ಶೃಂಗೇರಿ: ಗಾಂಧಿ ಮೈದಾನದಲ್ಲಿನ ಅಂಗಡಿ ತೆರವಿಗೆ ಕೋರ್ಟ್ ಆದೇಶ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗಾಂಧಿ ಮೈದಾನದ 4 ಜನ ಬೀದಿಬದಿ ವ್ಯಾಪಾರಿಗಳಿಗೆ ಪಪಂ ಮುಖ್ಯಾಧಿಕಾರಿ ನೊಟೀಸ್ ನೀಡಿದ್ದಾರೆ.

 

ಇದನ್ನೂ ಓದಿ; ಇಂಡಿಯನ್ ಓವರ್ ಸೀಸ್ ಬ್ಯಾಂಕ್‌ ನಲ್ಲಿದೆ ಸ್ಪೆಷಲಿಸ್ಟ್ ಆಫೀಸರ್ ಹುದ್ದೆ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಕಳೆದ 3-4 ದಶಕಗಳಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ ನೆಲಬಾಡಿಗೆ ನೀಡಿ 4 ಮಂದಿ ಅಂಗಡಿ, ಹೋಟೆಲ್ ಉದ್ಯಮ ನಡೆಸುತ್ತಿದ್ದು 2006 ರಲ್ಲಿ ಪಪಂ ಈ ಜಾಗವನ್ನು ಖುದ್ದು ವಶಕ್ಕೆ ಪಡೆಯಲು ಯಾವುದೇ ನೋಟಿಸ್ ನೀಡದೇ ತೆರವುಗೊಳಿಸಲು ಬಲತ್ಕಾರವಾಗಿ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು. ಪಪಂಗ ನೆಲಬಾಡಿಗೆ ನೀಡಿ ನಡೆಸಲಾಗುತ್ತಿದ್ದು, ಕಾನೂನು ರೀತ್ಯ ನಮ್ಮನ್ನು ಹೊರ ಹಾಕಬೇಕೆಂದು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಶೃಂಗೇರಿ ಮುನ್ ಸಿಪ್ ನ್ಯಾಯಾಲಯ ಹಾಗೂ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಇವರ ದಾವೆಯನ್ನು ವಜಾ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ದೂರುದಾರರು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ದಾವೆ ಹೂಡಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಕಳೆದ ಆಗಸ್ಟ್ ನಲ್ಲಿ ತೀರ್ಪು ನೀಡಿದ್ದು ಬೀದಿ ಬದಿ ವ್ಯಾಪಾರಿಗಳಿಗೆ ಬದಲಿ ಜಾಗದ ವ್ಯವಸ್ಥೆ ಮಾಡಿ ಕಾನೂನು ರೀತ್ಯ ಅವರನ್ನು ಹೊರಹಾಕಬೇಕು ಎಂದು ಆದೇಶಿಸಿದೆ.

 

ಆದರೆ ಕಾನೂನು ರೀತ್ಯ ಅವರನ್ನು ಹೊರಹಾಕಬೇಕು ಎಂಬ ತೀರ್ಪಿನ ಹಿನ್ನೆಲೆಯಲ್ಲಿ ಇದೀಗ ಪ.ಪಂ ಸಕ್ಷಮ ಅಧಿಕಾರಿಗಳು ತಿಳಿವಳಿಕೆ ಪತ್ರ ನೀಡಿದೆ. ಪಪಂಗೆ ಸೇರಿದ ಗಾಂಧಿ ಮೈದಾನದ ಸ್ವತ್ತನ್ನು ಅನಧಿಕೃತವಾಗಿ ಬಳಕೆ ಮಾಡುತ್ತ ವ್ಯಾಪಾರ ವ್ಯವಹಾರ ಮಾಡಿಕೊಂಡು ಬಂದಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ. ಬಳಸುತ್ತಿರುವ ಸ್ವತ್ತಿಗೆ ಪಪಂಗೆ ಯಾವುದೇ ಬಾಡಿಗೆ ಪಾವತಿಸದೇ ಉಪಯೋಗ ಮಾಡುತ್ತಿದ್ದು, ಇದರಿಂದ ಪ.ಪಂಗೆ ಅಪಾರ ನಷ್ಟ ಉಂಟಾಗಿದೆ ಎಂದು ತಿಳಿವಳಿಕೆ ಪತ್ರದಲ್ಲಿ ತಿಳಿಸಲಾಗಿದೆ. ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆ ಮತ್ತು ಇತರೆ ಮೂಲ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿ ಪಡಿಸಲು ಪ.ಪಂ ಮುಂದಾಗಿದ್ದು, ಅನುಸೂಚಿತ ಸತ್ತನ್ನು ವಶಕ್ಕೆ ಪಡೆಯಬೇಕಾಗಿರುತ್ತದೆ. ಈ ತಿಳಿವಳಿಕೆ ಪತ್ರದ ಅನುಸಾರ ಇದೇ ನ.9 ರ ಒಳಗೆ ಕಚೇರಿಗೆ ಹಾಜರಾಗಿ ಅಹವಾಲು ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು.

ನ್ಯಾಯಾಲಯದಲ್ಲಿ ತೀರ್ಪು ಹೊರಬಿದ್ದ ಈ 4 ಅಂಗಡಿಗಳು ಹೊರತುಪಡಿಸಿ ಗಾಂಧಿ ಮೈದಾನದಲ್ಲಿ ಇನ್ನೂ 17 ಅಂಗಡಿಗಳು ವ್ಯಾಪಾರ ವ್ಯವಹಾರ ನಡೆಸಿಕೊಂಡು ಬರುತ್ತಿದ್ದಾರೆ. ಈ ಅಂಗಡಿಯವರು 2018 ರಲ್ಲಿ ನ್ಯಾಯಾಲಯದಲ್ಲಿ ದಾವೆ ಸಂ. 43 976 -43992/2018 ರಲ್ಲಿ ದಾವೆ ಹೂಡಿದ್ದಾರೆ. ನ್ಯಾಯಾಲಯ ಇವರಿಗೆ ಯಥಾಸ್ಥಿತಿ ಕಾಪಾಡುವಂತೆ ಆದೇಶ ಹೊರಡಿಸಿದ್ದಾರೆ. ಇದಲ್ಲದೇ ಪಟ್ಟಣದ ಕೆವಿಆರ್ ರಸ್ತೆ ಇನ್ನಿತರ ಭಾಗಗಳಲ್ಲೂ ಕಳೆದ 40 ವರ್ಷಗಳಿಂದ ಇನ್ನೂ 12 ಅಂಗಡಿಗಳು ತೆರೆದಿವೆ. ಆದರೆ ಈ ಅಂಗಡಿಯವರು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ದಾವೆ ಹೂಡುವ ಶಕ್ತಿ ಇಲ್ಲದೇ ವ್ಯಾಪಾರ ವಹಿವಾಟು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಕಳೆದ ಎರಡು ಮೂರು ದಶಕಗಳಿಂದ ಜೀವನೋಪಾಯಕ್ಕಾಗಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದು, ಕನಿಷ್ಠ ಮುಂದಿನ 3 ವರ್ಷಗಳ ಕಾಲ ಅಂಗಡಿ ನಡೆಸಲು ಅನುಮತಿ ನೀಡಿ ಆ ನಂತರ ಬಹಿರಂಗ ಹರಾಜು ಮಾಡಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಚಿಕ್ಕಮಗಳೂರು ನಗರಸಭೆಯಲ್ಲಿ ಅವಿಶ್ವಾಸ ಮಂಡನೆಯಲ್ಲಿ ಬಿಜೆಪಿಗೆ ಸೋಲು

 

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ)  ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸೋಲಾಗಿದೆ. ನಗರಸಭೆ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಅವಿಶ್ವಾಸ ಮಂಡನೆ ವಿಶೇಷ ಸಭೆಯಲ್ಲಿ ಸಂಖ್ಯಾಬಲ ಪ್ರದರ್ಶಿಸಲು ವಿಪಲವಾದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಸದಸ್ಯರು ಶುಕ್ರವಾರ ಕರೆದಿದ್ದ ಅವಿಶ್ವಾಸನೆ ಮಂಡನೆಗೆ ಸೋಲಾಯಿತು. ಈ ಹಿನ್ನೆಲೆಯಲ್ಲಿ ನಗರಸಭೆ ಹಾಲಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ 2024 ಜುಲೈ ವರೆಗೆ ಮುಂದುವರೆಯಲಿದ್ದಾರೆ. ಮಾಜಿ ಸಚಿವ ಸಿ.ಟಿ.ರವಿ ಅಪ್ತನಿಂದಲೇ ಬಿಜೆಪಿಗೆ ಮುಖಭಂಗವಾಗಿದ್ದು, ಸ್ವಪಕ್ಷದದಿಂದಲೇ ಎದುರಾದ ಅವಿಶ್ವಾಸ ನಿರ್ಣಯದಲ್ಲಿ ವರಸಿದ್ಧಿ ಪಾಸ್ ಆಗಿದ್ದಾರೆ.

3 ತಿಂಗಳಿಂದ ನಾನಾ ರೀತಿಯ ಹೈಡ್ರಾಮಕ್ಕೆ ಸಾಕ್ಷಿಯಾಗಿದ್ದ ಚಿಕ್ಕಮಗಳೂರು ನಗರಸಭೆ, 30 ತಿಂಗಳ ಆಡಳಿತದಲ್ಲಿ 18-12 ತಿಂಗಳಿಗೆ ಅಧಿಕಾರ ಹಂಚಿಕೆ ಮಾಡಲಾಗಿತ್ತು. ಮೊದಲ ಅವಧಿಗೆ ವೇಣುಗೋಪಾಲ್ ಅಧ್ಯಕ್ಷರಾಗಿದ್ದರು. ರಾಜೀನಾಮೆ ನೀಡದ ಹಿನ್ನಲೆಯಲ್ಲಿ ವರಸಿದ್ದಿ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ನಿರ್ಣವಾಗಿತ್ತು. ಇಂದು ನಡೆದ ಅವಿಶ್ವಾಸ ಮಂಡನೆಯಲ್ಲಿ 35 ನಗರಸಭಾ ಸದಸ್ಯರಲ್ಲಿ 17 ಬಿಜೆಪಿ, ಜೆಡಿಎಸ್ 3, ಎಸ್.ಡಿ.ಪಿ.ಐ 1, ಕಾಂಗ್ರೆಸ್ 12, ಪಕ್ಷಾಂತರ 1, ಶಾಸಕರು 1, ಬಂಡಾಯ ಅಧ್ಯಕ್ಷರ 1 ಮತ ಬಿದ್ದು, ಅಂತಿಮವಾಗಿ ಅವಿಶ್ವಾಸದ ಪರ ಯಾರೂ ಕೈ ಎತ್ತದ ಹಿನ್ನೆಲೆಯಲ್ಲಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು. ಅವಿಶ್ವಾಸ ನಿರ್ಣಯ ಪಾಸ್ ಆಗಬೇಕಾಗಿದ್ದರೆ ಮೂರನೇ ಎರಡರಷ್ಟು ಸದಸ್ಯ ಬಲದ ಅವಶ್ಯಕತೆ ಇತ್ತು. ಆದರೆ ಇಷ್ಟು ಬಲವನ್ನು ಒಗ್ಗೂಡಿಸಲು ಬಿ.ಜೆ.ಪಿ. ವಿಫಲವಾಗಿತ್ತು. ಹಾಗಾಗಿ ಅವಿಶ್ವಾಸ ನಿರ್ಣಯದ ಪರವಾಗಿ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ. ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಸೇರಿ ಒಟ್ಟು 21 ಮತಗಳನ್ನಷ್ಟೇ ಅವಿಶ್ವಾಸ ನಿರ್ಣಯದ ಪರ ಕ್ರೂಡೀಕರಲು ಸಾಧ್ಯವಾಗಿತ್ತು. ಅವಿಶ್ವಾಸ ನಿರ್ಣಯಕ್ಕೆ ಸೋಲಾಗುವುದನ್ನು ಗ್ರಹಿಸಿ ಯಾವ ಸದಸ್ಯರು ಅವಿಶ್ವಾಸ ನಿರ್ಣಯದ ಪರ ಕೈ ಎತ್ತದೇ ಚರ್ಚೆಗೆ ಅವಕಾಶ ಕೋರಿದ್ದರು ಎನ್ನಲಾಗಿದೆ.

ಸಭೆಗೆ ಗೈರಾದ ಸಂಸದೆ:
ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದರೂ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗುವ ಮಾಹಿತಿ ಪಡೆದಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಭೆಗೆ ಆಗಮಿಸಲಿಲ್ಲ. ಶಾಸಕ ಎಚ್ ಡಿ ತಮ್ಮಯ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇತ್ತ, ತೀವ್ರ ಮುಖಭಂಗ ಅನುಭವಿಸಿದ ಬಿಜೆಪಿ, ವರಸಿದ್ಧಿ ವೇಣುಗೋಪಾಲ್ ಕಚೇರಿ ಮುಂದೆ ಕುಳಿತು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.