವರ ಆಪ್ತ ಸಹಾಯಕ ಗಂಗಾಧರ್ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಅಂದು ದೊಡ್ಡ ಸುದ್ದಿಯಾಗಿತ್ತು.

 

ಇದನ್ನೂ ಓದಿ; ಇಂದಿನ ಅಡಿಕೆ ರೇಟ್ ಎಷ್ಟಿದೆ ಎಂದು ನೋಡಿ ಬೆಟ್ಟೆ, ಗೊರಬಲು, ಸರಕು, ಇಡಿ | 07-10-2023

ಚೆಲುವರಾಜ್ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಆದೇಶ ಮೇರೆಗೆ ಪೊಲೀಸ್ ಎಫ್.ಐ.ಆರ್ ದಾಖಲಿಸಲಾಗಿತ್ತು, ಆದರೆ, ತನಿಖೆಯಲ್ಲಿ ಸರಿಯಾದ ಸಾಕ್ಷ್ಯಗಳಿಲ್ಲವೆಂದು ಪ್ರಕರಣವನ್ನು ಕೈಬಿಡಲಾಗಿತ್ತು. ಇದು ಲಂಚದ ಆರೋಪದ ಕೇಸ್ ಇದರಲ್ಲಿ ಸಾಕ್ಷಿ ನೀಡುವುದು ಹೇಗೆ? ಟ್ರಾಫಿಂಗ್ ಕೇಸ್ ಆಗಿದ್ದಲ್ಲಿ ನಿರ್ದಿಷ್ಟ ಹನದ ಬೇಡಿಕೆ ಬಗ್ಗೆ ಸಾಕ್ಷ್ಯ ನೀಡಬಹುದಿತ್ತು ಬೇಡಿಕೆ ತಂದ ಹಣ ಇಟ್ಟು ಹೋಗಿ ಎಂಬುದಾಗಿತ್ತು. ಇದಕ್ಕೆ ಸಾಕ್ಷ್ಯ ನೀಡುವುದು ಕಷ್ಟ ಮೊಬೈಲ್ ನಲ್ಲಿ ರೇಕಾರ್ಡ್ ಮಾಡಿರುವುದೇ ಸಾಕ್ಷ್ಯ ಎಂದು ತಿಳಿಸಿದರು ರಾಜಕೀಯ ಪ್ರಭಾವದಿಂದ ಪೊಲೀಸರು ಕಾಟಾಚಾರದ ತನಿಖೆ ನಡೆಸಿ ಕೇಸನ್ನು ಕೈ ಬಿಡಲಾಗಿತ್ತು. ಈ ಹಿನ್ನಲೆಯಲ್ಲಿ ಲಂಚದ ಆರೋಪ ಹೊಡಸಿದ ಕಾರಣ ಉಪನೋಂದಣಿ ಅಧಿಕಾರಿಗಳಿಗೆ ಮುಳುವಾಗಿ ಸೇವೆಯಿಂದ ವಜಾಗೊಳಿಸಲಾಗಿತ್ತು.

 

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-07.10.2023

ವ್ಯವಸ್ಥಿತವಾಗಿ ಪಿತೂರಿ ನಡೆದಿತ್ತು ಚೆಲುವರಾಜ್ ವಿರುದ್ಧ:
ಮೈಸೂರು ಮಂಡ್ಯದಲ್ಲಿ ಉಪನೋಂದಣಿ ಕಚೇರಿಯಲ್ಲಿ ಅಧಿಕಾರಿಯಾಗಿ ಚೆಲುವರಾಜ್ ಕರ್ತವ್ಯ ನಿರ್ವಹಿಸಿತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಜಿಲ್ಲಾ ಖಜಾನೆ, ಸರ್ಕಾರಿ ವ್ಯವಹಾರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ನಡೆಯುತ್ತಿದ್ದ ಅಕ್ರಮ ವ್ಯವಹಾರಗಳನ್ನು ಬಯಲಿಗೆಳೆದಿದ್ದರು. ಉಪಖಜಾನೆಯಲ್ಲಿ ಅವ್ಯವಹಾರಗಳು ಪಿಡಿ ಖಾತೆಯಡಿ ನಡೆಯುತ್ತಿರುವುದನ್ನು ಮನಗಂಡು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನದಿಕೃತ ಪಿಡಿ ಖಾತೆಗಳನ್ನು ರದ್ದುಪಡಿಸಿಲು ಆದೇಶಿಸಿದ್ದರು 2005/2006 ರಲ್ಲಿ ಸರ್ಕಾರಕ್ಕೆ ಸೇರಬೇಕಿದ್ದ ಹಣವನ್ನು ಬ್ಯಾಂಕಿಗೆ ಪಾವತಿಯಾದ ನಂತರ ಚಲನ್ ತಿದ್ದಿ ಸರ್ಕಾರಕ್ಕೆ ಲಕ್ಷಾಂತರ ವಂಚನೆಯನ್ನು ಬಯಲು ಮಾಡಿ ಸರ್ಕಾರದ ಗಮನ ಸೆಳೆದಿದ್ದರೂ ದೊಡ್ಡ ಹಗರಣವನ್ನು ಬಯಲುಮಾಡಿದ ಇವರನ್ನು ಕೇಸಿನೊಳಗೆ ಸೇರಿಸಿ ನ್ಯಾಯಾಲಯದಲ್ಲಿ ಶಿಕ್ಷೆ ಆಗಿವಂತೆ ವ್ಯವಸ್ಥಿತ ಪಿತೂರಿ ಮಾಡಲಾಗಿತ್ತು. ತೀರ್ಪಿನ ಹಿನ್ನಲೆಯಲ್ಲಿ ಇವರನ್ನು ಸೇವೆಯಿಂದ ವಜಾಗೊಳಿಸಿ ಆದೇಶಿಸಲಾಗಿತ್ತು ಆದರೆ ಚೆಲವರಾಜ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಇವರನ್ನು ಸೇವೆಯಿಂದ ವಜಾ ಮಾಡಿರುವುದು ಸರಿಯಲ್ಲ ಎಂಬುದು ಸಾರ್ವಜನಿಕರು ಅಭಿಪ್ರಾಯವಾಗಿದೆ.

 

ಶೃಂಗೇರಿ: ಕೆ.ಎಸ್.ಆರ್.ಟಿ.ಸಿ ಬಸ್ ಗೆ ಡಿಕ್ಕಿ ಹೊಡೆದ ಬೈಕ್ ಸವಾರ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕೆ.ಎಸ್.ಆರ್.ಟಿ.ಸಿ ಬಸ್ ಗೆ ಬೈಕ್ ಸವಾರ ಡಿಕ್ಕಿ ಹೊಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕುಂಚೆಬೈಲ್ ಸಮೀಪ ನಡೆದಿದೆ.

ಇದನ್ನೂ ಓದಿ; ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ ಈ ದಿನಾಂಕದಿಂದ ಶರನ್ನವರಾತ್ರಿ ಆರಂಭ

ನಿನ್ನೆ (ಶುಕ್ರವಾರ)ಸಂಜೆ ಸುಮಾರು 6.30 ರ ಹೊತ್ತಿಗೆ ಈ ಘಟನೆ ನಡೆದಿದ್ದು, ಬೈಕ್ ನ ಮುಂಭಾಗ ನಜ್ಜುಗುಜ್ಜಾಗಿದೆ. ಇನ್ನು ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ; ಅಡಿಕೆ ಸಿಪ್ಪೆಯಿಂದ ಅಂದದ ಕೋಟು; ಕೊಳೆತು ಮಣ್ಣಿಗೆ ಸೇರುವ ಅಡಿಕೆ ಸಿಪ್ಪೆಯನ್ನು ಒಳ್ಳೆಯ ಉಪಯೋಗಕ್ಕೆ ತರುವ ಕೆಲಸ; ಗ್ರಾಮೀಣ ಮಹಿಳೆಯರ ಉದ್ಯೋಗ ಸೃಷ್ಟಿಗೂ ಅನುಕೂಲ

ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.