ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಆಯಿಷಾ ನಮ್ರ ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಕಾಫಿನಾಡಿಗೆ ಕೀರ್ತಿ ತಂದಿದ್ದಾರೆ.

ಪ್ರಸನ್ನ ಕಾಲೇಜಿನ ವಿದ್ಯಾರ್ಥಿಯಾದ ಆಯಿಷಾ ನಮ್ರ ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣವನ್ನು ಬಣಕಲ್ ರಿವರ್ ವ್ಯೂವ್ ಶಾಲೆ, ಪ್ರೌಢಶಾಲಾ ಶಿಕ್ಷಣವನ್ನು ಬಣಕಲ್ ಪ್ರೌಢಶಾಲೆ, ಪಿಯುಸಿ ಶಿಕ್ಷಣವನ್ನು ಮೂಡಿಗೆರೆಯ ಹರೀಶ್ ಪಿಯು ಕಾಲೇಜ್ ಹಾಗೂ ವೈದ್ಯಕೀಯ ಶಿಕ್ಷಣವನ್ನು ಬೆಳ್ತಂಗಡಿಯ ಪ್ರಸನ್ನ ಕಾಲೇಜಿನಲ್ಲಿ ಮುಗಿಸಿ ಇದೀಗ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಆಯಿಷಾ ನಮ್ರ ಕೊಟ್ಟಿಗೆಹಾರದ ಅಸ್ಘರ್ ಹುಸೇನ್ (ಮುನೀರ್) ಹಾಗೂ ರುಕ್ಸಾನ ದಂಪತಿಯ ಪುತ್ರಿಯಾಗಿದ್ದು, ವಿದ್ಯಾರ್ಥಿನಿಯ ಸಾಧನೆಗೆ ಪೋಷಕರು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ 10,000 ಸ್ಕಾಲರ್ ಶಿಪ್; ಈಗಲೇ ಅರ್ಜಿ ಸಲ್ಲಿಸಿ












