ತೀರ್ಥಹಳ್ಳಿ: ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಯುವ ಕಾಂಗ್ರೆಸ್ ಬಿಡಬೇಕು- ಬಿಜೆಪಿ ಯುವ ಮೋರ್ಚಾ ವಾಗ್ದಾಳಿ

ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಮಾಡುವುದನ್ನು ಯುವ ಕಾಂಗ್ರೆಸ್ ಬಿಡಬೇಕು. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಕಾಂಗ್ರೆಸ್ ವಕ್ತಾರರು ಮಾಡುತ್ತಿದ್ದಾರೆ ಎಂದು ಆದರ್ಶ ಹುಂಚದಕಟ್ಟೆ ವಿರುದ್ಧ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಸಂತೋಷ್ ದೇವಾಡಿಗ ವಾಗ್ದಾಳಿ ನಡೆಸಿದರು.


ಇದನ್ನೂ ಓದಿ; ಇ-ಖಾತೆ ಪಡೆಯುವವರಿಗೆ ಮುಖ್ಯ ಮಾಹಿತಿ; ಇಲ್ಲಿದೆ ಕಂಪ್ಲೀಟ್‌ ಡಿಟೈಲ್ಸ್


ಬುಧವಾರ ಪಟ್ಟಣದ ಮಯೂರ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದಸರಾ ಸಭೆಯಲ್ಲಿ ಬಿಜೆಪಿ ಅಧ್ಯಕ್ಷರನ್ನು ಕೂರಿಸಿದ್ದಾರೆ ಎಂದು ಮಾತನಾಡಿದ್ದಾರೆ ಬಿಜೆಪಿ ಅಧ್ಯಕ್ಷರಾಗಿ ಸಭೆಯಲ್ಲಿ ಕೂತಿದ್ದಲ್ಲ, ಅವರು ದಸರಾ ಉಪಾಧ್ಯಕ್ಷರು ಹಾಗಾಗಿ ಸಭೆಯಲ್ಲಿ ಕುಳಿತಿದ್ದರು.

ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರು ಸಂದೇಶ ಅಲ್ಲ ನಂಜೇಶ ಎಂದು ಹೇಳಿದ್ದಾರೆ, ಸಂದೇಶ್ ಜವಳಿ 20 ವರ್ಷಗಳಿಂದ ಪಟ್ಟಣ ಪಂಚಾಯತ್ ಗೆ ನಿರಂತರವಾಗಿ ಆಯ್ಕೆ ಆಗುತ್ತಿದ್ದಾರೆ. ಅವರು ಯಾವುದೇ ಚುನಾವಣೆ ಸ್ಪರ್ಧೆ ಮಾಡಿದರೂ ಗೆಲುತ್ತಾರೆ. ಅವರನ್ನು ಗೆಲುವನ್ನು ತಡೆದುಕೊಳ್ಳಲು ಈ ಯುವ ಕಾಂಗ್ರೆಸ್ ಗೆ ಆಗುತ್ತಿಲ್ಲ. ನಂಜು ಇರುವುದು ಕಾಂಗ್ರೆಸ್ ನವರ ಹತ್ತಿರ ಇನ್ನೊಬ್ಬರ ಮೇಲೆ ಉಗುಳುತ್ತಿದ್ದಾರೆ.

ಬಿಪಿ ಶುಗರ್ ಮಾತ್ರೆ ಇಲ್ಲ, ಅತಿಥಿ ಶಿಕ್ಷಕರಿಗೆ ಸಂಬಳ ಆಗಿಲ್ಲ:
ನಮ್ಮ ಸರ್ಕಾರ ಅಭಿವೃದ್ಧಿ ಮಾಡಿದೆ ಎಂದು ಕಾಂಗ್ರೆಸ್ ವಕ್ತಾರರು ಹೇಳುತ್ತಾರೆ ಪ್ರಾಥಮಿಕ ಕೇಂದ್ರಗಳಲ್ಲಿ ಬಿಪಿ ಶುಗರ್ ಮಾತ್ರೆ ಇಲ್ಲದೆ ಏಳರಿಂದ ಎಂಟು ತಿಂಗಳು ಆಯಿತು. ಜಿಸಿ ಆಸ್ಪತ್ರೆಯಲ್ಲೂ ಸರಿಯಾಗಿ ಮಾತ್ರೆಗಳು ಲಭ್ಯವಿಲ್ಲ. ಅತಿಥಿ ಶಿಕ್ಷಕರಿಗೆ ಸಂಬಳ ಆಗಿಲ್ಲ. ಆಸ್ಪತ್ರೆ ಡಿ ಗ್ರೂಪ್ ನೌಕರರಿಗೆ ಸಂಬಳ ಆಗಿಲ್ಲ. ದಿನ ಬೆಳಗ್ಗೆ, ಶಾಸಕರ ವಿರುದ್ಧ, ಬಿಜೆಪಿ ವಿರುದ್ಧ ನಂಜು ಕಾರುವುದು ಬಿಟ್ಟು ಸರ್ಕಾರ ಸಾಮಾನ್ಯ ಜನರಿಗೆ ನೀಡುವ ಔಷಧಿ ತರಿಸುವ ಬಗ್ಗೆ ಗಮನ ಹರಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಸಂತೋಷ್ ದೇವಾಡಿಗ ವಾಗ್ದಾಳಿ ನಡೆಸಿದರು.


ಇದನ್ನೂ ಓದಿ; ರೈತರ ಗಮನಕ್ಕೆ; ತೋಟಗಾರಿಕೆ ಬೆಳೆ ಬೆಳೆಯಲು ಅರ್ಜಿ ಆಹ್ವಾನ


3250 ಕೋಟಿ ಹಣ ಅಭಿವೃದ್ಧಿಗಾಗಿ:
ತೀರ್ಥಹಳ್ಳಿಗೆ ಶಾಸಕರು ಕಳೆದ ಬಾರಿ 3250 ಕೋಟಿ ಹಣ ಅಭಿವೃದ್ಧಿಗಾಗಿ ತಂದಿದ್ದಾರೆ. ಅದನ್ನು ಸಹಿಸಲು ಕಾಂಗ್ರೆಸ್ ಯುವ ಮಿತ್ರರಿಗೆ ಆಗುತ್ತಿಲ್ಲ, ಕಾಮಗಾರಿಯಲ್ಲಿ ಕೆಲವೊಂದು ತೊಡಕುಗಳು ಆಗಿರಬಹುದು, ಕಳಪೆ ಕಾಮಗಾರಿಯಾದರೆ ಅದನ್ನು ಮತ್ತೊಮ್ಮೆ ಸರಿಪಡಿಸುತ್ತಾರೆ. ಆದರೆ, ಅನುದಾನ ತಂದಿಲ್ಲ ಎನ್ನುವುದು ಸರಿಯಲ್ಲ ಇವರು ಫೇಸ್ಟುಕ್ ನಲ್ಲಿ ಲೈವ್ ಬರುವುದು ಬಿಟ್ಟು ಹಳ್ಳಿ ಹಳ್ಳಿಗೆ ಹೋಗಿದ್ದರೆ ಜ್ಞಾನೇಂದ್ರ ಅವರ ಸಾಧನೆ ಏನು ಎಂದು ಗೊತ್ತಾಗುತ್ತಿತ್ತು ಎಂದು ಮಹಾಂತ ಗೌಡ ಟೀಕಿಸಿದರು.

ಫೇಸ್ಟುಕ್, ವಾಟ್ಸಪ್ ಅನ್ನುವುದು ಬಿಟ್ಟರೆ ಆದರ್ಶ ಹುಂಚದಕಟ್ಟೆ ಯಾರು ಎಂದು ಯಾರಿಗೂ ಗೊತ್ತಿಲ್ಲ:
ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆದರೆ ರಾಜಕಾರಣಿ ಆಗ್ತಿನಿ ಎಂದುಕೊಂಡರೆ ಅದು ತಪ್ಪು ಊಹೆ, ನಾವು ಜನರಿಂದ ಜನರಿಗಾಗಿ ಆಯ್ಕೆಯಾಗುವ ವ್ಯವಸ್ಥೆಯಲ್ಲಿ ಇದ್ದೇವೆ, ಜ್ಞಾನೇಂದ್ರ ಅವರನ್ನು ಟಿಕೀಸುವ ನೈತಿಕತೆ ಯುವ ಕಾಂಗ್ರೆಸ್ ನವರಿಗೆ ಇಲ್ಲ. ಇವರು ಯಾವುದಾದರು ಹೋರಾಟದಲ್ಲಿ ಭಾಗಿಯಾಗಿದ್ದಾರಾ? ಪ್ರತಿಭಟನೆ ಮಾಡಿದ್ದು ಯಾವುದು ಇಲ್ಲ, ಫೇಸ್ಟುಕ್, ವಾಟ್ಸಪ್ ಅನ್ನುವುದು ಬಿಟ್ಟರೆ ಆದರ್ಶ ಹುಂಚದಕಟ್ಟೆ ಯಾರು ಎಂದು ಯಾರಿಗೂ ಗೊತ್ತಿಲ್ಲ, ಯುವ ಕಾಂಗ್ರೆಸ್ ನವರಿಗೆ ಹಳ್ಳಿಯವರ ಯಾರ ಸಂಪರ್ಕವೂ ಇಲ್ಲ ಎಂದರು.


ಇದನ್ನೂ ಓದಿ; ಪಡಿತರ ಚೀಟಿದಾರರಿಗೆ ಬಿಗ್ ಶಾಕ್; ಜಾರಿಗೆ ಬರಲಿವೆ ಈ ಹೊಸ ನಿಯಮಗಳು!


ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿದ್ದಾರೆ:
ಕಾಂಗ್ರೆಸ್ ಸರ್ಕಾರದಿಂದ ಗೃಹ ಜ್ಯೋತಿ, ಗೃಹಲಕ್ಷ್ಮಿಯಲ್ಲಿ ಹಣ ಬಂದಿದೆ ಎಂದು ಅಂಕಿ ಅಂಶ ಕೊಡುತ್ತಾರೆ, ವೈಯಕ್ತಿಕ ಬಂದಿದ್ದಕ್ಕೂ ಅಭಿವೃದ್ಧಿಗೆ ಹಣ ಬರುವುದಕ್ಕೂ ವ್ಯತ್ಯಾಸ ಇದೆ. ಶಾಸಕರಿಗೆ ಹಣ ತರಲು ಆಗಿಲ್ಲ ಎಂದರೆ ಮಾಜಿ ಶಾಸಕರು ಹಣ ತರಲಿ, ಹಣ ಕ್ಷೇತ್ರಕ್ಕೆ ಯಾರೇ ತಂದರೂ ನಮಗೆ ಸಂತೋಷ, ಅಭಿವೃದ್ಧಿಯಾದರೆ ಯಾರೇ ಮಾಡಿದರೂ ನಾವು ಪ್ರೋತ್ಸಾಹ ಮಾಡುತ್ತೇವೆ, ಇವರು ಹಣ ತರಲ್ಲ, ಹಣ ತಂದರೂ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನವರ ಸಾಧನೆ ಏನು?:
20-30 ವರ್ಷದಿಂದ ಆರಗ ಶಾಸಕರಾಗಿದ್ದಾರೆ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡುತ್ತಾರೆ. ಕಾಂಗ್ರೆಸ್ ನವರ ಸಾಧನೆ ಏನು? ಹತ್ತು ವರ್ಷ ಇವರು ಅಧಿಕಾರದಲ್ಲಿದ್ದರಲ್ಲ, ಏನು ಮಾಡಿದ್ದಾರೆ? ಡಿಗ್ರಿ ಕಾಲೇಜು ತಂದಿದ್ದು ಶಾಸಕರು, ಪ್ರವಾಸೋದ್ಯಮ, ನಿರುದ್ಯೋಗ, ಏನೇ ಇವರೇ ಮಾಡಿದರು ನಾವು ಕೈ ಜೋಡಿಸುತ್ತೇವೆ, ಅದನ್ನು ಬಿಟ್ಟು ಎಲ್ಲದರಲ್ಲೂ ತಪ್ಪು ಹುಡುಕುವ ಕೀಳು ಮನಸ್ಥಿತಿ ಸರಿಯಲ್ಲ ಎಂದರು.


ಇದನ್ನೂ ಓದಿ; ಯಜಮಾನಿಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್; ಏನದು? ಮಹಿಳೆಯರೇ ಮಿಸ್‌ ಮಾಡ್ದೆ ಈ ಸುದ್ದಿ ಓದಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.