ಮೂಡಿಗೆರೆ: ಆಕಸ್ಮಿಕ ಬೆಂಕಿ ತಗುಲಿ ಐದಾರು ಎಕರೆ ತೋಟ ನಾಶ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಆಕಸ್ಮಿಕವಾಗಿ ತೋಟಕ್ಕೆ ಬೆಂಕಿ ತಗುಲಿ ಐದಾರು ಎಕರೆ ತೋಟ ಭಸ್ಮವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೊರಟಿ ಗ್ರಾಮದಲ್ಲಿ ನಡೆದಿದೆ.


ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್


ಹೊರಟಿ ಗ್ರಾಮದ ವಿಜೇಂದ್ರ ಎಂಬುವವರಿಗೆ ಸೇರಿದ್ದ ತೋಟದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಕಾಫಿ, ಏಲಕ್ಕಿ, ಮೆಣಸು, ಅಡಕೆ ಗಿಡಗಳು ಬೆಂಕಿಗೆ ಸುಟ್ಟು ಭಸ್ಮವಾಗಿದೆ. ಕೂಡಲೇ ಸ್ಥಳೀಯ ಗ್ರಾಮಸ್ಥರು ಸೇರಿ ಬೆಂಕಿ ನಂದಿಸಿದ್ದಾರೆ.


ಇದನ್ನೂ ಓದಿ: ಉದ್ಯೋಗಕ್ಕಾಗಿ ನೀಡುವ ರೆಸ್ಯೂಮ್‌ ಈ ಕಾರಣಗಳಿಂದ ರಿಜೆಕ್ಟ್‌ ಆಗಬಹುದು.. ಎಚ್ಚರ!; ಜಾಬ್‌ಗೆ ಶಾರ್ಟ್‌ ಲಿಸ್ಟ್‌ ಆಗದಿರಲು ಸಾಮಾನ್ಯ ಕಾರಣಗಳೇನು?;  ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ


ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ:
ತೋಟಕ್ಕೆ ಬೆಂಕಿ ತಗಲಿರುವ ವಿಷಯ ಅರಣ್ಯ ಇಲಾಖೆಗೆ ತಿಳಿಸಿದರು ಕೂಡ ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)


ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್; ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ; ಯಾವೆಲ್ಲಾ ಯೋಜನೆಗಳಿಗೆ, ಇಲ್ಲಿದೆ ಡಿಟೈಲ್ಸ್


ಬಾಳೆಹೊನ್ನೂರು: ಕೃಷಿಕನ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ವಿಡಿಯೊ ಬಹಿರಂಗ

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) 2023 ರ ಅಕ್ಟೋಬರ್ 2 ರಂದು ಕೊಪ್ಪದ ಬಸ್ತಿ ಬಾಳಕ್ಕಿ ತೋಟದ ಮಾಲೀಕ ಸುರೇಶ್ ಆತ್ಮಹತ್ಯೆಗೂ ಮುನ್ನ ಮಾಡಿರುವ ವಿಡಿಯೊ ಬಹಿರಂಗವಾಗಿದ್ದು, ಅವರನ್ನು ಹೆದರಿಸಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸುರೇಶ್ ಅವರ ಸಹೋದರ ಸದಾನಂದ ಒತ್ತಾಯಿಸಿದರು.


ಇದನ್ನೂ ಓದಿ: 400 ರೂಪಾಯಿಗೆ LPG, 25,000 ಉದ್ಯೋಗ ಭರವಸೆ ನೀಡಿದ ಬಿಜೆಪಿ; ಈ ಘೋಷಣೆ ಯಾರಿಗೆ ಗೊತ್ತಾ?, ಇಲ್ಲಿದೆ ಡಿಟೈಲ್ಸ್


ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ಜನ ಗಂಡು ಮಕ್ಕಳು ಹಾಗೂ ಆರು ಜನ ಹೆಣ್ಣು ಮಕ್ಕಳಿರುವ ನಮ್ಮ ಕುಟುಂಬಕ್ಕೆ ಕೊಗ್ರೆ ಸಮೀಪದ ಬಸ್ತಿ ಬಾಳಕ್ಕಿ ಯಲ್ಲಿ 3.5 ಎಕರೆ ಜಾಗವಿದೆ. ಸಹೋದರ ಸುರೇಶ್ ಕುಟುಂಬದ ಆಧಾರ ಸ್ತಂಭವಾಗಿದ್ದರು. ಜಮೀನಿನ ಮಧ್ಯದಲ್ಲಿ ಹಾದು ಹೋಗಿರುವ ರಸ್ತೆ ವಿಚಾರವಾಗಿ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ಹಾಗೂ ಕೆಲ ವ್ಯಕ್ತಿಗಳು ನೀಡಿದ ಕಿರುಕುಳದಿಂದ ಮಾನಸಿಕವಾಗಿ ನೊಂದು ಸುರೇಶ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ.

ಮೃತರಿಗೆ ಇಬ್ಬರು ಪುತ್ರಿಯರು, ಪತ್ನಿ ಇದ್ದು, ಸರ್ಕಾರ ಪರಿಹಾರ ನೀಡಬೇಕು. ಸಾವಿಗೆ ಕಾರಣರಾದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನ್ಯಾಯ ಸಿಗದಿದ್ದರೆ ನಾವು ಕೂಡ ಸುರೇಶನ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; 17ನೇ ಕಂತಿನ ಹಣ ಬಿಡುಗಡೆ ಯಾವಾಗ?; ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಹೀಗೆ ಚೆಕ್ ಮಾಡಿ


ತಿಲಿಕೆ ರಾಘವೇಂದ್ರ ಮಾತನಾಡಿ, ಗಾರೆ ಕೆಲಸ ಮಾಡುತ್ತಿದ್ದ ಸುರೇಶ್ ನಮ್ಮ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. 2023 ರ ಮೇ 12 ರಂದು ರಸ್ತೆ ವಿಚಾರವಾಗಿ ಬಸ್ತಿ ಬಾಳಕ್ಕಿಯಲ್ಲಿ ಕಾಂಗ್ರೆಸ್ ಮುಖಂಡ ಕೀರ್ತಿ ಸುಂದರರಾಜ್ ಅವರು ಸುರೇಶ್ ಮೇಲೆ ಹಲ್ಲೇ ನಡೆಸಿದ್ದರು. ಇದರ ವಿರುದ್ಧ ಜಯಪುರ ಠಾಣೆಯಲ್ಲಿ ಎಸ್ಸಿ.ಎಸ್.ಟಿ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಹಲ್ಲೆಗೆ ಪ್ರತ್ಯಕ್ಷ ಸಾಕ್ಷಿ ಕೂಡ ನಾನಾಗಿದ್ದೇನೆ. ಹಲ್ಲೆಯಿಂದ ತೀವ್ರ ಮನನೊಂದಿದ್ದ ಸುರೇಶ್ ಎರಡೇ ದಿನದಲ್ಲಿ ಜೀವಭಯದಿಂದ ಮನೆ ತೊರೆದು ಬೇರೆ ಕಡೆಗೆ ತೆರಳಿದ್ದರು. ಮಾನಸಿಕವಾಗಿ ಕಿರುಕುಳ ನೀಡಿ ಸಾವಿಗೆ ಕಾರಣರಾದವರ ವಿರುದ್ಧ ಜಯಪುರ ಪೊಲೀಸರನ್ನು ಹೊರತುಪಡಿಸಿ ಬೇರೆ ಪೊಲೀಸರಿಂದ ತನಿಖೆಯಾಗಬೇಕು. ಇಲ್ಲದಿದ್ದಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದು ಎಂದು ಎಚ್ಚರಿಸಿದರು.

ಸಾವಿಗೆ ನ್ಯಾಯ ಒದಗಿಸುವಂತೆ ಕೋರಿ ಶಾಸಕ ಟಿ.ಡಿ.ರಾಜೇಗೌಡರಿಗೂ ಮನವಿ ಸಲ್ಲಿಸಿದ್ದೆವು. ಈವರೆಗೂ ಅವರಿಂದ ಯಾವುದೇ ಪ್ರತಿಕ್ರೀಯೆ ಬಂದಿಲ್ಲ ಎಂದು ಮೃತರ ಸಹೋದರ ನಾರಾಯಣ ಹೇಳಿದರು.


ಇದನ್ನೂ ಓದಿ: ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರಿಗೆ ಬಂಪರ್ ಜಾಬ್ ಆಫರ್; ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯ ವಿಜ್ಞಾನ ಸಂಸ್ಥೆಯಲ್ಲಿ ಉದ್ಯೋಗ


ಸುರೇಶ್ ಸಾವಿಗೂ ಮುನ್ನ ಚಿತ್ರೀಕರಣ ಮಾಡಿದ್ದ ವಿಡಿಯೊಗಳನ್ನು ಬಿಡುಗಡೆ ಮಾಡಿದರು. ಮೃತರ ಸಹೋದರ ನಾರಾಯಣ, ಅಚ್ಯುತ, ಶ್ರೀಧರ್ ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.