
ಎನ್. ಆರ್.ಪುರ: ನಾಡಕಚೇರಿಗೆ ಬೀಗ ಹಾಕಿ ಗಣರಾಜ್ಯೋತ್ಸವ ಆಚರಿಸದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ತಾತ್ಕಾಲಿಕವಾಗಿ ಬಾಳೆಹೊನ್ನೂರಿನ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ನಾಡಕಚೇರಿ ಇದ್ದು, ಹೊಸ ನಾಡಕಚೇರಿಯೂ ಪ್ರಾರಂಭವಾಗಿದೆ. ಎಲ್ಲ ಕಡೆ ಗಣರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿ ತೊಡಗಿ ಧ್ವಜಾರೋಹಣ ಮಾಡುತ್ತಿದ್ದರೆ, ಬಾಳೆಹೊನ್ನೂರಿನ ಹಳೆಯದು – ಹೊಸದು ಎರಡಲ್ಲೂ ಯಾವುದೇ ರೀತಿಯ ಧ್ವಜಾರೋಹಣ ಕಾಣಿಸುತ್ತಿಲ್ಲ.

ಗಣರಾಜ್ಯೋತ್ಸವ ಆಚರಿಸದೆ ಅಧಿಕಾರಿಗಳು ನಾಡಕಚೇರಿಗೆ ಬೀಗ ಹಾಕಿದ್ದಾರೆ. ಅಧಿಕಾರಿಗಳ ಈ ವರ್ತನೆಯಿಂದ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.













