ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಬೆಂಗಳೂರು ಮೂಲದ ಯುವಕ ಪ್ರವಾಸಕ್ಕೆಂದು ಬಂದು ಕಣ್ಮರೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಸಮೀಪ ಇರುವ ರಾಣಿಜರಿ ವ್ಯೂ ಬಳಿ ನಡೆದಿದೆ.


ಬೆಂಗಳೂರು ಮೂಲದ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಭರತ್ (30) ಪ್ರವಾಸಕ್ಕೆಂದು ಬಂದು ದುರ್ಗದಹಳ್ಳಿ ಸಮೀಪ ಇರುವ ರಾಣಿಜರಿ ವ್ಯೂ ಬಳಿ ಬೈಕ್ ನಿಲ್ಲಿಸಿ ಕಣ್ಮರೆಯಾಗಿದ್ದಾರೆ. K A.02, jw2033 ಬೈಕ್ ನ ಹಿಂಬದಿಯಲ್ಲಿ ತನ್ನ ಐಡಿ ಕಾರ್ಡ್ ಸಿಕ್ಕಿಸಿ, ಬ್ಯಾಗನ್ನು ಇಟ್ಟು ಯುವಕ ನಾಪತ್ತೆಯಾಗಿದ್ದಾನೆ.


ಇದನ್ನೂ ಓದಿ; ರಾಜ್ಯದ ರೈತರಿಗೆ ಗುಡ್ ನ್ಯೂಸ್; 22.500ವರೆಗೆ ಬೆಳೆ ಪರಿಹಾರ ಪಾವತಿ
ಈ ಸಂಬಂಧ ಇಂದು ಅರಣ್ಯ ಇಲಾಖೆ ಹಾಗೂ ಸ್ಥಳೀಯರಿಂದ ಶೋಧ ಕಾರ್ಯ ನಡೆಯಲಿದೆ. ಮೂಡಿಗೆರೆ ತಾಲ್ಲೂಕಿನ ಬಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ವರದಿ- ತನು ಕೊಟ್ಟಿಗೆಹಾರ)

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮನಿಂದ ಮಹಾ ಯಡವಟ್ಟು…
ಬೆಳಗಾವಿ: (ನ್ಯೂಸ್ ಮಲ್ನಾಡ್ ವರದಿ)ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಘಟನೆ ನಡೆದಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸಲು ಬಂದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿದ್ದು, ಇದನ್ನು ಗಮನಿಸಿದ ಡಿ.ಕೆ.ಶಿವಕುಮಾರ್ ಅವರು ನಯನಾರ ಹಿಡಿದೆಳೆದು ಏಳುವಂತೆ ಸೂಚಿಸಿದರು. ಮುಖ್ಯಮಂತ್ರಿ ಕುರ್ಚಿ ಮೇಲೆ ಹಾಗೆಲ್ಲ ಕುಳಿತುಕೊಳ್ಳಬಾರದು ಎಂದು ಶಿವಕುಮಾರ್ ಸೂಚ್ಯವಾಗಿ ತಿಳಿ ಹೇಳಿದರು. ಆದರೆ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಈ ಘಟನೆಯನ್ನು ಗಮನಿಸದಂತೆ ಸುಮ್ಮನಿದ್ದರು ಎನ್ನಲಾಗಿದೆ.
ಇದನ್ನೂ ಓದಿ; ಶ್ರಮ ಶಕ್ತಿ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ
ಈ ಹಿಂದೆ ಡಿ.ಕೆ.ಶಿವಕುಮಾರ್ ಕೂರಲು ಹೋದಾಗ ನನ್ನ ಕುರ್ಚಿ ಕಣಯ್ಯ ಎಂದಿದ್ದ ಸಿಎಂ:
ಬೆಂಗಳೂರಿನಲ್ಲಿ ನಡೆದಂತಹ ಆಂಬುಲೆನ್ಸ್ ಗೆ ಚಾಲನೆ ನೀಡುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಕುರ್ಚಿ ಮೇಲೆ ಕೂರಲು ಹೋಗಿದ್ದರು. ಈ ವೇಳೆ ಮುಖ್ಯಮಂತ್ರಿ ಅದು ನನ್ನ ಕುರ್ಚಿ ಕಣಯ್ಯ. ಎಂದಿದ್ದರು. ಆಗ ಶಿವಕುಮಾರ್ ನಗುತ್ತಲೇ ಪಕ್ಕದ ಕುರ್ಚಿಗೆ ತೆರಳಿ ಕುಳಿತರು. ಇದೀಗ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲು ಹೋದಗ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿ ಹೇಳಿದ್ದಾರೆ.












