ಶೃಂಗೇರಿಯ SAVMH ಆಸ್ಪತ್ರೆಯಲ್ಲಿ ಪ್ರತೀ ಬುಧವಾರ ಎಂಡೋಸ್ಕೋಪಿ ಶಿಬಿರ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸಾರ್ವಜನಿಕರಿಗೆ ಆರೋಗ್ಯ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ಹಾಗೂ ಕೈಗೆಟುಕುವ ದರದಲ್ಲಿ ಒದಗಿಸುವ ಉದ್ದೇಶದಿಂದ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ (SAVMH) ವತಿಯಿಂದ ವಿಶೇಷ ಗ್ಯಾಸ್ಟ್ರೊಇಂಟೆಸ್ಟೈನಲ್ ಎಂಡೋಸ್ಕೋಪಿ ಶಿಬಿರವನ್ನು ಆಯೋಜಿಸಲಾಗಿದೆ.

ಪ್ರತಿ ಬುಧವಾರ ಶೃಂಗೇರಿಯ SAVMH ಆಸ್ಪತ್ರೆಯಲ್ಲಿ ನಡೆಯುವ ಈ ವಿಶೇಷ ಶಿಬಿರದಲ್ಲಿ ಎಂಡೋಸ್ಕೋಪಿ ಹಾಗೂ ಕೊಲೊನೋಸ್ಕೋಪಿ ಪರೀಕ್ಷೆಗಳು ಕಡಿತ ದರದಲ್ಲಿ ಲಭ್ಯವಿವೆ. ಎಂಡೋಸ್ಕೋಪಿ ಪ್ಯಾಕೇಜ್ ₹999 ಕ್ಕೆ ಹಾಗೂ ಕೊಲೊನೋಸ್ಕೋಪಿ ಪ್ಯಾಕೇಜ್ ₹2499 ಕ್ಕೆ ಲಭ್ಯವಿದ್ದು, ಇದರಲ್ಲಿ ಜನರಲ್ ವಾರ್ಡ್ ಶುಲ್ಕ ಕೂಡ ಸೇರಿದೆ.

ಈ ಪ್ಯಾಕೇಜ್‌ಗಳಲ್ಲಿ ರಕ್ತ ಪರೀಕ್ಷೆ (ಸೆರಾಲಜಿ) ಹಾಗೂ ವಿವರವಾದ ವೈದ್ಯಕೀಯ ವರದಿ ಕೂಡ ಒಳಗೊಂಡಿದೆ. ಪರೀಕ್ಷೆಗೆ ಮುನ್ನ ವೈದ್ಯರ ಸಲಹೆ ಹಾಗೂ ನೋಂದಣಿ ಕಡ್ಡಾಯವಾಗಿದೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ.

ಜೀರ್ಣಾಂಗ ಸಂಬಂಧಿತ ಸಮಸ್ಯೆಗಳಿಗಾಗಿ ತ್ವರಿತ ಹಾಗೂ ವಿಶ್ವಾಸಾರ್ಹ ಪರೀಕ್ಷಾ ಸೌಲಭ್ಯವನ್ನು ಕಡಿಮೆ ದರದಲ್ಲಿ ಒದಗಿಸುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ಈ ಸದುಪಯೋಗವನ್ನು ಪಡೆಯಲು ಆಸ್ಪತ್ರೆ ಮನವಿ ಮಾಡಿಕೊಂಡಿದೆ.

ಹೆಚ್ಚಿನ ಮಾಹಿತಿಗಾಗಿ 6364327544 ಸಂಪರ್ಕಿಸಬಹುದು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.