ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಸಾರ್ವಜನಿಕ ತಿನಿಸುಗಳ ಜಾತ್ರೆ ಶನಿವಾರ ನಡೆಯಿತು.
ಇದನ್ನೂ ಓದಿ; ರಾಜ್ಯದ ರೈತರಿಗೆ ಗುಡ್ ನ್ಯೂಸ್; ಬರಪರಿಹಾರದ ಹಣ ಜಮಾ; ನಿಮಗೂ ಬಂತಾ ಹಣ, ಹೀಗೆ ಚೆಕ್ ಮಾಡಿ

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹಮ್ಮದ್ ಇದ್ರೀಸ್ ಕಾರ್ಯಕ್ರಮ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಯ ಮಕ್ಕಳು ಮನೋರಂಜನೆ ಹಾಗೂ ವ್ಯವಹಾರದ ಜ್ಞಾನದ ದೃಷ್ಟಿಯಿಂದ ಮಕ್ಕಳಿಗೆ ಫನ್ ಫೇರ್ ಕಾರ್ಯಕ್ರಮ ಆಯೋಜಿಸಿದ್ದೇವೆ. ಮಕ್ಕಳು ಹಾಗೂ ಪೋಷಕರು ತಿಂಡಿ, ತಿನಿಸು ಹಾಗೂ ಫಲಹಾರಗಳ ಮಾರುವುದರಲ್ಲಿ ಉತ್ಸಾಹಕತೆ ತೋರುತ್ತಿದ್ದಾರೆ. ಇದೊಂದು ಅನನ್ಯ ಅನುಭವ ಮಕ್ಕಳಲ್ಲಿ ಮೂಡಿದೆ ಎಂದರು.
ಇದನ್ನೂ ಓದಿ; ಮಹಾನಗರ ಪಾಲಿಕೆಯಲ್ಲಿ ಉದ್ಯೋಗಾವಕಾಶ; 93 ಪೌರಕಾರ್ಮಿಕರ ಭರ್ತಿಗೆ ಅಧಿಸೂಚನೆ
ಈ ಸಂದರ್ಭದಲ್ಲಿ ಬಣಕಲ್ ಗ್ರಾ.ಪಂ.ಅಧ್ಯಕ್ಷೆ ಅತಿಕಾ ಭಾನು, ಸದಸ್ಯ ಇರ್ಫಾನ್, ಸಿರಾಜ್ಜುದ್ದೀನ್, ಮುಖ್ಯ ಶಿಕ್ಷಕಿ ರೇಷ್ಮಾ, ಶಿಕ್ಷಕರಾದ ಹಾಜಿರಾಕಾತುನ್, ಸೆಲಿನಾ, ಫಾತೀಮಾ, ಹೀನಾ, ಮುತಾಹೀರಾ, ರೂಹಿ ಮತ್ತಿತರರು ಇದ್ದರು. (ವರದಿ- ತನು ಕೊಟ್ಟಿಗೆಹಾರ)
ಚಿಕ್ಕಮಗಳೂರು: ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ | ಮುಖಂಡರ ನಡುವೆ ಹೊಡೆದಾಟ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಮೂಡಿಗೆರೆ ತಾಲೂಕು ಅಧ್ಯಕ್ಷ ನೇಮಕ ವಿಚಾರದಲ್ಲಿ ಬಿಜೆಪಿ ಮುಖಂಡರು ಹೊಡೆದಾಡಿಕೊಂಡಿದ್ದಾರೆ.
ಇದನ್ನೂ ಓದಿ; ಅಡಿಕೆ, ಕಾಫಿ, ಕಾಳುಮೆಣಸು ಖರೀದಿಸುವವರಿಗೆ ಎಚ್ಚರಿಕೆಯ ಸೂಚನೆ ನೀಡಿದ ಪೊಲೀಸ್ ಇಲಾಖೆ
ಮೂಡಿಗೆರೆ ನೂತನ ಅಧ್ಯಕ್ಷರನ್ನಾಗಿ ಗಜೇಂದ್ರ ಅವರನ್ನು ನೇಮಕ ಮಾಡಿ ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಆದೇಶ ಹೊರಡಿಸಿದ್ದು, ಇದರ ಬೆನ್ನಲ್ಲೇ ಇನ್ನುಳಿದ ಆಕಾಂಕ್ಷಿಗಳ ಆಕ್ರೋಶಕ್ಕೆ ಕಾರಣವಾಗಿದೆ.












