ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಂಗವೊಂದು ಮೃತಪಟ್ಟಿದ್ದು, ಘಟನಾ ಸ್ಥಳದ ಪಕ್ಕದಲ್ಲಿದ್ದ ಇತರೆ ಮಂಗಗಳ ರೋದನೆ ತೀವ್ರ ನೋವುಂಟು ಮಾಡಿದೆ.
ಇದನ್ನೂ ಓದಿ: ಆಧಾರ್ & ರೇಷನ್ ಕಾರ್ಡ್ ಇದ್ರೆ ಉಚಿತ ತರಬೇತಿಗೆ ಅರ್ಜಿ ಸಲ್ಲಿಸಿ

ಇದೇ ದಾರಿಯಲ್ಲಿ ಬರುತ್ತಿದ್ದ ಬಣಕಲ್ನ ಪ್ರಾಣಿಪ್ರೇಮಿ ಯುವಕರು ಅರುಣ್ ಪೂಜಾರಿ ಹಾಗೂ ಅಜಿತ್ ಪೂಜಾರಿ ಮಾನವೀಯತೆ ಮೆರೆದಿದ್ದು, ಮಂಗದ ದೇಹಕ್ಕೆ ಶಾಸ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಅಂತ್ಯಕ್ರಿಯೆ ನೆರವೇರಿಸಿ ಮಾತನಾಡಿ ಅರುಣ್ ಪೂಜಾರಿ, “ಪ್ರಾಣಿಗಳ ಮೇಲೆ ಕರುಣೆ ತೋರಬೇಕಾಗಿದೆ. ರಸ್ತೆಗಳಲ್ಲಿ ವಾಹನ ಚಲಿಸುವವರು ಜಾಗ್ರತೆ ವಹಿಸಿ, ಪ್ರಾಣಿಗಳ ಮೇಲೆ ದಾಳಿಯಾಗದಂತೆ ಗಮನ ಕೊಡಬೇಕು. ಮಾತು ಬಾರದ ಜೀವಿಗಳಲ್ಲೂ ಭಾವನೆಗಳಿವೆ. ಅವುಗಳಿಗಾಗುವ ನೋವನ್ನು ನಾವು ಕಾಣುವುದೇ ಮನ ಕಲಕುವಂಥದ್ದು. ಚಾರ್ಮಾಡಿ ಘಾಟಿಯಲ್ಲಿ ವಾಹನಗಳು ಸಂಚರಿಸುವುದರಿಂದ ಹಲವು ಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ವಾನರಗಳ ಸಂಖ್ಯೆಯೂ ಹೆಚ್ಚಿದ್ದು, ಅವುಗಳ ರಕ್ಷಣೆಯ ಜವಾಬ್ದಾರಿಯೂ ನಮ್ಮದೇ” ಎಂದರು. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ವಿದ್ಯಾಸಿರಿ ಸೇರಿ ವಿವಿಧ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ












