
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ ದೇವಸ್ಥಾನದ ಅರ್ಚಕರಾಗಿದ್ದ ಶ್ರೀಯುತ ಉಮೇಶ ಭಟ್ಟರು ಅವರು ನಿನ್ನೆ ರಾತ್ರಿ ಅಕಾಲಿಕ ನಿಧನರಾಗಿದ್ದಾರೆ. ಮಾಮೂಲಿ ಜ್ವರದಿಂದ ಬಳಲುತ್ತಿದ್ದ ಅವರು 13 ದಿನಗಳ ಕಾಲ ಶಿವಮೊಗ್ಗದ ಆಸ್ಪತ್ರೆಯಲ್ಲಿದ್ದರು. ನಿನ್ನೆ ಅನಿರೀಕ್ಷಿತವಾಗಿ ದೈವಾಧೀನರಾಗಿದ್ದಾರೆ.
ಇದನ್ನೂ ಓದಿ; ವಯನಾಡಿನಲ್ಲಿ ನಕ್ಸಲರು ಪೊಲೀಸರ ನಡುವೆ ಫೈರಿಂಗ್; ಮಲೆನಾಡಿನ ಈ ಜಿಲ್ಲೆಯಲ್ಲಿ ಹೈ ಅಲರ್ಟ್

ಉಮೇಶ ಭಟ್ಟರು ಒಳ್ಳೆಯ ನಾಯಕತ್ವ ಗುಣ ಇದ್ದಂತಹ ವ್ಯಕ್ತಿ. ಓದಿನ ನಂತರ ತಂದೆಯವರ ವೃತ್ತಿಯಾದ ಅರ್ಚಕ ವೃತ್ತಿಗೆ ಬಂದವರು. ಮಾಡದ ದೇವಸ್ಥಾನ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಅಂದಿನಿಂದ ಇದುವರೆಗೂ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಿತ್ಯ ಪೂಜೆ, ಜಾತ್ರಾದಿ ಕಟ್ಟು ಕಟ್ಟಳೆಗಳನ್ನು ನೆರವೇರಿಸಿಕೊಂಡು ಬಂದವರು. ಈ ಹಿಂದೆ ದೇವಸ್ಥಾನದ ರಥವು ಶಿಥಿಲವಾಗಿದ್ದ ಸಂದರ್ಭದಲ್ಲಿ ಭಕ್ತಾದಿಗಳನ್ನು ಸಂಪರ್ಕಿಸಿ ಒಂದು ಸುಂದರವಾದ ರಥವನ್ನು ನಿರ್ಮಿಸಿದ ಸಂದರ್ಭ ಅಲ್ಲದೆ ಐದು ವರ್ಷಗಳ ಹಿಂದೆ ಮೂಲ ದೇವಸ್ಥಾನವು ಶಿಥಿಲವಾಗಿದ್ದ ಸಂದರ್ಭದಲ್ಲಿ ಪುನಃ ಭಕ್ತಾದಿಗಳೆಲ್ಲರನ್ನು ಸೇರಿಸಿ ಮನೆ ಮನೆಗೆ ತಿರುಗಾಡಿ ಹಣ ಸಂಗ್ರಹಣೆ ಮಾಡಿ ಅತ್ಯಂತ ಸುಂದರವಾದ ಶಿಲಾಮಯ ದೇವಸ್ಥಾನವನ್ನು ಕಟ್ಟುವಲ್ಲಿ ಶ್ರೀ ಉಮೇಶ ಭಟ್ಟರು ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಇದನ್ನೂ ಓದಿ; ಚಿನ್ನ ಮತ್ತು ಬೆಳ್ಳಿ ಎರಡೂ ಮತ್ತಷ್ಟು ಅಗ್ಗ; ಇವತ್ತಿನ ದರವೆಷ್ಟು, ಇಲ್ಲಿದೆ ವಿವರ
ಮೃತರು ಕುಟುಂಬ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೂಡಿಗೆರೆ: ನಾಲ್ಕು ಕಡೆ ಪ್ರತ್ಯೇಕ ಅಪಘಾತ, ಮೂವರು ಗಂಭೀರ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಹಬ್ಬದಂದೆ ಪ್ರತ್ಯೇಕ ನಾಲ್ಕು ಕಡೆ ಅಪಘಾತಗಳು ಸಂಭವಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು:
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮಂಭಾಗ ನಜ್ಜುಗುಜ್ಜಾಗಿದೆ. ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು:
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಪಲ್ಗುಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ; ನಿಮ್ಹಾನ್ಸ್ ನಲ್ಲಿ ವಾಕ್ ಇನ್ ಇಂಟರ್ವ್ಯೂ; 32 ನರ್ಸಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸ್ಕೂಟರ್ ಪಲ್ಟಿ, ಚಾಲಕನಿಗೆ ಗಂಭೀರ ಗಾಯ:
ಸ್ಕೂಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೈ ಹಾಗೂ ಕಾಲುಮೂಳೆ ಕಟ್ಟಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಪಲ್ಗುಣಿ ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ನಡೆದಿದೆ. ಸ್ಕೂಟರ್ ಸವಾರ ಸಕಲೇಶಪುರ ಮೂಲದವರು ಎನ್ನಲಾಗಿದ್ದು, ಹಾಸನ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಎರಡು ಅಪಘಾತಗಳು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ:
ಮೂಡಿಗೆರೆ ತಾಲ್ಲೂಕಿನ ಅಣಜೂರು ಬಳಿ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಎರಡು ವಾಹನದಲ್ಲಿ ಇಬ್ಬರಿಗೆ ಹೆಚ್ಚು ಪೆಟ್ಟಾಗಿದ್ದು, ಒಬ್ಬರನ್ನು ಮಂಗಳೂರು ಆಸ್ಪತ್ರೆ ಹಾಗೂ ಮತ್ತೊಬ್ಬರಿಗೆ ಬೆಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಒಟ್ಟು ಮೂರು ಅಪಘಾತಗಳು ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.













