
ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಆವರಣದಲ್ಲಿ ಮುಟ್ಟುಗೋಲು ಹಾಕಿಕೊಂಡ ವಿವಿಧ ಮಾದರಿಯ ವಾಹನಗಳು ಹಾಗೂ ಅನುಪಯುಕ್ತ ಇಲಾಖಾ ವಾಹನಗಳನ್ನು ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: ಪಂಚಾಯಿತಿಯಲ್ಲೇ ಸಿಗಲಿವೆ ಜನನ-ಮರಣ ಪ್ರಮಾಣ ಪತ್ರ

ಮಾರುತಿ ಸುಜುಕಿ ವರ್ಷ ಕಾರ್-1, ಅಂಬಾಸಿಡರ್ ಕಾರ್-1, ಅಟಲ್ ಆಟೋ ರಿಕ್ಷಾ-1, ಮೋಟಾರ್ ಬೈಕ್-7, ಅನುಪಯುಕ್ತ ಇಲಾಖಾ ವಾಹನಗಳಾದ ಬೊಲೇರೋ ಜೀಪ್-1, ಮಹೀಂದ್ರಾ ಜೀಪ್-1 ಇವುಗಳನ್ನು ನವೆಂಬರ್ 20 ರಂದು ಟೆಂಡರ್-ಕಂ-ಬಹಿರಂಗ ಹರಾಜು ಮೂಲಕ ಮಾರಾಟಕ್ಕಿಡಲಾಗಿದ್ದು. 4 ಚಕ್ರದ ವಾಹನಗಳಿಗೆ ರೂ.10,000 ಹಾಗೂ ದ್ವಿಚಕ್ರ ವಾಹನಗಳಿಗೆ ರೂ.5,000 ಗಳನ್ನು ಬಿಡ್ಡುದಾರರಿಂದ ಠೇವಣಿಯಾಗಿ ಪಡೆಯಲಾಗುವುದು.

ಇನ್ನು ಹೆಚ್ಚಿನ ಮಾಹಿತಿಯನ್ನು ಕಚೇರಿಯಿಂದ ಪಡೆಯಬಹುದು ಎಂದು ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಗ್ರಾಪಂ ಸಿಬ್ಬಂದಿಗಳಿಗೆ ವೇತನ ಪಾವತಿ: ಮಹತ್ವದ ಆದೇಶ












