ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು, ಮಳೆಯಿಂದ ನಷ್ಟದ ಪ್ರಮಾಣವು ಸಹ ಹೆಚ್ಚುತ್ತಾ ಸಾಗಿದೆ. ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಗೆ ಮನೆಗಳು ಕುಸಿಯುತ್ತಿವೆ. ಜನರ ಬದುಕೂ ಸಹ ಮೂರಾಬಟ್ಟೆಯಾಗುತ್ತಿವೆ.
ಇದನ್ನೂ ಓದಿ: ಈ ಮೂರು ದಾಖಲೆ ಇದ್ದರೆ ಕ್ಯಾನ್ಸಲ್ ಆಗಲ್ಲ ರೇಷನ್ ಕಾರ್ಡ್; ಇಲ್ಲಿದೆ ಮಾಹಿತಿ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಲೆಹೊಂಡ ಗ್ರಾಮದ ಸೀತು ಎಂಬುವವರ ಮನೆ ಮೇಲ್ಛಾವಣಿ ಕುಸಿದಿದೆ. ಗಾಳಿ ಮಳೆ ಅಬ್ಬರದಿಂದ ರಾತ್ರಿ 2.30 ಸುಮಾರಿಗೆ ಈ ಘಟನೆ ನಡೆದಿದ್ದು, ಮೇಲ್ಛಾವಣಿ ಕುಸಿತಕ್ಕೆ ಗೋಡೆ ಕೂಡ ಬಿರುಕುಗೊಂಡಿದೆ. ಅದೃಷ್ಟವಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ನಡೆದ ಬಳಿಕ ಕುಟುಂಬಸ್ಥರು ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಶಾಕ್; ಇನ್ಮುಂದೆ 1.70 ಲಕ್ಷ ಮಹಿಳೆಯರಿಗೆ ಬರಲ್ಲ ಗೃಹಲಕ್ಷ್ಮಿಯ 2000 ಹಣ!
ಸ್ಥಳಕ್ಕೆ ಗುಡ್ಡೆತೋಟ ಗ್ರಾಮ ಪಂಚಾಯಿತಿ ಪಿಡಿಓ ಶೋಭ, ಗ್ರಾಮ ಪಂಚಾಯತಿ ಸದಸ್ಯರಾದ ಕೀರ್ತಿರಾಜ್, ಶೈಲ, ರವಿ, ರೇಖಾ ಹಾಗೂ ಗ್ರಾಮಸ್ಥರು ಇದ್ದರು. (ವರದಿ: ಶಶಿ ಬೆತ್ತದಕೊಳಲು)
ಇದನ್ನೂ ಓದಿ: ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ; 1.73 ಲಕ್ಷ BPL ರೇಷನ್ ಕಾರ್ಡ್ ವಿತರಣೆ












