ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವ ನಿಧಿಗೆ ಕಾರ್ಯಕ್ರಮಕ್ಕೆ ಭಾಜಪ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; 6 ಸಂಸ್ಥೆಗಳ 5000 ಕ್ಕೂ ಅಧಿಕ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ; ಯಾವುದೆಲ್ಲಾ ಸಂಸ್ಥೆಗಳಲ್ಲಿ ಹುದ್ದೆ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲೊಂದಾದ “ಯುವನಿಧಿ ಉದ್ಘಾಟನಾ ಕಾರ್ಯಕ್ರಮ”ಕ್ಕೆ ಪದವಿ ವಿಧ್ಯಾರ್ಥಿಗಳನ್ನು ಸಾರಿಗೆ ವ್ಯವಸ್ಥೆ ಮಾಡಿ ಕರೆದುಕೊಂಡು ಹೋಗುತ್ತಿರುವುದನ್ನು ಚಿಕ್ಕಮಗಳೂರು ಭಾಜಪ ಯುವ ಮೋರ್ಚಾ ಖಂಡಿಸುತ್ತದೆ.

ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಈ ಯೋಜನೆಯಡಿ 12,000 ನೆರವು
ಪದವಿ/ಡಿಪ್ಲಮೋ ಮುಗಿಸಿ 6 ತಿಂಗಳಾದ ಫಲಾನುಭವಿಗಳಿಗೆ ಇರುವ ಯೋಜನೆಗೆ ಪ್ರಸ್ತುತ ಪದವಿ ಕಾಲೇಜಿನ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದರಿಂದ ಅವರನ್ನು ನಿರುದ್ಯೋಗಿಯನ್ನಾಗಿಸುವ ಚಿಂತನೆಗೆ ದೂಡುತ್ತದೆ ಅದಲ್ಲದೆ ಶೈಕ್ಷಣಿಕ ವರ್ಷದ ಪರೀಕ್ಷೆ ಸಮಯದಲ್ಲಿ ಅವರುಗಳನ್ನು ರಾಜಕೀಯ ಕಾರ್ಯಕ್ರಮಕ್ಕೆ ಉಪಯೋಗಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸುತ್ತೇವೆ.
“ಕೋಮುಲ್ ನೇಮಕಾತಿ”ಯಲ್ಲಿ ಭ್ರಷ್ಟಾಚಾರ ನಡೆದು ಮಾಲೂರು ಕಾಂಗ್ರೇಸ್ ಶಾಸಕ ನಂಜೇಗೌಡ ಪ್ರತಿ ನೇಮಕಾತಿಗೆ 30 ಲಕ್ಷ ಪಡೆದಿರುವುದು ಇ ಡಿ ದಾಳಿಯಿಂದ ತಿಳಿದಿದೆ. ಇದರೊಂದಿಗೆ ಬಡವರ ಮಕ್ಕಳಿಗೆ 2000 ರೂ ಯುವನಿಧಿ ಆಸೆ ತೋರಿಸಿ ನೇಮಕಾತಿಯಲ್ಲಿ ಸಿರಿವಂತರಿಗೆ – ಭ್ರಷ್ಟಾಚಾರಿಗಳಿಗೆ ಮಣೆ ಹಾಕುವುದು ಇದು ಕಾಂಗ್ರೇಸ್ ಸಂಸ್ಕೃತಿ.
ಕಾಂಗ್ರೆಸ್ ಸರ್ಕಾರಕ್ಕೆ ಉದ್ಯೋಗ ಸೃಷ್ಟಿ ಮಾಡುವ ಯಾವುದೇ ಯೋಚನೆ ಇಲ್ಲ, ಹಾಗಾಗಿ ಇಂದಿನ ವಿದ್ಯಾರ್ಥಿಗಳು ಮುಂದಿನ ನಿರುದ್ಯೋಗಿಗಳು ಎಂದು ಸರ್ಕಾರ ಈಗಲೇ ತೀರ್ಮಾನಕ್ಕೆ ಬಂದಂತಿದೆ. ಅದೇ ಕಾರಣಕ್ಕೆ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲಾಗಿದೆ ಎನಿಸುತ್ತದೆ ಎಂದು ಭಾಜಪ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೂಡಿಗೆರೆ: ಕಂಠಪೂರ್ತಿ ಕುಡಿದು ರಸ್ತೆಯ ಮದ್ಯೆ ಮಲಗಿದ ಭೂಪ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕಂಠಪೂರ್ತಿ ಕುಡಿದು ರಸ್ತೆಯ ಮದ್ಯೆ ವ್ಯಕ್ತಿಯೋರ್ವ ಮಲಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರಕ್ಕೆ ಹೋಗುವ ರಸ್ತೆ ಹಳಸೆ ಗ್ರಾಮದ ತಿರುವಿನಲ್ಲಿ ನಡೆದಿದೆ.
ರಸ್ತೆಯಲ್ಲಿ ವ್ಯಕ್ತಿ ಮಲಗಿರುವುದನ್ನು ನೋಡಿ ವಾಹನ ಸವಾರರು ಬೆಚ್ಚಿ ಬಿದ್ದಿದ್ದು, ವಾಹನ ಚಾಲಕರು ಎಷ್ಟೇ ಹಾರ್ನ್ ಮಾಡಿದರೂ ಮೇಲಕ್ಕೆ ಏಳದ ಭೂಪ, ಕೆಲ ಕಾಲ ಆತಂಕ ಸೃಷ್ಟಿಸಿದ್ದಾನೆ. ವಾಹನದ ಹಾರ್ನ್ ಗೆ ಕೊನೆಗೂ ಎದ್ದ ವ್ಯಕ್ತಿ, ವಾಹನ ಹೋದ ನಂತರ ಮತ್ತೆ ಅದೇ ಜಾಗದಲ್ಲಿ ಮಲಗಿದ್ದಾನೆ. ವ್ಯಕ್ತಿಯ ಹುಚ್ಚಾಟದಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.















