
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ಗೋಣಿಬೀಡು ಹೋಬಳಿ ಹೊಯ್ಸಳಲು ಗ್ರಾಮದ ದೇವಸ್ಥಾನದ ಅರ್ಚಕರು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಇದನ್ನೂ ಓದಿ: ರೈತರ ಗಮನಕ್ಕೆ; ಈ ಕೆಲಸ ಮಾಡದಿದ್ದರೆ ಖಾತೆಗೆ ಬರಲ್ಲ ಪಿಎಂ ಕಿಸಾನ್ ಯೋಜನೆಯ ಹಣ; ತಕ್ಷಣವೇ ಈ ರೀತಿ ಮಾಡಿ

ಗೋಣಿಬೀಡು ವ್ಯಾಪ್ತಿಯ ಹೊಯ್ಸಳಲು ಶಿವ ದೇವಸ್ಥಾನದಲ್ಲಿ ಕಳೆದ ಹಲವು ವರ್ಷಗಳಿಂದ ಅರ್ಚಕ ವೃತ್ತಿ ಮಾಡುತ್ತಿದ್ದ ಭಾಸ್ಕರ ಶಾಸ್ತ್ರಿ (62) ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ರೈತರೇ ಗಮನಿಸಿ; ಈ ಕೆಲಸ ಮಾಡದಿದ್ದರೆ ಜಮೆ ಆಗಲ್ಲ ಬರ ಪರಿಹಾರ ಹಣ!
ಗೋಣಿಬೀಡು ಸಮೀಪದ ಮಂಡಿಮನೆ ಗ್ರಾಮದಲ್ಲಿ ವಾಸವಾಗಿದ್ದ ಭಾಸ್ಕರ ಶಾಸ್ತ್ರಿ ಮಂಗಳವಾರ ಮುಂಜಾನೆ 4 ಗಂಟೆಗೆ ಎದ್ದು ಎಂದಿನಂತೆ ಮನೆಯಲ್ಲಿ ಪೂಜೆ ಮುಗಿಸಿದ್ದರು. ಬಳಿಕ ಮಗಳು ಅಳಿಯ ಸಹ ಮನೆಯಲ್ಲಿ ಇದ್ದಿದ್ದರಿಂದ ಮನೆಯ ಹೊರಭಾಗದಲ್ಲಿ ನೇಣಿಗೆ ಶರಣಾಗಿದ್ದಾರೆ.
ಇದನ್ನೂ ಓದಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಮುಖ್ಯ ಮಾಹಿತಿ; ಗ್ರಾಮ ಆಡಳಿತ ಅಧಿಕಾರಿ ಸೇರಿ 5 ಇಲಾಖೆಗಳ ಹುದ್ದೆಗೆ ಪರೀಕ್ಷೆ ಪ್ರಕಟ
ಇತ್ತೀಚಿಗೆ ಭಾಸ್ಕರ ಶಾಸ್ತ್ರಿ ಅವರ ಪತ್ನಿ ನಿಧನರಾಗಿದ್ದರು, ಇದರಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಈ ಕುರಿತು ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್-ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿ: ಓರ್ವ ಸಾವು, ಹಿಂಬದಿ ಇದ್ದ ಯುವತಿ ನಾಲಿಗೆ ಕಟ್
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಬಳಿ ನಡೆದಿದೆ. ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಇದ್ದ ಯುವತಿ ನಾಲಿಗೆ ಕಟ್ ಆಗಿದೆ. ಶಿವರಾಜ್ (26) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ ಹಾಗೂ ಲಾವಣ್ಯ (20) ನಾಲಿಗೆ ಕಳೆದುಕೊಂಡ ಯುವತಿ.
ಶಿವರಾಜ್ ಹಾಗೂ ಲಾವಣ್ಯ ಅರಸೀಕೆರೆ ತಾಲೂಕಿನ ಬಂದೂರು ಮೂಲದವರಾಗಿದ್ದು, ನಾಲಿಗೆ ಕಳೆದುಕೊಂಡ ಯುವತಿ ಲಾವಣ್ಯ ಚಿಕ್ಕಮಗಳೂರಿನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದಳು.
ಘಟನೆ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













