
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಇತ್ತೀಚೆಗೆ ನಡೆದ ಶೃಂಗೇರಿಯ ಪಿ.ಸಿ.ಎಲ್.ಡಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಬಹುಮತ ಪಡೆದು ಜಯಶಾಲಿಗಳಾಗಿದ್ದು, ಅಧ್ಯಕ್ಷರಾಗಿ ನೆಮ್ಮಾರು ದಿನೇಶ್ ಹೆಗ್ಡೆ ಹಾಗೂ ಉಪಾಧ್ಯಕ್ಷರಾಗಿ ಮೀಗಾ ಪ್ರಸನ್ನ ಅವರು ನಿರ್ದೇಶಕರುಗಳ ಬೆಂಬಲದೊಂದಿಗೆ ಆಯ್ಕೆಯಾಗಿ ಇಂದು ಅಧಿಕಾರ ಸ್ವೀಕರಿಸಿದರು.
ಇದನ್ನೂ ಓದಿ: ಫಿಶ್ ಪ್ರಿಯರೇ ಎಚ್ಚರ…!; ಈ ಮೀನುಗಳನ್ನು ತಿಂದ್ರೆ ಆರೋಗ್ಯಕ್ಕಿದೆ ಕುತ್ತು!

ಉಳಿದಂತೆ ನಿರ್ದೇಶಕರಾಗಿ ವೆಂಕಟೇಶ್ ಅಡಗದ್ದೆ, ಶಿವಕುಮಾರ್ ಕಡ್ಲೋಡಿ, ರಾಜಶೇಖರ್ ಅಸನಬಾಳು, ರಾಘವೇಂದ್ರ ಸುರಡಿ, ವಾಸುದೇವ ಕಚ್ಚೊಳ್ಳಿ, ಆದೇಶ್ ಕೂಡ್ಲುಮಕ್ಕಿ, ಚಂದ್ರಶೇಖರ್ ಕೊಡಿಗೆ, ನಿರೂಪಮ ಸುರೇಶ್ ಕಾಮತ್, ಪ್ರಕಾಶ್ ಕಿಗ್ಗ, ಕೋದಂಡ ಹೊಳೆ ಕೊಪ್ಪ, ಶಿವಪ್ಪಗೌಡ ತಿಪ್ಪನಮಕ್ಕಿ, ಬಾಲಕೃಷ್ಣ ನೆಮ್ಮಾರ್ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಅನಧಿಕೃತ ಪಂಪ್ಸೆಟ್ ಹೊಂದಿದ್ರೆ ಈ ಸುದ್ದಿ ಓದಿ; ಕಾನೂನು ಕ್ರಮ ಫಿಕ್ಸ್!, ಯಾಕೆ ಗೊತ್ತಾ?
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಟರಾಜ್ ಮಾನುಕೊಡಿಗೆ, ಎಪಿಎಂಸಿ ಅಧ್ಯಕ್ಷರಾದ ಭಾಸ್ಕರ್ ನಾಯ್ಕ್, ಯುವ ಕಾಂಗ್ರೆಸ್ ಅಧ್ಯಕ್ಷರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರುಗಳು ಇದ್ದರು.














