ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಬಿ.ಜೆ.ಪಿ ಕಛೇರಿ ಎದುರು ನಡೆದಿದ್ದ ಗಲಾಟೆ ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ.ರತನ್ ಅವರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಬಣಕಲ್ ಹೋಬಳಿ ಅಧ್ಯಕ್ಷ ಮತ್ತು ಮೂಡಿಗೆರೆ ಪಟ್ಟಣ ಪಂಚಾಯಿತಿ ಸದಸ್ಯ ಪಿ.ಜಿ. ಅನುಕುಮಾರ್ ಹಾಗೂ ಗೋಣಿಬೀಡು ಹೋಬಳಿ ಅಧ್ಯಕ್ಷ ಕನ್ನೇಹಳ್ಳಿ ಭರತ್ ಇವರುಗಳನ್ನು ಅಮಾನತು ಮಾಡಲಾಗಿದ್ದು, ಈ ಸಂಬಂಧ ಪಕ್ಷದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ; ನರೇಗಾ ಕಾರ್ಮಿಕರಿಗೆ ಕೇಂದ್ರದಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ ಡಿಟೈಲ್ಸ್

ಏನಿದು ಗಲಾಟೆ:
ಕಳೆದ 9 ರಂದು ಪಕ್ಷದ ವತಿಯಿಂದ ಏರ್ಪಡಿಸಿದ್ದ ಗ್ರಾಮ ಚಲೋ ಅಭಿಯಾನದ ಕಾರ್ಯಾಗಾರದಲ್ಲಿ ಭಾಗವಹಿಸಿ ಹೊರಬಂದಿದ್ದ ಪಕ್ಷದ ಮುಖಂಡರಾದ ಕೆ.ಸಿ ರತನ್ ಅವರ ಮೇಲೆ ಪಕ್ಷದ ಗೋಣಿಬೀಡು ಹೋಬಳಿ ಅಧ್ಯಕ್ಷ ಭರತ್ ಕನ್ನೇಹಳ್ಳಿ ಹಾಗೂ ಬಣಕಲ್ ಹೋಬಳಿ ಅಧ್ಯಕ್ಷ ಅನುಕುಮಾರ್, ನೂತನ ಮಂಡಲ ಅಧ್ಯಕ್ಷರ ಘೋಷಣೆಯ ಹಿನ್ನೆಲೆಯಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸಿ ಅವಾಚ್ಯ ಶಬ್ದಗಳನ್ನು ಬಳಸಿ, ಅಸಭ್ಯವಾಗಿ ವರ್ತನೆ ಮಾಡಿ, ಏಕಾಏಕಿ ಹಲ್ಲೆ ಮಾಡಿದ್ದು, ಪಕ್ಷದ ಗೌರವಕ್ಕೆ ಧಕ್ಕೆ ತಂದಿರುತ್ತಾರೆ. ಜಿಲ್ಲಾ ಮುಖಂಡರ ಸಮ್ಮುಖದಲ್ಲೇ ಈ ರೀತಿಯ ಕೃತ್ಯ ಎಸಗಿರುವುದನ್ನು ಪಕ್ಷವು ಖಂಡಿಸುತ್ತದೆ. ಆದ್ದರಿಂದ ಇಬ್ಬರನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತು ಆದೇಶವನ್ನು ದೇವರಾಜ್ ಶೆಟ್ಟಿ ಪ್ರಕಟಣೆ ಹೊರಡಿಸಿದ್ದರು.
ಇದನ್ನೂ ಓದಿ; ಗ್ಯಾರಂಟಿ ಯೋಜನೆಯ ಹಣ ಬಂದಿಲ್ವಾ..?; ಹಾಗಾದ್ರೆ ಇಲ್ಲಿದೆ ಗುಡ್ ನ್ಯೂಸ್
ಈ ಸಂಬಂಧ ಅಮಾನತು ಮಾಡಿರುವ ಕ್ರಮ ಸರಿಯಲ್ಲ, ಯಾವುದೇ ನೋಟೀಸ್ ನೀಡದೇ, ವಿವರಣೆ ಕೇಳದೆ, ಪ್ರಕರಣದ ತನಿಖೆ ನಡೆಸದೆ ಏಕಾಏಕಿ ಅಮಾನತು ಮಾಡಲಾಗಿದೆ ಎಂದು ಅನುಕುಮಾರ್ ಮತ್ತು ಭರತ್ ಅವರನ್ನು ಬೆಂಬಲಿಸಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ದೊಡ್ಡ ಪಡೆ ತಮ್ಮ ಅಸಮದಾನ ಹೊರಹಾಕಿದ್ದಾರೆ. ಬುಧವಾರ ಸಂಜೆ ಪಿ.ಜಿ. ಅನುಕುಮಾರ್ ಅವರ ಪಟ್ಟದೂರು ಗ್ರಾಮದ ನಿವಾಸದಲ್ಲಿ ಸಭೆ ಸೇರಿದ್ದ ಸುಮಾರು 200 ಕ್ಕೂ ಅಧಿಕ ಬಿ.ಜೆ.ಪಿ ಮುಖಂಡರು ಮತ್ತು ಕಾರ್ಯಕರ್ತರು ಅನುಕುಮಾರ್ ಮತ್ತು ಭರತ್ ಅವರಿಗೆ ತಮ್ಮ ನೈತಿಕ ಬೆಂಬಲ ಸೂಚಿಸಿದ್ದಾರೆ ಮತ್ತು ಅಮಾನತು ಮಾಡಿರುವ ಜಿಲ್ಲಾಧ್ಯಕ್ಷರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಅನುಕುಮಾರ್ ಮತ್ತು ಭರತ್ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಹಲವು ದಶಕಗಳಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಪಕ್ಷದ ವಿಚಾರದಲ್ಲಿ ಮುಂದೆ ನಿಂತು ಹೋರಾಟ ಮಾಡಿದ್ದಾರೆ. ಉತ್ತಮ ಜನಸಂಪರ್ಕ ಹೊಂದಿದ್ದಾರೆ. ಅವರನ್ನು ಯಾವುದೇ ಮಾರ್ಗಸೂಚಿ ಅನುಸರಿಸಿದೆ, ವಿವರಣೆ ಕೇಳದೆ ಏಕಾಏಕಿ ಜಿಲ್ಲಾಧ್ಯಕ್ಷರು ಅಮಾನತು ಮಾಡಿರುವ ಕ್ರಮವನ್ನು ಪಕ್ಷದ ಮುಖಂಡ ವಿ.ಕೆ.ಶಿವೇಗೌಡ ಸೇರಿದಂತೆ ಅನೇಕರು ಖಂಡಿಸಿದ್ದಾರೆ. ಈ ವಿಚಾರದಲ್ಲಿ ಜಿಲ್ಲೆ ಮತ್ತು ರಾಜ್ಯಮಟ್ಟದ ವರೆಗೆ ಹೋರಾಟ ಮಾಡಲು ಕಾರ್ಯಕರ್ತರು ಸಿದ್ಧರಿದ್ದೇವೆ. ಅಮಾನತು ವಾಪಾಸ್ಸು ಪಡೆಯಬೇಕು. ಇಲ್ಲದೇ ಇದ್ದರೆ ಮುಂದೆ ಕಠಿಣ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ ಎಂದು ಸಭೆಯಲ್ಲಿ ಸೇರಿದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಡುವೆ ಈ ಇಬ್ಬರು ಮುಖಂಡರುಗಳಿಗೆ ಬೆಂಬಲ ಸೂಚಿಸಿ ಸಾಮಾಜಿಕ ಮಾಧ್ಯಮಗಳಲ್ಲಿ “We stand with you Puttu & Bharath” ಎಂದು ಅಭಿಯಾನ ಆರಂಭಿಸಿದ್ದಾರೆ.
ಜಯಪುರ: ಕಾಡು ಪ್ರಾಣಿಯ ಮಾಂಸ ಶೇಖರಣೆ : ಆರೋಪಿಗಳ ಬಂಧನ
ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಕಾಡು ಪ್ರಾಣಿಯ ಮಾಂಸ ಶೇಖರಣೆ ಮಾಡಿಟ್ಟಿದ್ದ ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ಎಲೆಮಡಲು ಗ್ರಾಮದಲ್ಲಿ ನಡೆದಿದೆ. ವಿಜೇಂದ್ರ ನಾಯ್ಕ(44), ವಿಶ್ವನಾಥ(37) ಬಂಧಿತ ಆರೋಪಿಗಳು.
ಇದನ್ನೂ ಓದಿ; ರೈತರೇ ಗಮನಿಸಿ; ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ; ಯಾವುದೆಲ್ಲಾ ಸೌಲಭ್ಯ, ಎಲ್ಲಿ ಅರ್ಜಿ ಸಲ್ಲಿಕೆ?
ಎಲೆಮಡಲು ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದ ಕಾಡುಕುರಿಯ ಮಾಂಸವನ್ನು ತಯಾರಿಸಿ, ಮನೆಯಲ್ಲಿ ಶೇಖರಣೆ ಮಾಡಿರುವುದರ ಹಿನ್ನೆಲೆ ಆರೋಪಿಗಳಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಿಂದ 1.055 ಕೆ.ಜಿ ಕಾಡುಕುರಿಯ ಮಾಂಸವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.












