ಬಿಜೆಪಿಯಲ್ಲಿ BSY ಕುಟುಂಬ-ಯತ್ನಾಳ್ ಬಣದ ನಡುವಿನ ಫೈಟ್ ಬಗ್ಗೆ ರಂಭಾಪುರಿ ಶ್ರೀ ಪ್ರತಿಕ್ರಿಯೆ

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬಿ.ಎಸ್.ಯಡಿಯೂರಪ್ಪ ಕುಟುಂಬ ಮತ್ತು ಯತ್ನಾಳ್ ಬಣದ ನಡುವಿನ ಆಂತರಿಕ ಕಲಹದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ನ್ನೂ ಓದಿ: ಕರ್ನಾಟಕದಲ್ಲಿ ರೇಷನ್‌ ಕಾರ್ಡ್‌ ಮತ್ತೆ ಪರಿಷ್ಕರಣೆ!; ಅನರ್ಹರಿಗೆ ರದ್ದಾಗುತ್ತಾ?


ಬಹು ಸಂಖ್ಯಾತ ಇರುವ ಸಮುದಾಯದ ನಾಯಕನನ್ನ ಮಾಡಿದರೆ ಬಹುಶಃ ಆ ಪಕ್ಷಕ್ಕೆ ಹೆಚ್ಚಿನ ಲಾಭ, ಹೆಚ್ಚಿನ ಶಾಸಕರು ಆಯ್ಕೆಯಾಗಬಹುದು ಎಂಬುದು ಯಾವುದೇ ಒಂದು ಪಕ್ಷದ ಗುರಿಯಲ್ಲ, ಎಲ್ಲಾ ಪಕ್ಷದ ಗುರಿಯೂ ಅದೇ ಆಗಿರುತ್ತದೆ. ಅದನ್ನ ಹೊರತು ಬೇರೇನೂ ಇಲ್ಲ. ಅಪಸ್ವರಗಳನ್ನ ಎತ್ತುವಂಥದ್ದು ಪಕ್ಷ ನಿಷ್ಠರಿಗೆ ಬಹಳಷ್ಟು ನೋವನ್ನು ಉಂಟು ಮಾಡುತ್ತಿದೆ. ಸ್ವಲ್ಪ ನಿಧಾನವಾದರೂ ಚಿಂತೆ ಇಲ್ಲ ಆಯಾ ಪಕ್ಷಗಳ ರಾಷ್ಟ್ರ ನಾಯಕರು ಏನಾದರೂ ಒಂದು ನಿರ್ಧಾರವನ್ನು ಕೈಗೊಂಡು ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬಹುದು ಎಂಬ ಆಶಾದಾಯಕ ಭಾವನೆ ನಮಗಿದೆ ಎಂದು ಶ್ರೀಗಳು ತಿಳಿಸಿದರು.

ಯಡಿಯೂರಪ್ಪ ರಾಜ್ಯದ ಪ್ರಶ್ನಾತೀತ ನಾಯಕರು, ಅದರಲ್ಲೂ ವೀರಶೈವ ಲಿಂಗಾಯಿತ ಸಮುದಾಯದ ಪ್ರಮುಖ ನಾಯಕರು. ಈ ನಾಡಿನಲ್ಲಿ ವೀರಶೈವ ಲಿಂಗಾಯಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮುಂದಿನ ಚುನಾವಣೆಗಳಲ್ಲಿ ಅನುಕೂಲ ಆಗುವ ದೃಷ್ಟಿಯಿಂದಲೇ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅವರ ನಾಯಕತ್ವಕ್ಕೆ ಕೆಲವರು ಅಪಸ್ವರ ಎತ್ತುತ್ತಿರುವುದು ಸರಿಯಲ್ಲ. ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವ ಬದಲು ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುವುದು ಒಳಿತು. ಭವಿಷ್ಯದಲ್ಲಿ ಅಧಿಕಾರ ಹಿಡಿಯಬೇಕೆಂದರೆ ಎಲ್ಲ ಸದಸ್ಯರು ಒಟ್ಟಾಗಿ ಕೆಲಸ ಮಾಡುವುದು ಅಗತ್ಯ ಎಂದು ಕಿವಿಮಾತು ಹೇಳಿದರು.


ನ್ನೂ ಓದಿ: ಅಡುಗೆಮನೆಯಲ್ಲಿ ಈ 2 ಪಾತ್ರೆಗಳನ್ನ ಉಲ್ಟಾ ಇಡಬೇಡಿ!; ಲಕ್ಷ್ಮಿ ಮುನಿಸಿಗೆ ನೀವು ಬಡವರಾಗ್ತೀರಿ!


ರಾಜ್ಯ ಸರ್ಕಾರಕ್ಕೂ ಸಲಹೆ ನೀಡಿದ ರಂಭಾಪುರಿ ಶ್ರೀಗಳು:
ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ ಸರ್ಕಾರಕ್ಕೆ ಸಮರ್ಥ ವಿರೋಧ ಪಕ್ಷದ ಅವಶ್ಯಕತೆ ಇದೆ. ವಿರೋಧ ಪಕ್ಷದಲ್ಲಿನ ಒಡಕಿನ ಲಾಭ ಪಡೆದು ಆಡಳಿತ ಪಕ್ಷ ಮೈಮರೆಯಬಾರದು. ಬಹುಮತದಿಂದ ಸರ್ಕಾರ ರಚನೆಯಾದರೂ, ಪಂಚ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ಶಾಸಕರಿಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಸಭೆ ನಡೆಸಿದ್ದಾರೆ. ಬಹುಶಃ ಎಲ್ಲಾ ಕ್ಷೇತ್ರಗಳಿಗೂ ಅನುದಾನ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸರ್ವ ಜನಾಂಗದ ಶಾಂತಿಯ ತೋಟ ಎಂಬ ಖ್ಯಾತಿಯನ್ನು ಈ ರಾಜ್ಯ ಉಳಿಸಿಕೊಂಡು ಬೆಳೆಸಿಕೊಂಡು ಹೋಗಲಿ ಎಂದರು.


ನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 1003 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 15,000 ಸಂಬಳ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.