ಮಾಡುವ ಪ್ರತಿ ಕೆಲಸದಲ್ಲಿ ಭಗವಂತನನ್ನು ಕಾಣಬೇಕು- ಜಗದ್ಗುರು ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ತಾನು ಮಾಡುವ ಪ್ರತೀ ಕೆಲಸವನ್ನು ಭಗವಂತನ ಪೂಜೆ ಎಂದುಕೊಂಡು ಪ್ರೀತಿಯಿಂದ ಮಾಡಬೇಕು. ಅದು ಕೃಷಿಯಾಗಿರಲಿ, ವ್ಯಾಪಾರವಾಗಿರಲಿ, ಅಡುಗೆ, ಪುರೋಹಿತ್ಯ ಯಾವುದೇ ಆಗಿರಲಿ. ಆಗ ನಮ್ಮಲ್ಲಿ ಮೋಸ, ಕಪಟದ ಆಲೋಚನೆಗಳು ಸುಳಿಯುವುದಿಲ್ಲ. ಹಾಗೆಯೇ ಪ್ರತಿಯೊಬ್ಬರು ಮಾಡಿದಾಗ ಕುಟುಂಭದಲ್ಲಿ, ಸಮಾಜದಲ್ಲಿ ಪ್ರೀತಿಯ ಹೊರತು ಇನ್ನಾವುದೂ ಇರುವುದಿಲ್ಲ. ಶಾಂತಿ, ನೆಮ್ಮದಿ, ಐಶ್ವರ್ಯ ಎಲ್ಲವೂ ದೊರಕುತ್ತದೆ ಎಂದು ಹರಿಹರಪುರ ಶ್ರೀ ಶಾರದಾ ಲಕ್ಷ್ಮೀನೃಸಿಂಹ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳು ಹೇಳಿದರು.


ಇದನ್ನೂ ಓದಿ: ರೈತರ ಗಮನಕ್ಕೆ; ಈ ಕೆಲಸ ಮಾಡದಿದ್ದರೆ ಖಾತೆಗೆ ಬರಲ್ಲ ಪಿಎಂ ಕಿಸಾನ್ ಯೋಜನೆಯ ಹಣ; ತಕ್ಷಣವೇ ಈ ರೀತಿ ಮಾಡಿ


ಜಯಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಲದುರ್ಗ ಶ್ರೀ ನಾಗಸಾನಿಧ್ಯ, ಶ್ರೀ ವನದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಕಾಯಕವೇ ಕೈಲಾಸ, ಆ ಕಾಯಕದಲ್ಲಿ ಭಗವಂತನನ್ನು ಕಾಣಬೇಕು. ಯಾವ ಮನುಷ್ಯನು ನನಗೆ ಎಲೆಯನ್ನಾಗಲಿ, ಹೂವನ್ನಾಗಲಿ, ಹಣ್ಣನ್ನಾಗಲಿ ಭಕ್ತಿಯಿಂದ ಸಮರ್ಪಣೆ ಮಾಡುತ್ತಾನೊ ಅದನ್ನು ನಾನು ಸಂತೋಷದಿಂದ ಸ್ವೀಕರಿಸಿ ಆಶೀರ್ವಾದಿಸುತ್ತೇನೆ ಎಂದು ಭಗವಾನ್ ಶ್ರೀ ಕೃಷ್ಣ ಹೇಳಿದ್ದಾನೆ. ಆತ ಎಲ್ಲೂ ಆಡಂಭರದ ಚಿನ್ನ ಬೆಳ್ಳಿಯನ್ನು ಕೇಳಿಲ್ಲ, ಯಾವ ಜಾತಿ, ಶ್ರೀಮಂತ ಬಡವ ಯಾವುದನ್ನು ಕೇಳಿಲ್ಲ ನಿಷ್ಕಲ್ಮಶ ಭಕ್ತಿಯನ್ನು ಮಾತ್ರ ಕೇಳಿದ್ದಾನೆ. ಹಾಗಾಗಿ ಭಗವಂತನ ಕೃಪೆಗೆ ಪಾತ್ರರಾಗಬೇಕಾದರೆ ನಾವು ಸಮಾಜಕ್ಕೆ, ಪ್ರಕೃತಿಗೆ, ನಮ್ಮ ವೃತ್ತಿಗೆ ಮೋಸ ಮಾಡದೆ ಬದುಕಿದರೆ ಸಾಕು ಎಂದರು.


ಇದನ್ನೂ ಓದಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಮುಖ್ಯ ಮಾಹಿತಿ; ಗ್ರಾಮ ಆಡಳಿತ ಅಧಿಕಾರಿ ಸೇರಿ 5 ಇಲಾಖೆಗಳ ಹುದ್ದೆಗೆ ಪರೀಕ್ಷೆ ಪ್ರಕಟ


ಜಗತ್ತಿನಲ್ಲಿ ಸಾಕಷ್ಟು ಕೆಟ್ಟದ್ದಿದೆ ಅದನ್ನು ನಾವು ಬಿಡಬೇಕು. ಗುಲಾಬಿ ಗಿಡದಲ್ಲಿರುವ ಮುಳ್ಳನ್ನು ಬಿಟ್ಟು, ಹೂವನ್ನು ಆಯ್ದುಕೊಳ್ಳುವಂತೆ, ಒಳ್ಳೆಯದನ್ನು ಮಾತ್ರ ಆಯ್ದುಕೊಳ್ಳಬೇಕು. ಭಗವಂತನೇ ಹೇಳಿದ್ದಾನೆ ಇಲ್ಲಿ ಯಾರು ಮೇಲಲ್ಲ, ಯಾರೂ ಕೀಳಲ್ಲ ಎಲ್ಲರೂ ಸಮಾನರು ಎಂದು. ಕಿತ್ತಾಟಗಳನ್ನು ಬಿಟ್ಟು, ನಮ್ಮ ಸ್ವಾರ್ಥಕ್ಕಾಗಿ ಪಂಚ ಮಹಾ ಭೂತಗಳಾದ ನೀರು, ಗಾಳಿ, ಆಕಾಶ, ಭೂಮಿ, ಅಗ್ನಿಗಳನ್ನು ಬಳಸಿ ಮಲಿನಗೊಳಿಸದೆ ಉಪಯೋಗಿಸಿಕೊಳ್ಳೋಣ ಎಂದರು.

‘ಪುರೋಹಿತ್ಯ ಎಂದರೆ ಪುರದ ಹಿತಕಾಯುವವನು ಎಂದು ಅರ್ಥ. ಗ್ರಾಮದ ಒಳಿತಿಗಾಗಿ ಯಾವುದೇ ಸ್ವಾರ್ಥಪರ ಚಿಂತನೆಯಿಲ್ಲದೆ. ಸಮಾಜ್ಜೊದ್ದಾರಕ್ಕಾಗಿ ಚಿಂತಿಸುವವನು ಪುರೋಹಿತ. ಲೋಕ ಕಲ್ಯಾಣಾರ್ಥ ದೈವಿಕ ಕಾರ್ಯ ನಡೆಸುವವನು ಪುರೋಹಿತ. ಅದಕ್ಕಾಗಿ ಪುರೋಹಿತರಿಗೆ ಹಿಂದೆ ವಿಶೇಷ ಮಾನ್ಯತೆ ನೀಡಲಾಗಿದೆ. ಅದರಂತೆ ಬದುಕುವವರು ಮಾತ್ರ ಶ್ರೇಷ್ಠ ಪುರೋಹಿತರಾಗಲು ಸಾದ್ಯ’-ಜಗದ್ಗುರು ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ 


ಇದನ್ನೂ ಓದಿ: ಬಿಪಿಎಲ್‌, ಅಂತ್ಯೋದಯ ಕಾರ್ಡ್ ದಾರರಿಗೆ ಶಾಕ್; ಅನ್ನಭಾಗ್ಯ ನಗದು ವರ್ಗಾವಣೆ ಸ್ಥಗಿತ


ಕಾರ್ಯಕ್ರಮದಲ್ಲಿ ಪುರೋಹಿತರಾದ ಡಾ. ಗಣೇಶ್ ಶಾಸ್ತ್ರಿ ಮಾತನಾಡಿದರು. ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ ವಾಚನ, ಮಹಾಸಂಕಲ್ಪ, ಭೂವರಾಹ ಹೋಮ, ವನದುರ್ಗಾಪರಮೇಶ್ವರಿ ಹೋಮ, ನಾಗದೇವರಿಗೆ ಪವಮಾನ ಅಭಿಷೇಕ, ದುರ್ಗಾಪೂಜೆ, ಕುಂಕುಮಾರ್ಚನೆ, ಮಹಾಮಂಗಳಾರತಿ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನ ಸಮಿತಿಯ ಅದ್ಯಕ್ಷ ಸುಭ್ರಮಣ್ಯ, ಉಪಾಧ್ಯಕ್ಷೆ ಜಯಂತಿ ನಾಗರಾಜ್, ಕಾರ್ಯದರ್ಶಿ ಜಯ ಮುರುಗೇಶ್, ಖಜಾಂಚಿ ಸರೋಜಾ ವಸಂತ, ಸ್ಥಳೀಯರಾದ ಪ್ರದೀಪ್ ಹೆಬ್ಬಾರ್, ಮೂರ್ಗದೆ ಸುಭ್ರಮಣ್ಯ ಭಟ್ ಹಾಗೂ ನೂರಾರು ಭಕ್ತರಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.