ಕಡೂರು: ವಸತಿ ಶಾಲೆಯ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ

ಕಡೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಲ್ಲಿ ಶಿಕ್ಷಣ ಇಲಾಖೆ ತಲೆತಗ್ಗಿಸುವ ಘನಘೋರ ಘಟನೆ ಬೆಳಕಿಗೆ ಬಂದಿದೆ. ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಪ್ಯಾರಾ ನರ್ಸಿಂಗ್ ಕೋರ್ಸ್ ಹೆಸರಲ್ಲಿ ಅಮಲು ಬರೆಸುವ ಔಷಧಿ ನೀಡಿ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕಡೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

 

ಇದನ್ನೂ ಓದಿ; ಇಂಡಿಯನ್ ಓವರ್ ಸೀಸ್ ಬ್ಯಾಂಕ್‌ ನಲ್ಲಿದೆ ಸ್ಪೆಷಲಿಸ್ಟ್ ಆಫೀಸರ್ ಹುದ್ದೆ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ವಸತಿ ಶಾಲೆಯೊಂದರಲ್ಲಿ ಸರ್ಕಾರಿ ಅಧಿಕಾರಿಯಿಂದಲೇ ಅಮಾಯಕ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಕ್ರೂರ ಕೃತ್ಯ ನಡೆದಿದೆ. ವಸತಿ ಶಾಲೆಯ ಡಿ. ದರ್ಜೆ ನೌಕರ ಸುರೇಶ್, ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಿಬ್ಬಂದಿ ಚಂದನ, ಆಕೆಯ ಪ್ರಿಯಕರ ವಿನಯ್ ಬಂಧಿತ ಆರೋಪಿಗಳು. ವಿನಯ್ ಎಂಬಾತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಆರೋಪಿಗಳು ವಸತಿ ಶಾಲೆಯ ಹಲವು ಮಕ್ಕಳನ್ನ ಬಳಸಿಕೊಂಡಿರುವ ಆರೋಪ ಕೇಳಿ ಬಂದಿದೆ.

 

ಇದನ್ನೂ ಓದಿ; ದೀಪಾವಳಿ ಹಬ್ಬದಂದು ಆರು ದಿನ ಬ್ಯಾಂಕುಗಳ ರಜೆ; ನಿಮ್ಮ ಪ್ರದೇಶದಲ್ಲಿ ಯಾವ್ಯಾವತ್ತು ಇದೆ ಇಲ್ಲಿದೆ ನೋಡಿ

ಅಮಲು ಬರೆಸಿ ದೌರ್ಜನ್ಯ:
ವಿದ್ಯಾರ್ಥಿನಿಯರಿಗೆ ಅಮಲು ಬರೆಸುವ ಔಷಧಿ ನೀಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ತಿಂಗಳುಗಳಿಂದ ಈ ಕೃತ್ಯ ನಡೆಯುತ್ತಿತ್ತು ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ. ವಸತಿ ಶಾಲೆಯ ಡಿ. ದರ್ಜೆ ನೌಕರ ಸುರೇಶ್ ಎಂಬಾತ ಮೊದಲಿಗೆ ಪ್ಯಾರಾ ಮೆಡಿಕಲ್ ಕೋರ್ಸ್ ಕೊಡಿಸುತ್ತೇನೆ ಎಂದು ವಿದ್ಯಾರ್ಥಿನಿಯರನ್ನು ಪುಸಲಾಯಿಸುತ್ತಿದ್ದ. ಪರೀಕ್ಷೆಯಲ್ಲಿ ಪಾಸಾದರೆ ಕೆಲಸ ಸಿಗುತ್ತದೆ ಎಂದು ನಂಬಿಸುತ್ತಿದ್ದ. ಇದಕ್ಕೆ ಒಪ್ಪಿದ ಮಕ್ಕಳ ಪೋಷಕರನ್ನು ನಂಬಿಸಿ ವಿದ್ಯಾರ್ಥಿನಿಯರನ್ನು ಚಂದನಾ ಬಳಿ ಕಳಿಸುತ್ತಿದ್ದ. ಚಂದನಾ ಆರೋಗ್ಯ ಕೇಂದ್ರಕ್ಕೆ ಬರುವ ವಿದ್ಯಾರ್ಥಿನಿಯರನ್ನು ಅಲ್ಲೇ ಉಳಿಸಿಕೊಳ್ಳುತ್ತಿದ್ದಳು. ಕಾಫಿ, ಟೀಯಲ್ಲಿ ಮತ್ತು ಬರುವ ಔಷಧಿ ಬೆರೆಸಿ ವಿದ್ಯಾರ್ಥಿನಿಯರಿಗೆ ನೀಡುತ್ತಿದ್ದಳು. ಅರೆಪ್ರಜ್ಞಾವಸ್ಥೆಯಲ್ಲಿರುತ್ತಿದ್ದ ಮಕ್ಕಳ ಮೇಲೆ ಚಂದನಾ ಲವರ್ ವಿನಯ್ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಮೂವರು ಆರೋಪಿಗಳ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

 

ಚಿಕ್ಕಮಗಳೂರು ನಗರಸಭೆಯಲ್ಲಿ ಅವಿಶ್ವಾಸ ಮಂಡನೆಯಲ್ಲಿ ಬಿಜೆಪಿಗೆ ಸೋಲು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ)  ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸೋಲಾಗಿದೆ. ನಗರಸಭೆ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಅವಿಶ್ವಾಸ ಮಂಡನೆ ವಿಶೇಷ ಸಭೆಯಲ್ಲಿ ಸಂಖ್ಯಾಬಲ ಪ್ರದರ್ಶಿಸಲು ವಿಪಲವಾದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಸದಸ್ಯರು ಶುಕ್ರವಾರ ಕರೆದಿದ್ದ ಅವಿಶ್ವಾಸನೆ ಮಂಡನೆಗೆ ಸೋಲಾಯಿತು. ಈ ಹಿನ್ನೆಲೆಯಲ್ಲಿ ನಗರಸಭೆ ಹಾಲಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ 2024 ಜುಲೈ ವರೆಗೆ ಮುಂದುವರೆಯಲಿದ್ದಾರೆ. ಮಾಜಿ ಸಚಿವ ಸಿ.ಟಿ.ರವಿ ಅಪ್ತನಿಂದಲೇ ಬಿಜೆಪಿಗೆ ಮುಖಭಂಗವಾಗಿದ್ದು, ಸ್ವಪಕ್ಷದದಿಂದಲೇ ಎದುರಾದ ಅವಿಶ್ವಾಸ ನಿರ್ಣಯದಲ್ಲಿ ವರಸಿದ್ಧಿ ಪಾಸ್ ಆಗಿದ್ದಾರೆ.

 

3 ತಿಂಗಳಿಂದ ನಾನಾ ರೀತಿಯ ಹೈಡ್ರಾಮಕ್ಕೆ ಸಾಕ್ಷಿಯಾಗಿದ್ದ ಚಿಕ್ಕಮಗಳೂರು ನಗರಸಭೆ, 30 ತಿಂಗಳ ಆಡಳಿತದಲ್ಲಿ 18-12 ತಿಂಗಳಿಗೆ ಅಧಿಕಾರ ಹಂಚಿಕೆ ಮಾಡಲಾಗಿತ್ತು. ಮೊದಲ ಅವಧಿಗೆ ವೇಣುಗೋಪಾಲ್ ಅಧ್ಯಕ್ಷರಾಗಿದ್ದರು. ರಾಜೀನಾಮೆ ನೀಡದ ಹಿನ್ನಲೆಯಲ್ಲಿ ವರಸಿದ್ದಿ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ನಿರ್ಣವಾಗಿತ್ತು. ಇಂದು ನಡೆದ ಅವಿಶ್ವಾಸ ಮಂಡನೆಯಲ್ಲಿ 35 ನಗರಸಭಾ ಸದಸ್ಯರಲ್ಲಿ 17 ಬಿಜೆಪಿ, ಜೆಡಿಎಸ್ 3, ಎಸ್.ಡಿ.ಪಿ.ಐ 1, ಕಾಂಗ್ರೆಸ್ 12, ಪಕ್ಷಾಂತರ 1, ಶಾಸಕರು 1, ಬಂಡಾಯ ಅಧ್ಯಕ್ಷರ 1 ಮತ ಬಿದ್ದು, ಅಂತಿಮವಾಗಿ ಅವಿಶ್ವಾಸದ ಪರ ಯಾರೂ ಕೈ ಎತ್ತದ ಹಿನ್ನೆಲೆಯಲ್ಲಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು. ಅವಿಶ್ವಾಸ ನಿರ್ಣಯ ಪಾಸ್ ಆಗಬೇಕಾಗಿದ್ದರೆ ಮೂರನೇ ಎರಡರಷ್ಟು ಸದಸ್ಯ ಬಲದ ಅವಶ್ಯಕತೆ ಇತ್ತು. ಆದರೆ ಇಷ್ಟು ಬಲವನ್ನು ಒಗ್ಗೂಡಿಸಲು ಬಿ.ಜೆ.ಪಿ. ವಿಫಲವಾಗಿತ್ತು. ಹಾಗಾಗಿ ಅವಿಶ್ವಾಸ ನಿರ್ಣಯದ ಪರವಾಗಿ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ. ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಸೇರಿ ಒಟ್ಟು 21 ಮತಗಳನ್ನಷ್ಟೇ ಅವಿಶ್ವಾಸ ನಿರ್ಣಯದ ಪರ ಕ್ರೂಡೀಕರಲು ಸಾಧ್ಯವಾಗಿತ್ತು. ಅವಿಶ್ವಾಸ ನಿರ್ಣಯಕ್ಕೆ ಸೋಲಾಗುವುದನ್ನು ಗ್ರಹಿಸಿ ಯಾವ ಸದಸ್ಯರು ಅವಿಶ್ವಾಸ ನಿರ್ಣಯದ ಪರ ಕೈ ಎತ್ತದೇ ಚರ್ಚೆಗೆ ಅವಕಾಶ ಕೋರಿದ್ದರು ಎನ್ನಲಾಗಿದೆ.

ಸಭೆಗೆ ಗೈರಾದ ಸಂಸದೆ:
ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದರೂ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗುವ ಮಾಹಿತಿ ಪಡೆದಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಭೆಗೆ ಆಗಮಿಸಲಿಲ್ಲ. ಶಾಸಕ ಎಚ್ ಡಿ ತಮ್ಮಯ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇತ್ತ, ತೀವ್ರ ಮುಖಭಂಗ ಅನುಭವಿಸಿದ ಬಿಜೆಪಿ, ವರಸಿದ್ಧಿ ವೇಣುಗೋಪಾಲ್ ಕಚೇರಿ ಮುಂದೆ ಕುಳಿತು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.