ಮೂಡಿಗೆರೆ: ಫುಟ್ ಪಾತ್ ಮೇಲೆ ವ್ಯಾಪಾರ: ವರ್ತಕರಿಗೆ ಎಚ್ಚರಿಕೆ ಕೊಟ್ಟ ಬಣಕಲ್ ಪಿ.ಎಸ್.ಐ ರೇಣುಕಾ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ಹೋಟೆಲ್ ಮತ್ತು ಅಂಗಡಿಗಳ ಎದುರು ಎಳೆನೀರು, ಸೋಡಾ ಕ್ರೆಟ್ ಮುಂತಾದ ವಸ್ತುಗಳನ್ನ ಫುಟ್ ಪಾತ್ ನಲ್ಲಿ ಇಟ್ಟು ವ್ಯಾಪಾರ ಮಾಡುತ್ತಿದ್ದು, ಫುಟ್ ಪಾತ್ ನಲ್ಲಿ ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ತೊಂದರೆಯಾಗುದನ್ನ ಗಮನಿಸಿ ಬಣಕಲ್ ಪಿ.ಎಸ್.ಐ ರೇಣುಕಾ ಮಾರ್ಗದರ್ಶನದಲ್ಲಿ ಎ.ಎಸ್.ಐ ಶಶಿ ಹಾಗೂ ಪೊಲಿಸರಿಂದಾ ವರ್ತಕರಿಗೆ ಎಚ್ಚರಿಕೆ ಕೊಟ್ಟು ಲಘು ಪ್ರಕರಣ ಹಾಕಲಾಯಿತು.

 

ಇದನ್ನೂ ಓದಿ; ಯುವಜನತೆಗೆ ಗುಡ್ ನ್ಯೂಸ್; ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನ

ರಾತ್ರಿ 10 ಗಂಟೆ ಸಮಯಕ್ಕೆ ಅಂಗಡಿ ಮುಂಗಟ್ಟುಗಳು ಬಂದ್ ಗೆ ಸೂಚಿಸಿದ್ದು, ಮದ್ಯ ರಾತ್ರಿ ಎರಡು ಗಂಟೆ ಸಮಯದಲ್ಲಿ ಕೆಲವು ಕ್ಯಾಂಟೀನ್ ಗಳು ತೆರೆದು ವ್ಯಾಪಾರ ಮಾಡುತ್ತಿದ್ದಾರೆ ಎಂದು ಕೆಲವರಿಂದ ದೂರು ಬಂದಿದ್ದು, ಅಂತಹವರಿಗೆ ದಂಡ ಹಾಕಲಾಗುವುದು ಎಂದೂ ಖಡಕ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಈ ಯೋಜನೆಯಡಿ 12,000 ನೆರವು

ಧರ್ಮಸ್ಥಳ – ಹೊರನಾಡು ಹಾಗೂ ಪ್ರವಾಸ ಸ್ಥಳಗಳಿಗೆ ಬಂದಂತಹ ಪ್ರವಾಸಿಗರ ವಾಹನಗಳು ಕೊಟ್ಟಿಗೆಹಾರ ಪಟ್ಟಣದ ರಸ್ತೆಯಲ್ಲಿಯೇ ಅಡ್ಡ ದಿಡ್ಡಿ ವಾಹನಗಳು ನಿಲ್ಲಿಸಿದ್ದರೆ ದಂಡ ಹಾಕಲಾಗುವುದು ಎಂದು ಅವರ್ನೆಸ್ ಮೂಲಕ ಜಾಗೃತಿ ಮೂಡಿಸಿ ವಾಹನ ಚಾಲಕರಿಗೆ ಎಚ್ಚರಿಕೆ ನೀಡಿದರು. (ವರದಿ- ತನು ಕೊಟ್ಟಿಗೆಹಾರ)

 

ಚಿಕ್ಕಮಗಳೂರು: ಕ್ರಿಕೆಟ್ ಆಡಲು ಬಂದಿದ್ದ ಪಶುವೈದ್ಯ ಸಾವು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕ್ರಿಕೆಟ್ ಆಡಲು ಬಂದಿದ್ದ ಪಶುವೈದ್ಯ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಸೋಮವಾರ ಪೇಟೆ ಪಶುವೈದ್ಯರಾಗಿದ್ದ ಶಿವಪ್ಪ ಬಾದಾಮಿ ಹೃದಯಾಘಾತದಿಂದ ಮೃತಪಟ್ಟ ವೈದ್ಯ.

 

ವಿಭಾಗ ಮಟ್ಟದ ಕ್ರಿಕೆಟ್ ಕ್ರೀಡಾಕೂಟಕ್ಕೆ ಆಗಮಿಸಿದ್ದ ಪಶುವೈದ್ಯ ಕ್ರಿಕೆಟ್ ಆಡಿ ಫೋಟೋ ಸೆಷೆನ್ ನಲ್ಲಿ ಪಾಲ್ಗೊಂಡು ನಂತರ ಕ್ರಿಕೆಟ್ ನೋಡುತ್ತಿದ್ದಂತೆ ಕುಳಿತಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಇತರೆ ವೈದ್ಯರು ಚಿಕಿತ್ಸೆಗೆ ಮುಂದಾದರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.

ಶಿವಪ್ಪ ಬಾದಾಮಿ ಅಕಾಲಿಕ ಮರಣಕ್ಕೆ ಪಶುವೈದ್ಯ ಲೋಕದ ಕಂಬನಿ ಮಿಡಿದಿದ್ದು, ಕ್ರೀಡಾಕೂಟವನ್ನು ಸ್ಥಗಿತಗೊಳಿಸಲಾಯಿತು. ಶಿವಪ್ಪ ಬಾದಾಮಿಯವರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.