ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ)ತುರ್ತು ರೋಗಿಗಳ ಆರೋಗ್ಯ ಕಾಪಾಡಲೆಂದು ಇರುವ ‘108’ ಆಂಬ್ಯುಲೆನ್ಸ್ ಕೆಟ್ಟು ನಿಂತು ನಾಲ್ಕು ತಿಂಗಳು ಆದರೂ ಕೂಡ ನಿಂತಲ್ಲೇ ನಿಂತಿದ್ದು, ರೋಗಿಗಳು ಪರದಾಡುವಂತಾಗಿದ್ದರು.
ಇದನ್ನೂ ಓದಿ: ಮಲೆನಾಡು ಭಾಗದಲ್ಲಿ ಮತ್ತೆ ಇಬ್ಬರಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ರೋಗಿಗಳ ಸಂಖ್ಯೆ 6ಕ್ಕೆ ಏರಿಕೆ

ಟೈರ್ ಪಂಚರ್ ಆಗಿ ದುರಸ್ತಿಗೆ ಬಂದಿತ್ತು. ಅಂದಿನಿಂದ ಇಂದಿಗೂ ಒಂದು ಮೂಲೆಯಲ್ಲಿ ಬಿಸಿಲಿಗೆ ಮೈಯೊಡ್ಡಿ ನಿಂತಿತ್ತು. ಜನತೆಯ ತುರ್ತು ಸೇವೆಗೆ ಆಂಬ್ಯುಲೆನ್ಸ್ ದೊರೆಯದಿದ್ದಾಗ ಖಾಸಗಿ ಆಂಬ್ಯುಲೆನ್ಸ್ಗಳ ಮೊರೆ ಹೋಗಬೇಕಾಗಿತ್ತು. ಇದರಿಂದಾಗಿ ಬಡವರಿಗೆ ತೀರಾ ಅನಾನುಕೂಲ ಉಂಟಾಗಿತ್ತು.
ಇದನ್ನೂ ಓದಿ: ಆಸ್ತಿ ಮಾಲೀಕರ ಗಮನಕ್ಕೆ; ಇ-ಖಾತಾ ಪಡೆಯುವುದು ಇನ್ನಷ್ಟು ಸುಲಭ; ಇಲ್ಲಿದೆ ನೋಡಿ ಸುಲಭ ಹಂತ
ಈ ಬಗ್ಗೆ ನ್ಯೂಸ್ ಮಲ್ನಾಡ್ ವಿಶೇಷ ವರದಿ ಬಿತ್ತರಿಸಿತ್ತು.
ಅದಾದ ಒಂದೇ ದಿನದಲ್ಲಿ ಆಂಬುಲೆನ್ಸ್ ಗೆ ಚಿಕಿತ್ಸೆ ದೊರಕಿದ್ದು ಟೈರ್ ಅಳವಡಿಸಿದ್ದು ಜೀವರಕ್ಷಕ ವಾಹನ ಪುನಃ ಸಂಚಾರ ಪ್ರಾರಂಭಿಸಿದೆ.

ಇದನ್ನೂ ಓದಿ: ಇನ್ಮುಂದೆ ಇಂತಹವರಿಗೆ ಸಿಗಲ್ಲ ರೇಷನ್!, ಯಾಕೆ ಗೊತ್ತಾ?; ರೇಷನ್ ಕಾರ್ಡ್ ಹೊಂದಿರುವವರು ಮಿಸ್ ಮಾಡ್ದೆ ಈ ಸುದ್ದಿ ಓದಿ












