ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿ ನೂತನ ರಾಜ್ಯಾಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪುತ್ರ, ಹಾಲಿ ಶಾಸಕ ಬಿ.ವೈ.ವಿಜಯೇಂದ್ರ ಅವರನ್ನು ನೇಮಕ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆದೇಶ ಹೊರಡಿಸಿದ್ದಾರೆ. ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದು, ಅವರ ಕೈಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದು ಸಮಯೋಚಿತ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಹೈಕಮಾಂಡ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಜಯೇಂದ್ರ ಅವರನ್ನ ಹಾರ್ದಿಕವಾಗಿ ಅಭಿನಂದಿಸುತ್ತೇನೆ ಎಂದರು.
ಇದನ್ನೂ ಓದಿ; ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿದೆ ಸ್ಪೆಷಲಿಸ್ಟ್ ಆಫೀಸರ್ ಹುದ್ದೆ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಯುವಕ, ಯುವಮೋರ್ಚಾ ಅಧ್ಯಕ್ಷ, ರಾಜ್ಯ ಉಪಾಧ್ಯಕ್ಷ, ಶಾಸಕನಾಗಿ ಅನುಭವವಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಸಾವಿರಾರು ಜನರ ಪರಿಚಯದ ವ್ಯಕ್ತಿ ಹೊಸ ಶಕ್ತಿಯಿಂದ ಬಿಜೆಪಿ ಎದ್ದು ಬರುತ್ತದೆ ಎಂದರು.

ಸರ್ಕಾರದ ವಿರುದ್ಧ ಮಾಜಿ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ:
ಹಿಂದೆ ಅತಿವೃಷ್ಟಿಯಾದಾಗ ಯಡಿಯೂರಪ್ಪನವರು ಡಬ್ಬ ಹಿಡ್ಕೊಂಡು ಭಿಕ್ಷೆ ಬೇಡಿದ್ರು. ನಿರಾಶ್ರಿತರ ಜೊತೆ ದೀಪಾವಳಿ ಹಬ್ಬವನ್ನ ಆಚರಿಸಿದ್ರು. ಇದು ಒಬ್ಬ ಸಿಎಂ ಆಗಿ ಇರಬೇಕಾದ ಬದ್ಧತೆ, ಹೃದಯವಂತಿಕೆ. ಸಿದ್ದರಾಮಯ್ಯ ವೇದಿಕೆ ಮೇಲೆ ಭಾಷಣ ಮಾಡ್ತಾ, ಡ್ಯಾನ್ಸ್ ಮಾಡ್ತಾ ಆರಾಮಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಕ್ಯಾಬಿನೆಟ್ ಮಂತ್ರಿಗಳು ಎಲ್ಲೂ ಓಡಾಡ್ತಿಲ್ಲ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.
ಹಲವು ಸಮಸ್ಯೆ ಇದ್ದರೂ ಕೂಡ ಏನೂ ಇಲ್ಲದಂತೆ ಸರ್ಕಾರದ ವರ್ತನೆ:
ರೈತರ ಬೆಳೆ ನಾಶ, ಕುಡಿಯೋ ನೀರಿಗೆ ಸಮಸ್ಯೆ, ವಿದ್ಯುತ್ ಅಭಾವವಿದೆ. ಆದರೆ ಸರ್ಕಾರ ತನ್ನ ಪಾತ್ರ ಏನೂ ಇಲ್ಲದಂತೆ ವರ್ತಿಸುತ್ತಿದೆ. ದಿನ ಬೆಳಗಾದರೆ ಕೇಂದ್ರ ಕೊಡ್ಲಿಲ್ಲ ಅಂತ ಕೇಂದ್ರದತ್ತ ಕೈ ತೋರಿಸುತ್ತಾರೆ. ಕೇಂದ್ರದ ಬಳಿ ನಿಯೋಗ ಹೋಗಲು ಏನ್ ಮಾಡಿದ್ದಾರೆ, ರಾಜ್ಯದಲ್ಲಿ ಸರ್ವಪಕ್ಷ ಸಭೆ ಕರೆದಿದ್ದಾರಾ…?. ಕೇಂದ್ರ ಕಳಿಸಿದ ಎನ್.ಡಿ.ಆರ್.ಎಫ್. ಹಣ 900 ಕೋಟಿ ಇದೆ, ಸರ್ಕಾರ ಅದನ್ನೂ ಬಿಡುಗಡೆ ಮಾಡಿಲ್ಲ. ಜನ ಗುಳೇ ಹೋಗ್ತಿದ್ದಾರೆ, ಜನರ ಕೈಗೆ ಕೆಲಸ ಕೊಡಬೇಕಿದೆ. ಜನವರಿ ಬಳಿಕ ಅತ್ಯಂತ ಭೀಕರ ಪರಿಸ್ಥಿತಿಯನ್ನ ನಾವು ನೋಡಬಹುದು ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಚಿಕ್ಕಮಗಳೂರು ನಗರಸಭೆಯಲ್ಲಿ ಅವಿಶ್ವಾಸ ಮಂಡನೆಯಲ್ಲಿ ಬಿಜೆಪಿಗೆ ಸೋಲು
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸೋಲಾಗಿದೆ. ನಗರಸಭೆ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಅವಿಶ್ವಾಸ ಮಂಡನೆ ವಿಶೇಷ ಸಭೆಯಲ್ಲಿ ಸಂಖ್ಯಾಬಲ ಪ್ರದರ್ಶಿಸಲು ವಿಪಲವಾದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಸದಸ್ಯರು ಶುಕ್ರವಾರ ಕರೆದಿದ್ದ ಅವಿಶ್ವಾಸನೆ ಮಂಡನೆಗೆ ಸೋಲಾಯಿತು. ಈ ಹಿನ್ನೆಲೆಯಲ್ಲಿ ನಗರಸಭೆ ಹಾಲಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ 2024 ಜುಲೈ ವರೆಗೆ ಮುಂದುವರೆಯಲಿದ್ದಾರೆ. ಮಾಜಿ ಸಚಿವ ಸಿ.ಟಿ.ರವಿ ಅಪ್ತನಿಂದಲೇ ಬಿಜೆಪಿಗೆ ಮುಖಭಂಗವಾಗಿದ್ದು, ಸ್ವಪಕ್ಷದದಿಂದಲೇ ಎದುರಾದ ಅವಿಶ್ವಾಸ ನಿರ್ಣಯದಲ್ಲಿ ವರಸಿದ್ಧಿ ಪಾಸ್ ಆಗಿದ್ದಾರೆ.
ಸಭೆಗೆ ಗೈರಾದ ಸಂಸದೆ:
ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದರೂ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗುವ ಮಾಹಿತಿ ಪಡೆದಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಭೆಗೆ ಆಗಮಿಸಲಿಲ್ಲ. ಶಾಸಕ ಎಚ್ ಡಿ ತಮ್ಮಯ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು.
ಇತ್ತ, ತೀವ್ರ ಮುಖಭಂಗ ಅನುಭವಿಸಿದ ಬಿಜೆಪಿ, ವರಸಿದ್ಧಿ ವೇಣುಗೋಪಾಲ್ ಕಚೇರಿ ಮುಂದೆ ಕುಳಿತು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದರು.













