ಶೃಂಗೇರಿ: ಭಾವಗೀತೆಗಳು ಮನುಷ್ಯನನ್ನು ಸುಸಂಸ್ಕೃತವಾಗಿಸುತ್ತವೆ-ಮೋಹನ್ ರಾಜಣ್ಣ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಭಾವಗೀತೆಗಳು ಮನುಷ್ಯನನ್ನು ಸುಸಂಸ್ಕೃತವಾಗಿಸುತ್ತವೆ ಎಂದು ಪೊಲೀಸ್ ಉಪ ಠಾಣಾಧಿಕಾರಿ ಮೋಹನ್ ರಾಜಣ್ಣ ಹೇಳಿದರು.


ಇದನ್ನೂ ಓದಿ; ಇ-ಖಾತೆ ಪಡೆಯುವವರಿಗೆ ಮುಖ್ಯ ಮಾಹಿತಿ; ಇಲ್ಲಿದೆ ಕಂಪ್ಲೀಟ್‌ ಡಿಟೈಲ್ಸ್


ಶೃಂಗೇರಿಯ ಸಚ್ಚಿದಾನಂದಪುರದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಭಾವಗೀತೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾವನೆಗಳಿಗೂ ಮಾನವನಿಗೂ ನಿಕಟ ಸಂಬಂಧವಿದೆ. ಮನಸ್ಸಿನ ಭಾವನೆಗಳು ಮೂರ್ತರೂಪ ತಾಳಿ ರಾಗ, ತಾಳ, ಲಯ ಬದ್ಧವಾಗಿ ಹೊರ ಹೊಮ್ಮಿದಾಗ ಭಾವಗೀತೆಗಳು ಸೃಷ್ಟಿಯಾಗುತ್ತವೆ. ಭಾವನೆಗಳಿಂದ ತುಂಬಿದ ಭಾವಗೀತೆಗಳನ್ನು ಕೇಳುತ್ತಾ ಅದರ ಒಳ ಹರಿವುಗಳನ್ನು ಅರಿತುಕೊಂಡಾಗ ಮನುಷ್ಯನ ಮನಸ್ಸು ವಿಕಸಿತಗೊಳ್ಳುತ್ತದೆ ಎಂದರು.


ಇದನ್ನೂ ಓದಿ; ರೈತರ ಗಮನಕ್ಕೆ; ತೋಟಗಾರಿಕೆ ಬೆಳೆ ಬೆಳೆಯಲು ಅರ್ಜಿ ಆಹ್ವಾನ


ಇಂಗ್ಲಿಷ್‌ ಸಾಹಿತ್ಯದ ವಿಪುಲ ಪ್ರಕಾರಗಳ ಅರಿವು ನಮ್ಮಲ್ಲಿ ಭಾವಗೀತೆಗಳ ಸೃಷ್ಟಿಗೆ ಕಾರಣವಾಯಿತು. ಬಿ.ಎಂ.ಶ್ರೀಯವರ ಇಂಗ್ಲಿಷ್‌ ಗೀತೆಗಳು, ಕನ್ನಡದಲ್ಲಿ ಮಾನವನ ವಿವಿಧ ಮನೋಭೂಮಿಕೆಗಳು ಭಾವಗೀತೆಗಳಾಗಿ ಬರುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಕೆಎಸ್‌ನ, ಕುವೆಂಪು, ಬೇಂದ್ರೆ, ವಿ.ಸೀ., ಪುತಿನ ಮೊದಲಾದವರಿಂದ ಅದು ಬೆಳೆದು ಕಾವ್ಯ ರಸಿಕರ ಮನಸ್ಸನ್ನು ಆವರಿಸಿಕೊಂಡು ಕನ್ನಡದಲ್ಲಿ ಭಾವಗೀತೆ ಸಾಹಿತ್ಯ ಪ್ರಕಾರವನ್ನು ಸಮೃದ್ಧಗೊಳಿಸಿತ್ತು ಎಂದು ಅವರು ಹೇಳಿದರು.


ಇದನ್ನೂ ಓದಿ; ಪಡಿತರ ಚೀಟಿದಾರರಿಗೆ ಬಿಗ್ ಶಾಕ್; ಜಾರಿಗೆ ಬರಲಿವೆ ಈ ಹೊಸ ನಿಯಮಗಳು!


ಇನ್ನು ಈ ಭಾವಗೀತೆ ಕಾರ್ಯಕ್ರಮ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಿಜಿಎಸ್‌ ಶೃಂಗೇರಿಯ ವಿದ್ಯಾರ್ಥಿ ಕು.ಅಚಲ, ದ್ವಿತೀಯ ಬಹುಮಾನ ಜ್ಞಾನಭಾರತಿಯ ವಿದ್ಯಾರ್ಥಿ ಕು. ಪೂರ್ಣಶ್ರೀ ಭಟ್‌, ತೃತೀಯ ಬಹುಮಾನವನ್ನು ಜೇಸೀಸ್‌ ಶಾಲೆಯ ವಿದ್ಯಾರ್ಥಿ ಕು. ಅನ್ಯಾತ ಎನ್.ಕೆ ಪಡೆದುಕೊಂಡಿದ್ದಾರೆ.


ಇದನ್ನೂ ಓದಿ; ಯಜಮಾನಿಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್; ಏನದು? ಮಹಿಳೆಯರೇ ಮಿಸ್‌ ಮಾಡ್ದೆ ಈ ಸುದ್ದಿ ಓದಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.