
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಈ ಕ್ಷೇತ್ರದಿಂದ ಜಯಪ್ರಕಾಶ್ ಹೆಗ್ಡೆ ಹೆಸರು ಮುಂಚೂಣಿಗೆ ಬರುತ್ತಿದ್ದಂತೆ, ಮತ್ತೊಬ್ಬ ಪ್ರಬಲ ಟಿಕೆಟ್ ಆಕಾಂಕ್ಷಿ ಸುಧೀರ್ ಮುರೊಳ್ಳಿ ಅವರಿಗೆ ಟಿಕೆಟ್ ನೀಡುವಂತೆ ಒತ್ತಡ ಹೆಚ್ಚಿದೆ. ಈ ಕುರಿತು ಶೃಂಗೇರಿಯಲ್ಲಿ ಸುಧೀರ್ ಮುರೊಳ್ಳಿಗೆ ಲೋಕಸಭೆ ಟಿಕೆಟ್ ನೀಡಲಿ ಎಂದು ಸಭೆ ನಡೆಸಲಾಯಿತು.
ಇದನ್ನೂ ಓದಿ; ಮಹಿಳಾ ದಿನಾಚರಣೆ ದಿನ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್; LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ

ಕೆಪಿಸಿಸಿ ವಕ್ತಾರರಾಗಿರುವ ಸುಧೀರ್ ಮುರೊಳ್ಳಿ, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ಮಾಧ್ಯಮ ವಿಶ್ಲೇಷಕರಾಗಿ, ನಾಯಕತ್ವ ಮತ್ತು ತರಬೇತಿ ವಿಭಾಗದ ಸದಸ್ಯರಾಗಿ ಪಕ್ಷದ ಕೆಲಸ ಮಾಡಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಅವರು ಪರಿಚಿತರು. ಉಡುಪಿ ಚಿಕ್ಕಮಗಳೂರಿನ ಎಲ್ಲಾ ರೈತ, ದಲಿತ, ಕಾರ್ಮಿಕ ಚಳುವಳಿಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಮುರೊಳ್ಳಿ ಅವರಿಗೆ ಎಲ್ಲಾ ಪಕ್ಷಗಳಲ್ಲಿ ಹಿತೈಷಿಗಳಿದ್ದಾರೆ. ತುಳು, ಕನ್ನಡ ಮತ್ತು ಕುಂದಾಪುರ ಕನ್ನಡ ಬಲ್ಲವರಾಗಿರುವ ಅವರು ಜನ ಸಮುದಾಯವನ್ನು ಸೆಳೆಯಬಲ್ಲರು ಎಂದು ಈ ಹಿಂದೆ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದರು. ಇದರ ಭಾಗವಾಗಿಯೇ ಸುಧೀರ್ ಮುರೊಳ್ಳಿ ಗೆ ಟಿಕೆಟ್ ನೀಡುವಂತೆ ಶೃಂಗೇರಿಯಲ್ಲಿ ಸಭೆ ನಡೆಸಿ ರಾಜ್ಯದ ಹಾಗೂ ರಾಷ್ಟ್ರೀಯ ನಾಯಕರನ್ನು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ; RDPR ಇಲಾಖೆಯಿಂದ ಉದ್ಯೋಗ; ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೇಮಕಾತಿ; ಓಂಬುಡ್ಸ್ ಪರ್ಸನ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮೂಡಿಗೆರೆ: KSRTC ಬಸ್ ನಲ್ಲಿ ಬ್ರೇಕ್ ಫೇಲ್ : ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಬ್ರೆಕ್ ಫೈಲ್ ಆಗಿ ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ.
ಇದನ್ನೂ ಓದಿ; ಮಹಿಳೆಯರಿಗೆ 15,000 ಸಿಗುವ ಮತ್ತೊಂದು ಬಂಪರ್ ಯೋಜನೆ!; ಇಲ್ಲಿದೆ ಮಾಹಿತಿ
ಇದನ್ನೂ ಓದಿ; ಕೊನೆಗೂ ಅಂತ್ಯ ಕಂಡ ಶೃಂಗೇರಿಯ ಪೋಕ್ಸೋ ಪ್ರಕರಣ; ಬಾಲಕಿಯ ತಾಯಿ ಹಾಗೂ ಮೂವರು ಕಾಮಾಂಧರು ಫಿಕ್ಸ್ : 49 ಆರೋಪಿಗಳಿಗೆ ರಿಲೀಫ್
ಇನ್ನು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಸಂತೋಷ್ ಅವರ ಸಮಯ ಪ್ರಜ್ಞೆಗೆ ಬಣಕಲ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಿದ್ದಿಕ್ ಹಾಗೂ ಬಸ್ಸಿನ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.













