ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ವಿದ್ಯುತ್ ಪ್ರಸರಣ ಮಾರ್ಗ ಬದಲಾವಣೆ ಕಾಮಗಾರಿ ಕೈಗೊಂಡಿರುವುದರಿಂದ ಇದೇ 9 (ಶನಿವಾರ) ಮತ್ತು 10ರಂದು (ಭಾನುವಾರ) ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ; ಮಹಿಳೆಯರಿಗೆ 15,000 ಸಿಗುವ ಮತ್ತೊಂದು ಬಂಪರ್ ಯೋಜನೆ!; ಇಲ್ಲಿದೆ ಮಾಹಿತಿ

ಬಾಳೆಹೊನ್ನೂರು ವಿ.ವಿ ಕೇಂದ್ರದಿಂದ ಹೊರಹೊಮ್ಮವ ಜಯಪುರ, ಬಾಳೆಹೊನ್ನೂರು, ಕೊರಡಿಹಿತ್ಲು, ಶೃಂಗೇರಿ, ಬಸರೀಕಟ್ಟೆ, ಕುಂಚೆಬೈಲು, ಗಡಿಗೇಶ್ವರ, ಬಾಳೆಹೊನ್ನೂರು, ಮಾಗುಂಡಿ, ಕಚಿಗೆ, ಲೋಕನಾಥಪುರ, ಜಯಪುರ ಪಟ್ಟಣ, ಕೆರೆಕಟ್ಟೆ, ಶೃಂಗೇರಿ, ಅಡ್ಡಗದ್ದೆ, ಹೊಸೂರು, ಕೊರಡಿಹಿತ್ಲು, ಮೈಸೂರು ಪ್ಲಾಂಟೇಶನ್, ಮೇಲ್ಪಾಲ್, ಕಟ್ಟಿನಮನೆ ಹಾಗೂ ಗ್ರಾಮೀಣ ಭಾಗದಲ್ಲಿ ಮಾ. 9 ರಂದು ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆವರೆಗೆ ಹಾಗೂ ಮಾ.10 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ.
ಚಿಕ್ಕಮಗಳೂರು: ಲೋಕಸಭೆ ಚುನಾವಣೆ: ಕಾಂಗ್ರೆಸ್ ನಲ್ಲೂ ಗೋ ಬ್ಯಾಕ್ ಅಭಿಯಾನ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿ ದಿನೇದಿನೇ ಬಿಸಿಲ ತಾಪ ಏರುತ್ತಿದ್ದರೂ ಅದಕ್ಕಿಂತಲೂ ರಾಜಕಾರಣದ ಕಾವು ಹೆಚ್ಚಾಗಿದೆ. ಲೋಕಸಭೆ ಚುನಾವಣೆ ಘೋಷಣೆಗೆ ಕ್ಷಣಗಣನೆ ಶುರುವಾದಂತೆ ಪ್ರಮುಖ ಪಕ್ಷಗಳ ಅದರಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್ ಪಾಳಯದಲ್ಲಿ ಅಭ್ಯರ್ಥಿಗಳ ಆಯ್ಕೆ ಬಿರುಸುಗೊಂಡಿದೆ. ಎರಡೂ ಪಕ್ಷಗಳ ಟಿಕೆಟ್ ಯಾರಿಗೆ ಮೀಸಲು ಎಂಬುದರ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ; ಕೃಷಿ ಯಂತ್ರೋಪಕರಣ ಖರೀದಿಗೆ ಸಹಾಯಧನ; ಈಗಲೇ ಅರ್ಜಿ ಸಲ್ಲಿಸಿ
ಈ ನಡುವೆ ಬಿಜೆಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಅಭಿಯಾನ ಸೇರಿದಂತೆ ಪತ್ರ ಅಭಿಯಾನವನ್ನು ಪಕ್ಷದ ಕಾರ್ಯಾಕರ್ತರು ನಡೆಸಲಾಗಿತ್ತು. ಸದ್ಯ ಚಿಕ್ಕಮಗಳೂರು ಕಾಂಗ್ರೆಸ್ ನಲ್ಲೂ ಗೋ ಬ್ಯಾಕ್ ಅಭಿಯಾನ ಆರಂಭವಾಗಿದೆ.
ಇದನ್ನೂ ಓದಿ; ಅಂಚೆ ಕಚೇರಿಯಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆ!; ಜನರಿಂದ ಭರ್ಜರಿ ರೆಸ್ಪಾನ್ಸ್, ಏನಿದು ಯೋಜನೆ?
ಕಾಂಗ್ರೆಸ್ ನಲ್ಲೂ ಗೋ ಬ್ಯಾಕ್ ಅಭಿಯಾನ:
ಜಯಪ್ರಕಾಶ್ ಹೆಗ್ಡೆ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗೋ ಬ್ಯಾಕ್ ಅಭಿಯಾನ ಶುರು ಮಾಡಿದ್ದಾರೆ. ಕಷ್ಟ ಕಾಲದಲ್ಲಿ ಪಕ್ಷಕ್ಕೆ ಕೈ ಕೊಟ್ಟವರು ಬೇಡ, ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ಕೊಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಹೆಗ್ಡೆ ಅಭಿಯಾನವನ್ನು ಆರಂಭಿಸಿದ್ದಾರೆ. ಅಲ್ಲದೇ ಜಯಪ್ರಕಾಶ್ ಹೆಗ್ಡೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಇದನ್ನೂ ಓದಿ; ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ;ಅರ್ಜಿ ಸಲ್ಲಿಕೆ ಹೇಗೆ?; ಅಗತ್ಯ ದಾಖಲೆಗಳು ಯಾವುವು?ಪೂರ್ಣ ವಿವರ ಇಲ್ಲಿದೆ
ಹೆಗ್ಡೆಗೆ ಟಿಕೆಟ್ ನೀಡದಂತೆ ಸಿಎಂ ಭೇಟಿ:
ಲೋಕಸಭಾ ಚುನಾವಣೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಯಪ್ರಕಾಶ್ ಹೆಗ್ಡೆ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅಭಿಯಾನ ಶುರು ಮಾಡಲಾಗಿದ್ದು, ಹೆಗ್ಡೆಗೆ ಟಿಕೆಟ್ ನೀಡದಂತೆ ಸಿಎಂ ಭೇಟಿ ಮಾಡಿ ಕಾರ್ಯಕರ್ತರ ನಿಯೋಗ ಮನವಿ ಸಲ್ಲಿಕೆ ಮಾಡಿತ್ತು. ಅಲ್ಲದೇ, ಹೆಗ್ಡೆ ಬದಲಾಗಿ ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.












