ತೀರ್ಥಹಳ್ಳಿ/ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಜಮೀನಿನಲ್ಲಿರುವ ಕೆರೆಯ ಬಳಿ ಪಂಪ್ ಸೆಟ್ ಎತ್ತಲು ಹೋದಾಗ ನೀರು ತುಂಬಿದ ಕೆರೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಟೆಂಕಬೈಲು ಬಳಿ ಮಂಗಳವಾರ ನಡೆದಿದೆ.
ತಾಲೂಕಿನ ಟೆಂಕಬೈಲು ಗ್ರಾಮದ ತುಂಬುಕೋಡುವಿನ ಉಮೇಶ್ (43 ವರ್ಷ ) ಮೃತಪಟ್ಟ ದುರ್ದೈವಿ. ಮೂಲತಃ ಕೊಪ್ಪದವರದ ಇವರು ತೋಟದ ಕೆಲಸದ ನಿಮಿತ್ತ ತಮ್ಮ ಮನೆಗೆ ಬಂದಿದ್ದರು. ತೋಟದ ಕೆಲಸಕ್ಕಾಗಿ ಜಮೀನಿನಲ್ಲಿ ಪಂಪ್ ಸೆಟ್ ಎತ್ತಲು ಹೋದಾಗ ಪಕ್ಕದಲ್ಲಿ ಇದ್ದಂತಹ ಕೆರೆಗೆ ಕಾಲು ಜಾರಿ ಬಿದ್ದಿದ್ದಾರೆ.. ಈಜಲು ಬಾರದ ಕಾರಣ ಅಲ್ಲೇ ಮೃತಪಟ್ಟಿದ್ದಾರೆ..

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














