
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಅಸಗೋಡು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ ವಾರ್ಷಿಕ ಮಹಾ ಸಭೆ ಹಾಗೂ One GP One Product ಶೀರ್ಷಿಕೆಯಡಿಯಲ್ಲಿ ಮಲ್ನಾಡ್ ಹಪ್ಪಳ ಉದ್ಘಾಟನಾ ಸಮಾರಂಭವನ್ನು ಅಸಗೋಡು GPLF ನ ಅಧ್ಯಕ್ಷರಾದ ಶ್ರೀಮತಿ ಸುಮಾ ಅರುಣ್ ರವರ ಅದ್ಯಕ್ಷತೆಯಲ್ಲಿ ದಿನಾಂಕ 15.11.2023 ಬುಧವಾರದಂದು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಒಕ್ಕೂಟದ ಆಡಿಟ್ ವರದಿ, ಜಮಾ ಖರ್ಚು ಹಾಗೂ ಮುಂದಿನ ಆರ್ಥಿಕ ವರ್ಷದ ಯೋಜನಾ ವರದಿಯನ್ನು ಮಂಡಿಸಲಾಯಿತು.

ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; 15ನೇ ಕಂತಿನ ಹಣ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಸುಮಾ ಅರುಣ್ ಮಾತನಾಡಿ, ಪ್ರಸ್ತುತ GPLF ರೂ.1.23 ಲಕ್ಷಗಳ ಲಾಭಾಂಶದಲ್ಲಿ ಕಾರ್ಯನಿರ್ವಹಿಸುತ್ತಿದ್ದೂ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸೇವೆಯನ್ನು ಸದಸ್ಯರಿಗೆ ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಕೆಲಸ ಮಾಡುವುದಾಗಿ ತಿಳಿಸಿದರು.

ಈ ಸಭೆಯಲ್ಲಿ ಸಂಜೀವಿನಿ ಯೋಜನೆಯ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ನವೀನ್ ಎಸ್ ಕೆ ರವರು ಪ್ರಸ್ತಾವಿಕವಾಗಿ ಮಾತನಾಡಿ, ಯೋಜನೆಯ ಗುರಿ ಉದ್ದೇಶ, GPLF ಜವಾಬ್ದಾರಿ ಹಾಗೂ ಯೋಜನೆಯ ಸದುಪಯೋಗವನ್ನು ಒಕ್ಕೂಟದ ವ್ಯಾಪ್ತಿಗೆ ಬರುವ ಎಲ್ಲಾ ವರ್ಗದ ಮಹಿಳೆಯರು ಪಡೆದುಕೊಳ್ಳುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ One GP one Product ಎಂಬ ಶೀರ್ಷಿಕೆಯೊಂದಿಗೆ ಅಸಗೋಡು GPLF ನಲ್ಲಿ ಮಲ್ನಾಡ್ ಹಪ್ಪಳ ಉತ್ಪನ್ನವನ್ನು GPLF ಅಧ್ಯಕ್ಷರಾದ ಸುಮಾ, ಗ್ರಾಮಪಂಚಾಯಿತಿ ಅಧ್ಯಕ್ಷರಾದ ರಮೇಶ್ ಗೌಡ ಹಾಗೂ ಜಿಲ್ಲಾ ವ್ಯವಸ್ಥಾಪಕರು ರಾಜೇಶ್ ರವರು ನೆರವೇರಿಸಿದರು.

ಇದನ್ನೂ ಓದಿ; ಶಕ್ತಿ ಯೋಜನೆ; ಮಹಿಳೆಯರ ಉಚಿತ ಪ್ರಯಾಣಕ್ಕಿನ್ನು ಮೊಬೈಲಲ್ಲೇ ಗುರುತಿನ ಚೀಟಿ ತೋರಿಸಿದರೆ ಸಾಕು; ಹೇಗೆ ಎಂಬುದು ಇಲ್ಲಿದೆ ನೋಡಿ
ಈ ಸಂದರ್ಭದಲ್ಲಿ S T L F ಅಧ್ಯಕ್ಷರು ಸುಮಾ ಶಂಕರ್ ಮತ್ತು ಗ್ರಾಮಪಂಚಾಯಿತಿ ಉಪಾಧ್ಯಕ್ಷರು ಯಶೋಧ, ಸದಸ್ಯರಾದ ರೇಖಾ ಮತ್ತು ಚಂದ್ರಶೇಖರ್ KR ಮತ್ತು ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಸುಮತಿ, ಉಪಾಧ್ಯಕ್ಷರು ವೇದಾವತಿ, ಸಹಕಾರ್ಯದರ್ಶಿ ಪ್ರಮೀಳಾ ಸತೀಶ್, ಸದಸ್ಯರಾದ ವಿನೋದ, ಸ್ವಪ್ನ, ಸುಮಾ. ಗ್ರಾಮಪಂಚಾಯಿತಿ PDO ಪ್ರದೀಪ್ ತಾಲೂಕು ಕೃಷಿಯೇತರ ವ್ಯವಸ್ಥಾಪಕರು ಅಖಿಲ್, ವಲಯ ಮೇಲ್ವಿಚಾರಕರು ಚೈತ್ರ, ಕೃಷಿಯೇತರ ಸಂಪನ್ಮೂಲ ವ್ಯಕ್ತಿ ಭೂಮಿಕಾ ಹಾಗೂ gplf ನ ಸಿಬ್ಬಂದಿಗಳು ಇದ್ದರು.
ತರೀಕೆರೆ: ಪಟಾಕಿ ಸಿಡಿದು ಓರ್ವ ಯುವಕ ಸಾವು
ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಪಟಾಕಿ ಸಿಡಿದು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ನಡೆದಿದೆ. ಪ್ರದೀಪ್ (30) ಪಟಾಕಿ ಸಿಡಿದು ಮೃತಪಟ್ಟ ದುರ್ದೈವಿ.
ಅಡಕೆ ಗೋಟು (ಕಲ್ಲು ಆಟಂಬಾಂಬ್) ಪಟಾಕಿಯನ್ನ ಚೇರ್ ಕೆಳಗೆ ಇಟ್ಟುಕೊಂಡು ಕೂತಿದ್ದ ಪ್ರದೀಪ್, ಪಟಾಕಿ ಸಿಡಿದ ರಭಸಕ್ಕೆ ನೆಲದಿಂದ 5 ಅಡಿ ಹಾರಿ ಬಿದ್ದಿದ್ದಾನೆ. ದೇಹದ ಸೂಕ್ಷ್ಮ ಜಾಗಕ್ಕೆ ಗಂಭೀರ ಒದೆ ಬಿದ್ದ ಕಾರಣ ಪ್ರದೀಪ್ ಸಾವನ್ನಪ್ಪಿದ್ದಾರೆ. ಇನ್ನು ಪ್ರದೀಪ್ ಜೊತೆಗಿದ್ದ ಮತ್ತೋರ್ವ ಯುವಕನಿಗೆ ಗಂಭೀರ ಗಾಯವಾಗಿದ್ದು, ಮೂವರು ಮಕ್ಕಳಿಗೂ ಗಾಯಗಳಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಲ್ಲು ಆಟಂಬಾಂಬ್ ಸಿಡಿದ ರಭಸಕ್ಕೆ ಮನೆಯ ಗ್ಲಾಸ್ ಗಳು ಪುಡಿ-ಪುಡಿಯಾಗಿದೆ.
ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.













