ಶೃಂಗೇರಿ ಮೋದಿ ಪರಿವಾರದಿಂದ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂಬ ಸಂಕಲ್ಪ ತೊಟ್ಟು, ಲೋಕ ಕಲ್ಯಾಣ ಸಂಕಷ್ಟ ಪರಿಹಾರಕ್ಕಾಗಿ ಪಾದಯಾತ್ರೆ ಮತ್ತು ರಾಮ ನಾಮ ಸಂಕೀರ್ತನೆ ಮಾಡಿದರು.


ಇದನ್ನೂ ಓದಿ; ರಾಜ್ಯದ ರೈತರ ಗಮನಕ್ಕೆ; ಸರ್ಕಾರದ ಸೌಲಭ್ಯ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ

ಸಂಕಷ್ಟ ಚತುರ್ಥಿ ದಿನವಾದ ನೆನ್ನೆ ಶೃಂಗೇರಿ ಮೋದಿ ಪರಿವಾರದ ಶ್ರೀ ರಾಮ ಭಕ್ತರು ಶೃಂಗೇರಿ ಶ್ರೀ ಕೆರೆಆಂಜನೇಯ ಸ್ವಾಮಿ ದೇವಸ್ಥಾನದಿಂದ ಹಿಂಬರವಳ್ಳಿ ಗಣಪತಿ ದೇವಸ್ಥಾನದವರೆಗೆ 8 ಕಿ ಮೀ ಕಾಲ್ನಡಿಗೆ ಜಾಥಾದಲ್ಲಿ ಸಾಗಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು ಲೋಕ ಕಲ್ಯಾಣಕ್ಕಾಗಿ ಮತ್ತು ಸಂಕಷ್ಟ ಪರಿಹಾರಕ್ಕಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಶ್ರೀ ರಾಮ ನಾಮ ಭಜನೆಯಲ್ಲಿ ಪಾಲ್ಗೊಂಡರು.

ಇದನ್ನೂ ಓದಿ; ಇಂತಹ ರೈತರ ಖಾತೆಗೆ ಜಮಾ ಆಗಲಿದೆ 10 ಸಾವಿರ ರೂಪಾಯಿ!; ಯಾರಿಗೆ, ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
ದೇಶದ ರಕ್ಷಣೆ ಹಾಗೂ ಅಭಿವೃದ್ಧಿಗೆ ಮೋದಿ ಅನಿವಾರ್ಯವಾಗಿದ್ದಾರೆ, ಜನಸಾಮಾನ್ಯರಿಗೆ ಮೋದಿಯ ಯೋಜನೆಗಳು ನೆನಪಿನಲ್ಲಿ ಇಡಬೇಕಾದವು, ವಿಶ್ವದೆದುರು ಭಾರತದ ಗತವೈಭವ ಮರಳಿ ಬರುವ ಮುನ್ಸೂಚನೆ ಇರುವಾಗ ಮೋದಿಯ ಬೆನ್ನಿಗೆ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ ಎಂದು ಬಿಜೆಪಿ ಮುಖಂಡ ವೇಣುಗೋಪಾಲ್ ಹೇಳಿದರು.
ಇದನ್ನೂ ಓದಿ; ಕೃಷಿ ವಿಜ್ಞಾನ ವಿವಿಯಲ್ಲಿ ಬೋಧಕ ಹುದ್ದೆ; ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಎಸ್ ಸಿ ಮೋರ್ಚಾ ವಕ್ತಾರ ಬಿ ಶಿವಶಂಕರ್ (ಶೃಂಗೇರಿ ಶಿವಣ್ಣ), ಬಿಜೆಪಿ ಮಂಡಲ ಕಾರ್ಯದರ್ಶಿ ವೇಣುಗೋಪಾಲ್, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ವಿ ಶೆಟ್ಟಿ, ದಿವೀರ್ ಮಲ್ನಾಡ್, ನೂತನ್ ಸೂರ್ಯ, ರಾಧಿಕಾ, ಸುನಿಲ್, ಭೋಜು ಕುಲಾಲ್, ಶ್ರೇಯಸ್ ನಾಗರಾಜ್ ಶೆಟ್ಟಿ, ಕೆರೆಮನೆ ಸಂತೋಷ್, ಸಚಿನ್ ಮತ್ತಿತರರು ಪಾಲ್ಗೊಂಡರು.
ಅಡಿಕೆ ಮಾರಿ ತಂದ ಹಣವನ್ನು ವಶಪಡಿಸಿಕೊಂಡ ಅಧಿಕಾರಿಗಳು
ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗಡಿಕಲ್ಲಿನಲ್ಲಿ ಅಡಿಕೆ ಮಾರಿ ಬಂದ ಹಣವನ್ನು ಮನೆಗೆ ತೆಗೆದುಕೊಂಡು ಹೋಗುವಾಗ ಅಧಿಕಾರಿಗಳು ವಶಪಡಿಸಿಕೊಂಡು ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ನೀಡಲಾಗಿದೆ.
ಮಲೆನಾಡು ಭಾಗದಲ್ಲಿ ರೈತರು ಅಡಿಕೆ ಮಾರುವ ಸಮಯವಾಗಿದ್ದು, ಅಡಿಕೆ ಮಾರಿ ಬಂದ ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಚುನಾವಣಾ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ ಕಾರಣ ವಶಪಡಿಸಿಕೊಳ್ಳಲಾಗುತ್ತಿದೆ. ಚುನಾವಣೆ ಹಿನ್ನೆಲೆ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ಇವರ ಸ್ವಾರ್ಥದಿಂದ ಸಾಮಾನ್ಯ ಜನರಿಗೆ, ರೈತರಿಗೆ ತುರ್ತು ಸಂದರ್ಭದಲ್ಲಿ ಕೂಡ ತೊಂದರೆಯಾಗುತ್ತಿದೆ. ತಕ್ಷಣ ಜಿಲ್ಲಾಡಳಿತ, ಚುನಾವಣಾ ಆಯೋಗ ಮತ್ತು ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ಸೂಕ್ತ ಪರಿಹಾರ ನೀಡಬೇಕೆಂದು ತೀರ್ಥಹಳ್ಳಿ ಯುವ ಮುಖಂಡ ಪಣಿರಾಜ್ ಕಟ್ಟೆಹಕ್ಕಲು ಆಗ್ರಹಿಸಿದ್ದಾರೆ.
ಅಷ್ಟೇ ಅಲ್ಲದೆ ಮಾರ್ಚ್ ತಿಂಗಳಾಗಿದ್ದು, ಗಣಕ ವರ್ಷದ ಅಂತ್ಯವಿರುವುದರಿಂದ ಸೊಸೈಟಿ, ಬ್ಯಾಂಕ್ ಗಳಲ್ಲಿ ಸಾಲ ಪಾವತಿ ಮಾಡುವವರು ಸಹ ಹೆಚ್ಚಾಗಿ ರೈತರೇ ಆಗಿರುವುದರಿಂದ ಅದನ್ನು ಕಟ್ಟಲು ಸಹ ಹಣ ತೆಗೆದುಕೊಂಡು ಹೋಗಲಾಗುತ್ತಿಲ್ಲ.
ಒಂದೆರಡು ಲಕ್ಷಕ್ಕೆ ಅನಗತ್ಯ ಕಿರಿಕಿರಿ ಮಾಡದೆ ನಿಯಮ ಸಡಿಲಿಕೆ ಮಾಡಿ ರೈತರಿಗೆ ಉಂಟಾಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ; ಈ ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್












