ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಆದಿವಾಸಿ ಸಮುದಾಯಗಳಿಗೆ ಭೂಮಿ, ವಸತಿ ನಿವೇಶನ, ಹಕ್ಕುಪತ್ರ ಸಹಿತ ವಿವಿಧ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಇದೇ 10 ಭಾನುವಾರದಂದು ರಂದು ಕೊಪ್ಪ ಪಟ್ಟಣದ ಪುರಭವನದಲ್ಲಿ ಬೆಳಿಗ್ಗೆ 10.30ಕ್ಕೆ ಆದಿವಾಸಿಗಳ ಸಮಾಗಮ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ; ಕೃಷಿ ಯಂತ್ರೋಪಕರಣ ಖರೀದಿಗೆ ಸಹಾಯಧನ; ಈಗಲೇ ಅರ್ಜಿ ಸಲ್ಲಿಸಿ

ಸಮಾವೇಶದಲ್ಲಿ ನಮೂನೆ 53, 57, 97 ಸಿ ಅಡಿಯಲ್ಲಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದವರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು. ಆಸ್ಪತ್ರೆ ಹಾಗೂ ಆಶ್ರಮ ಶಾಲೆಗಳನ್ನು ಮೇಲ್ದರ್ಜೆಗೇರಿಸಬೇಕು. ಆದಿವಾಸಿ ಸಂಸ್ಕೃತಿ ಉಳಿಸಲು ತಾಲ್ಲೂಕು ಕೇಂದ್ರಗಳಲ್ಲಿ ಆದಿವಾಸಿ ಭವನ ನಿರ್ಮಿಸಬೇಕು. ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್, ನೀರು ಒದಗಿಸಬೇಕು. ಹವಾಮಾನ ಬದಲಾವಣೆಯಿಂದ ಉಂಟಾದ ಅತಿವೃಷ್ಟಿ, ಅನಾವೃಷ್ಟಿಯಿಂದ ಆರ್ಥಿಕ ಮೂಲಕ್ಕೆ ಹೊಡೆತ ಬಿದ್ದಿದ್ದು ಸರ್ಕಾರ ಈ ಕೂಡಲೇ ವಿಶೇಷ ಪ್ಯಾಕೇಜ್ ಘೋಷಿಸಿಬೇಕು. ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ಆದಿವಾಸಿಗಳ ಸಮಾಗಮ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ತಮ್ಮನ ಸಾವಿನ ಸೇಡಿಗೆ ಅಣ್ಣನ ಬರ್ಬರ ಹತ್ಯೆ: ಇಬ್ಬರು ಆರೋಪಿಗಳು ಅಂದರ್
ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದಲ್ಲಿ ಸೊರಬ ತಾಲೂಕಿನ ಉಡಿನೀರು ಗ್ರಾಮದ ರಫಿಕ್ (39) ನನ್ನು ಬರ್ಬರವಾಗಿ ಹತ್ಯೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನಾಯತ್ ಮತ್ತು ಕೊಲೆಯಾದ ರಫಿಕ್ ನ ಅಕ್ಕನ ಮಗ ಸಮೀರ್ ಬಂಧಿತ ಆರೋಪಿಗಳು.
ಇದನ್ನೂ ಓದಿ; ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ;ಅರ್ಜಿ ಸಲ್ಲಿಕೆ ಹೇಗೆ?; ಅಗತ್ಯ ದಾಖಲೆಗಳು ಯಾವುವು?ಪೂರ್ಣ ವಿವರ ಇಲ್ಲಿದೆ
ಏನಿದು ಘಟನೆ:
ಒಂದೂವರೆ ವರ್ಷದ ಹಿಂದೆ ಆಸ್ತಿ ಮತ್ತು ವೈಯಕ್ತಿಕ ವಿಚಾರಕ್ಕೆ ಒಡಹುಟ್ಟಿದ ತಮ್ಮನನ್ನೇ ರಫಿಕ್ ಮರ್ಡರ್ ಮಾಡಿದ್ದನು. ಈ ಕೊಲೆ ಪ್ರಕರಣದಲ್ಲಿ ಜೈಲಿಗೆ ಸೇರಿದ್ದ ರಫಿಕ್ ಕೆಲವು ತಿಂಗಳ ಹಿಂದೆ ಬೇಲ್ ಮೇಲೆ ಹೊರ ಬಂದಿದ್ದನು. ಆಸ್ತಿ ವಿಚಾರ ಹಾಗೂ ಒಡಹುಟ್ಟಿದ ತಮ್ಮನನ್ನೇ ಕೊಲೆ ಮಾಡಿದ ದ್ವೇಷಕ್ಕೆ ಇನಾಯತ್, ರಫಿಕ್ ಜೀವ ತೆಗೆಯಲು ಪ್ಲ್ಯಾನ್ ಮಾಡಿಕೊಂಡಿದ್ದ. ಈ ಸಂಬಂಧ ಶಿವಮೊಗ್ಗಕ್ಕೆ ಶಾಪಿಂಗ್ ನೆಪದಲ್ಲಿ ಕರೆತಂದಿದ್ದರು. ಊರಿಗೆ ವಾಪಸ್ ಹೋಗುವಾಗ ತಮ್ಮ ಸಲೀಂ ಕೊಲೆ ಪ್ರಕರಣದ ಸೇಡಿಗಾಗಿ ಅಣ್ಣ ರಫಿಕ್ ನನ್ನು ತಮ್ಮ ಇನಾಯತ್ ಮತ್ತು ಅಕ್ಕನ ಮಗ ಸಮೀರ್ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ;HAL ಕಂಪನಿಯಲ್ಲಿದೆ ಬಂಪರ್ ಉದ್ಯೋಗಾವಕಾಶ: ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
ಕಣ್ಣಿಗೆ ಖಾರದ ಪುಡಿ ಎರಚಿ ಬಳಿಕ ತಂತಿಯಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆ. ಕೊನೆಗೆ ಆತನ ಮೇಲೆ ಕಾರ್ ಕೂಡ ಹತ್ತಿಸಿದ್ದಾರೆ. ಆತ ಮೃತಪಟ್ಟಿರುವುದು ಖಚಿತವಾದ ಬಳಿಕ ಇಬ್ಬರು ಕಾರ್ ನಲ್ಲಿ ಎಸ್ಕೇಪ್ ಆಗಿದ್ದರು. ಮಗನ ಸಾವಿನ ಸುದ್ದಿ ತಿಳಿದ ತಂದೆ ಆಸ್ತಿಯಾಗಿ ರಫಿಕ್ ತಮ್ಮ ಇನಾಯತ್ ಮತ್ತು ಮಗಳ ಮಗ ಸಮೀರ್ ಸೇರಿ ದೊಡ್ಡ ಮಗ ರಫಿಕ್ ನನ್ನು ಹತ್ಯೆ ಮಾಡಿದ್ದಾರೆ. ಇವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಮೃತನ ತಂದೆ ಮಹ್ಮದ್ ಗೌಸ್ ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; 16ನೇ ಕಂತಿನ ಹಣ ಇನ್ನು ಬಂದಿಲ್ವಾ?; ತಪ್ಪದೇ ಈ ಕೆಲಸ ಮಾಡಿ
ಇನಾಯತ್ ಮತ್ತು ರಫಿಕ್ ನ ಅಕ್ಕನ ಮಗ ಸಮೀರ್ ಇಬ್ಬರನ್ನು ಬಂಧಿಸಲಾಗಿದ್ದು, ಇಬ್ಬರ ಮೇಲೂ ಆನಂದಪುರ ಪೊಲೀಸ್ ಠಾಣೆಯಲ್ಲಿ ಮರ್ಡರ್ ಕೇಸ್ ದಾಖಲಾಗಿದೆ. ಇತ್ತ ಕುಟುಂಬದಲ್ಲಿ ಶುರುವಾದ ಆಸ್ತಿ ವಿವಾದ ಇಬ್ಬರನ್ನು ಬಲಿ ಪಡೆದಿದೆ. ಅಣ್ಣನ ಕೊಲೆ ಕೇಸ್ ನಲ್ಲಿ ಈಗ ತಮ್ಮನು ಜೈಲು ಸೇರಿದ್ದಾನೆ.












