ಬೆಳ್ಳಂಬೆಳಗ್ಗೆ ಮರಿ ಕಾಡಾನೆ ಎಂಟ್ರಿ : ಬಿಂದಾಸ್‌ ಓಡಾಟ

ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಪೊನ್ನಂಪೇಟೆಯಲ್ಲಿ ಗಜರಾಜನ ಓಡಾಟಕ್ಕೆ ಜನರು ಶಾಕ್ ಆಗಿದ್ದು, ಶನಿವಾರ ಬೆಳ್ಳಂಬೆಳಗ್ಗೆ ಮರಿ ಕಾಡಾನೆಯೊಂದು ಎಂಟ್ರಿ ಕೊಟ್ಟಿದೆ.

 

ಇದನ್ನೂ ಓದಿ; ಮಹಿಳಾ ದಿನಾಚರಣೆ ದಿನ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್; LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ

 

ನ್ಯಾಯಾಲಯ ಆವರಣ, ತಾಲೂಕು ಕಚೇರಿ ಜೊತೆಗೆ ಅರಣ್ಯ ಕಾಲೇಜು ಕಡೆ ಎಲ್ಲಾ ಓಡಾಡಿದ ಕಾಡಾನೆಯು ಪೆಟ್ರೋಲ್ ಬಂಕ್ ಬಳಿ ಹೋಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನೆಯನ್ನು ಪುನಃ ವಾಪಸ್ ಕಳಿಸಿಲು ಹರಸಾಹಸ ಪಟ್ಟರು. ಇನ್ನು ಜನರು ಹೊರಗೆ ಓಡಾಡುವಾಗ ಎಚ್ಚರವಾಗಿ ಇರುವಂತೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ; RDPR ಇಲಾಖೆಯಿಂದ ಉದ್ಯೋಗ; ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೇಮಕಾತಿ; ಓಂಬುಡ್ಸ್‌ ಪರ್ಸನ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಮೂಡಿಗೆರೆ: KSRTC ಬಸ್ ನಲ್ಲಿ ಬ್ರೇಕ್‌ ಫೇಲ್ : ಚಾಲಕನ‌ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಬ್ರೆಕ್ ಫೈಲ್ ಆಗಿ ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ.

ಇದನ್ನೂ ಓದಿ; ಮಹಿಳೆಯರಿಗೆ 15,000 ಸಿಗುವ ಮತ್ತೊಂದು ಬಂಪರ್ ಯೋಜನೆ!; ಇಲ್ಲಿದೆ ಮಾಹಿತಿ

ಚಿಕ್ಕಮಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್, ಚಾರ್ಮಾಡಿ ಘಾಟ್ ನಲ್ಲಿ ಬ್ರೆಕ್ ಫೈಲ್ ಆಗಿದೆ. ತಕ್ಷಣವೇ ಎಚ್ಚೆತ್ತ ಬಸ್ ಚಾಲಕ ಡಿವೈಡರ್ ಗೆ ಡಿಕ್ಕಿ ಹೊಡೆದು ಬಸ್ ನಿಲ್ಲಿಸಿದ್ದಾರೆ. ಇದರಿಂದಾಗಿ ಬಸ್ಸಿನಲ್ಲಿದ್ದ 70 ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ;  ಕೊನೆಗೂ ಅಂತ್ಯ ಕಂಡ ಶೃಂಗೇರಿಯ ಪೋಕ್ಸೋ ಪ್ರಕರಣ; ಬಾಲಕಿಯ ತಾಯಿ ಹಾಗೂ ಮೂವರು ಕಾಮಾಂಧರು ಫಿಕ್ಸ್ : 49 ಆರೋಪಿಗಳಿಗೆ ರಿಲೀಫ್

ಇನ್ನು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಸಂತೋಷ್ ಅವರ ಸಮಯ ಪ್ರಜ್ಞೆಗೆ ಬಣಕಲ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಿದ್ದಿಕ್ ಹಾಗೂ ಬಸ್ಸಿನ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.