ಚಾರ್ಮಾಡಿ ಘಾಟಿಯಲ್ಲಿ ಕಸ ಹಾಕಿದವನಿಂದಲೇ ಕಸ ಕ್ಲೀನ್: ಕೇಸ್ ದಾಖಲು

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಕಸ ಎಸೆದು ಹೋಗಿದ್ದ ವಾಹನವನ್ನು ಪತ್ತೆ ಹಚ್ಚಿರುವ ಪೊಲೀಸರು ಕೆಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.


ಇದನ್ನೂ ಓದಿ: SSLC ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ತಿಂಗಳಿಗೆ ಸಿಗಲಿದೆ 3,500 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಚಾರ್ಮಾಡಿ ಘಾಟ್ ನಲ್ಲಿ ಗಸ್ತು ತಿರುಗುತ್ತಿದ್ದ ಬಣಕಲ್ ಪೊಲೀಸ್ ಸಬ್ ಇನ್‌ಸ್ಪೆಕ್ಚರ್ ಡಿ.ವಿ ರೇಣುಕಾ ಮಾಹಿತಿ ನೀಡಿ, ಮಂಗಳವಾರ ಹಾಸನದ ಎಳನೀರು ವಾಹನದ ಚಾಲಕ ಕಸವನ್ನು ಘಾಟ್ ನಲ್ಲಿ ಬಿಸಾಕಿ ಮಂಗಳೂರು ಕಡೆಯಿಂದ ಕೊಟ್ಟಿಗೆಹಾರದ ಕಡೆಗೆ ತೆರಳಿದ್ದ. ಅದರ ಜಾಡು ಹಿಡಿದು ಚಾರ್ಮಾಡಿ ಘಾಟ್ ನಲ್ಲಿ ಗಸ್ತಿನಲ್ಲಿದ್ದ ಪಿಎಸ್‌ಐ ವಾಹನವನ್ನು ಗೇಟ್ ನಲ್ಲಿ ಹಿಡಿದು ವಾಪಸ್ ಕರೆ ತಂದು ಅದೇ ಕಸವನ್ನು ಚಾಲಕನಿಂದಲೇ ತುಂಬಿಸಲಾಗಿದೆ.

ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ದಂಡ ವಿಧಿಸಿ, ಕಸವನ್ನು ಅವರಿಂದಲೇ ತೆರವುಗೊಳಿಸುವ ಮೂಲಕ ಚಾಲಕನಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು ಎಂದು ಮಾಹಿತಿ ನೀಡಿದರು. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.


ಇದನ್ನೂ ಓದಿ: 9 ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್; ತಿಂಗಳಿಗೆ ಸಿಗಲಿದೆ 1,000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಕಡೂರು: ಸರ್ಕಾರಿ ಕಚೇರಿ ಸೇರಿದಂತೆ ವಿವಿಧೆಡೆ ಪ್ರಿಂಟರ್ ಕಳವು: ಆರೋಪಿ ಬಂಧನ

ಕಡೂರು: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ 3 ಪ್ರಿಂಟರ್ ಕಳವು ಮಾಡಿದ್ದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ವಿವಿಧೆಡೆ ಕಳವು ಮಾಡಿದ್ದ ಪ್ರಿಂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ತುಮಕೂರು, ಹಾಸನ, ಮಂಡ್ಯ ಸೇರಿದಂತೆ ಚಿಕ್ಕಮಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿರುವ ಸರ್ಕಾರಿ ಕಚೇರಿ, ಮೆಸ್ಕಾಂ ಮತ್ತು ಬೆಸ್ಕಾಂ ಕಛೇರಿ, ನ್ಯಾಯಾಲಯ ಮತ್ತು ಕಾಲೇಜುಗಳಿಂದ ಪ್ರಿಂಟರ್ ಗಳನ್ನು ಕಳವು ಮಾಡಿದ್ದು, ಸುಮಾರು 6.22 ಲಕ್ಷ ಬೆಲೆಯ 79 ಪ್ರಿಂಟರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ತಂಡದಲ್ಲಿ ಸಿಪಿಐ ಕಡೂರು ದುರುಗಪ್ಪ ಕೆ, ಪಿ.ಎಸ್.ಐ ನವೀನ್ ಎನ್. ಪಿ ಮತ್ತು ಪವನ್ ಕುಮಾರ್ ಸಿ . ಸಿ, ಸಿಬ್ಬಂದಿಗಳಾದ ಮಂಜುನಾಥಸ್ವಾಮಿ, ಕುಚೇಲ, ಸ್ವಾಮಿ, ದೇವರಾಜ್, ಬೀರೇಶ, ಮಧು, ಹರೀಶ, ಮಹಮ್ಮದ್ ರಿಯಾಜ್, ಈಶ್ವರಪ್ಪ, ಕಿಶೋರ್, ರವಿ ಕುಮಾರ್, ಧನಪಾಲನನಾಯ್ಕ ಮತ್ತು ಜಯಮ್ಮ ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.