ನವರಾತ್ರಿ ವೈಭವಕ್ಕೆ ತೆರೆ | ಶೃಂಗೇರಿಯಲ್ಲಿ ವಿಜೃಂಭಣೆಯ ಮಹಾರಥೋತ್ಸವ

ಶೃಂಗೇರಿ ಶಾರದಾ ಶರನ್ನವರಾತ್ರಿ ಉತ್ಸವ ನಿನ್ನೆ ವಿಜೃಂಭಣೆಯ ತೆರೆ ಬಿದ್ದಿದೆ. ದಿನಕ್ಕೊಂದು ವಿಶೇಷ ಅಲಂಕಾರದಲ್ಲಿ ಅಲಕೃತಗೊಂಡು ಭಕ್ತರಿಗೆ ದರ್ಶನ ನೀಡಿದ ಶೃಂಗೇರಿ ಶಾರದೇ, ನಿನ್ನೆ ಗಜಲಕ್ಷ್ಮೀ ಅಲಂಕಾರದಲ್ಲಿ ಮಹಾರಥೋತ್ಸವ ಹಾಗೂ ವರ್ಷಕ್ಕೊಮ್ಮೆ ನಡೆಯುವ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ಈ ವಿಜೃಂಭಣೆಯ ಮಹಾರಥೋತ್ಸವನ್ನು ಸಾವಿರಾರು ಜನ ಪಾಲ್ಗೊಂಡಿದ್ದರು.


ಇದನ್ನೂ ಓದಿ; ಗ್ರಾಮ ಪಂಚಾಯಿತಿ ಸದಸ್ಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ


ರಾಜಬೀದಿಯ ಉತ್ಸವದಲ್ಲಿ ಚಂಡೆ, ಭಜನೆ, ಭಜನಾ ಕುಣಿತ, ನವಶಕ್ತಿ ವೈಭವದ ವೇಷಧಾರಿಗಳು, ಭಜರಂಗಿ ವೇಷಧಾರಿ, ಶಾರದೇ, ನರಸಿಂಹ, ಶ್ರೀರಾಮ, ಜಾರುಗಂಬ ಕ್ರೀಡೆ ಹಲವು ಸಾಂಸ್ಕೃತಿಕ ಹಾಗೂ ಪಾರಂಪರಿಕ ವೈಭವ ಸಾರುವ ಅನೇಕ ಸ್ಥಬ್ಧಚಿತ್ರಗಳು ಮಹಾರಥೋತ್ಸವದ ಮೆರುಗು ಹೆಚ್ಚಿಸಿದವು.

ಬಾಳೆಹೊನ್ನೂರಿನಲ್ಲಿ ಅದ್ದೂರಿ ತೆರೆ ಕಂಡ ದುರ್ಗಾದೇವಿ ನವರಾತ್ರಿ:
ದುರ್ಗಾದೇವಿ ಪೂಜಾ ಸಮಿತಿ ಆಯೋಜಿಸಿದ್ದ ದುರ್ಗಾದೇವಿ ನವರಾತ್ರಿ ಉತ್ಸವದ ಕೊನೆ ದಿನ ದುರ್ಗಾದೇವಿ ಜಲಸ್ತಂಭನ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು. ಮುಖ್ಯ ರಸ್ತೆಯಲ್ಲಿ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದು, ಮೆರವಣಿಗೆಯಲ್ಲಿ ಈಶ್ವರ, ಗಣಪತಿ, ಗರುಡ ದೇವರುಗಳ ಸ್ತಬ್ದಚಿತ್ರ, ಪಂಚದೇವತೆಗಳ ನಡೆದಾಡುವ ಸ್ತಬ್ಧ ಚಿತ್ರ, ಮಹಿಳೆಯರ ವೀರಗಾಸೆ, ಡೊಳ್ಳುಕುಣಿತ, ಪುರುಷ ಮತ್ತು ಮಹಿಳೆಯರ ಹುಲಿ ವೇಷ, ಮರಗೋಲು, ಚಂಡೆ, ಪುರುಷರ ಬೊಂಬೆ ಕುಣಿತ, ನವಿಲು ಕುಣಿತ, ನಂದಿಧ್ವಜ, ಸೋಮನ ಕುಣಿತ ಭಜನೆ, ನಗಾರಿ, ಕೇರಳದ ಚಂಡೆ, ಕಾವಡಿ ನೃತ್ಯ, ಮೀನು ನರ್ತನ, ಧೈಯ್ಯಂ ನೃತ್ಯ, ಪಕ್ಷಿಗಳ ನರ್ತನ, ಹಲಗೆ ಓಲಗ, ಭಜನೆ, ಕಾಡು ಕೋಣ, ಬೇಟೆಗಾರ, ಮಂಗಳೂರಿನ ಕಂಬಳದ ಮಾದರಿ, ಬೃಹತ್ ಆನೆ, ಸಿಂಹ, ಹುಲಿ ವೇಷ, ದೋಣಿ ನೃತ್ಯ ಸೇರಿದಂತೆ 20ಕ್ಕೂ ಅಧಿಕ ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರುಗು ನೀಡಿದವು.

ಶಕಟಪುರ, ಶ್ರೀಮಠ ಹರಿಹರಪುರದ ದೇಗುಲಗಳಲ್ಲಿ ವಿಶೇಷ ಪೂಜೆ:
ಆಯುಧ ಪೂಜೆ ಹಾಗೂ ವಿಜಯದಶಮಿ ನಿಮಿತ್ತ ತಾಲೂಕಿನ ವಿವಿಧ ದೇಗುಲಗಳಲ್ಲಿ ಶುಕ್ರವಾರ ಹಾಗೂ ಶನಿವಾರ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇಗುಲಗಳಲ್ಲಿ ವಾಹನ ಹಾಗೂ ಆಯುಧ ಪೂಜೆ ಶುಕ್ರವಾರ ಬೆಳಗ್ಗೆಯಿಂದಲೇ ನಡೆಯಿತು. ತಾಲೂಕಿನ ಬೊಮ್ಮಲಾಪುರದ ಶ್ರೀಪುರಾಂತಕೀ ಅಮ್ಮನವರು, ಕುಂಚೂರು ದುರ್ಗಾಪರಮೇಶ್ವರೀ, ಹುಲ್ಲುಮಕ್ಕಿ ಗುತ್ತಿಯಮ್ಮ, ಕೊಪ್ಪ ನೇತಾಜಿ ನಗರದ ದುರ್ಗಾಪರಮೇಶ್ವರಿ, ಹರಿಹರಪುರ ಶ್ರೀಮಠ, ಶಕಟಪುರ ಶ್ರೀಮಠಗಳಲ್ಲಿ ದುರ್ಗಾಷ್ಟಮೀ, ಮಹಾನವಮೀ, ಆಯುಧ ಪೂಜೆ, ವಿಜಯದಶಮಿ, ಚಂಡಿಕಾ ಹವನಗಳು ನಡೆದವು.


ಇದನ್ನೂ ಓದಿ; 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ; ಒಂದು ಕುಟುಂಬದಲ್ಲಿ ಎಷ್ಟು ಮಂದಿ ಆಯುಷ್ಮಾನ್ ಕಾರ್ಡ್ ಪಡೆಯಬಹುದು?


ಎನ್.ಆರ್.ಪುರ: ಭದ್ರಾ ಹಿನ್ನೀರಿನಲ್ಲಿ ಜಲಸ್ತಂಭನಗೊಂಡ ಶ್ರೀದೇವಿ:
ಎನ್.ಆರ್.ಪುರ ಪಟ್ಟಣದ ಶರನ್ನವರಾತ್ರಿ ಸೇವಾ ಸಮಿತಿ ಗಣಪತಿ ಪೆಂಡಾಲ್ ನಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀದೇವಿಯನ್ನು ಶನಿವಾರ ಭದ್ರಾ ಹಿನ್ನೀರಿನಲ್ಲಿ ಜಲಸ್ತಂಭನಗೊಳಿಸಲಾಯಿತು. ದೇವಿಯ ಉತ್ಸವ ವಾದ್ಯಗೋಷ್ಠಿಯೊಂದಿಗೆ ಹೊರಟು ಪದ್ಧತಿಯಂತೆ ಗ್ರಾಮ ದೇವತೆಗಳಾದ ಶ್ರೀ ಗುತ್ಯಮ್ಮ, ಶ್ರೀ ಅಂತರಘಟ್ಟಮ್ಮ, ಶ್ರೀ ಕೊಟ್ಟೂರು ಬಸವೇಶ್ವರ ದೇವರುಗಳೊಂದಿಗೆ ಮಾರನವಮಿ ಬಯಲಿಗೆ ತೆರಳಿತು. ನಂತರ ತಹಸೀಲ್ದಾರ್ ತನುಜಾ ಸವದತ್ತಿ ಅವರಿಂದ ಬನ್ನಿ ಮುರಿಯುವ ಕಾರ್ಯಕ್ರಮ ನಡೆಯಿತು. ರಾಜಬೀದಿಯಲ್ಲಿ ಸಾಗಿದ ಶ್ರೀದೇವಿಯ ಮೆರವಣಿಗೆ ಮೆಣಸೂರು ಸಮೀಪದ ಭದ್ರಾ ಹಿನ್ನೀರಿಗೆ ತಲುಪಿತು. ಅಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ನಂತರ ಆಕರ್ಷಕ ಸಿಡಿಮದ್ದು ಪ್ರದರ್ಶನ, ಭದ್ರಾ ಹಿನ್ನೀರಿನಲ್ಲಿ ತೆಪ್ಪೋತ್ಸವ ನಂತರ ದೇವಿಯ ವಿಗ್ರಹವನ್ನು ಜಲಸ್ತಂಭನಗೊಳಿಸಲಾಯಿತು.

ಕೊಪ್ಪ: ವಿಜೃಂಭಣೆಯಿಂದ ನಡೆದ 47ನೇ ಗಣೇಶ-ದುರ್ಗಿ ಮಹೋತ್ಸವ:
ಕೊಪ್ಪ ಪಟ್ಟಣದ ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಲಾದ 47ನೇ ಗಣೇಶ-ದುರ್ಗಿ ಮಹೋತ್ಸವ ಶನಿವಾರ ಪಟ್ಟಣದ ಮುಖ್ಯ ಬೀದಿಗಳಲ್ಲಿ ಚಂಡೆ ಹಾಗೂ ಇನ್ನಿತರ ಕಲಾ ತಂಡಗಳೊಂದಿಗೆ ರಾಜಬೀದಿ ಉತ್ಸವ ನಡೆಯಿತು.


ಇದನ್ನೂ ಓದಿ; ಅನ್ನಭ್ಯಾಗ್ಯ ಯೋಜನೆಯ ಹಣ ಜಮಾ!; ಆಹಾರ ಸಚಿವರಿಂದ ಸ್ಪಷ್ಟನೆ


ಪೌರ ಕಾರ್ಮಿಕರ ಗಣೇಶೋತ್ಸವದ ಲಾಟರಿ ಡ್ರಾ:
ಪೌರ ಗಣೇಶೋತ್ಸವ ಸಮಿತಿ ಕೊಪ್ಪ ಇವರ ವತಿಯಿಂದ ಸುವರ್ಣ ಮಹೋತ್ಸವದ ಪ್ರಯುಕ್ತ ಅದೃಷ್ಟ ಬಹುಮಾನ ಯೋಜನೆಯನ್ನು ನಿನ್ನೆ (13.10.2024) ನಡೆಸಿದ್ದು, ಇದರಲ್ಲಿ 50 ಆಕರ್ಷಕ ಬಹುಮಾನಗಳ ವಿಜೇತರು ಪಟ್ಟಿ ಈ ಕೆಳಗೆ ನೀಡಲಾಗಿದೆ.

ಬಹುಮಾನದ ವಿಜೇತರುಗಳು:
ಆಲ್ಟೊ k10: 16708
1st – 24099
2nd- 17011
3rd- 23082
4th- 29502
5th- 24799
6th- 24419
7th- 20371
8th- 14078
9th- 14663

ಫ್ಯಾನ್- 12603 /13471 /13530 /17939 /28956 (5 ಜನರಿಗೆ)
ಇಂಡಕ್ಷನ್- 25324 /17865 /17606 /13029 /21634
ಮಿಕ್ಸರ್- 15944 /18394 /19321 /12018 /21474
ಚೇರ್- 19939 /25759 /29217 /17104 /29099
ಕುಕ್ಕರ್- 27295 /10824 /20646 /29404 /23143
iron ಬಾಕ್ಸ್- 25800 /12234 /18207 /23216 /24741
ಸ್ಮಾರ್ಟ್ ವಾಚ್-19792 /27187 /13219 /11580 /18596
wallclock-15004 /19657 /25341 /16473 /24938

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.