ಚಿಕ್ಕಮಗಳೂರು: ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ಟ ಸ್ಟೇಟ್​ಮೆಂಟ್​ಗೆ ಸಿ. ಟಿ ರವಿ ತಿರುಗೇಟು

ಚಿಕ್ಕಮಗಳೂರು:  (ನ್ಯೂಸ್ ಮಲ್ನಾಡ್ ವರದಿ) ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷಮೆ ಅಗತ್ಯ ಇಲ್ಲ ಎಂದು ಎಂಎಲ್‌ಸಿ ಸಿ.ಟಿ ರವಿ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷಮೆಯ ಅಗತ್ಯವೂ ಇಲ್ಲ. ಅವರ ಬೆದರಿಕೆಗೆ ನಾನು ಹೆದರೋದು ಇಲ್ಲ ಎಂದರು.


ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ;ರೈತರು ಓದಲೇಬೇಕಾದ ಸುದ್ದಿ ಇಲ್ಲಿದೆ ನೋಡಿ


ಮಾನಸಿಕವಾಗಿ ಹಿಂಸೆ ನೀಡಿ ನಾಲ್ಕು ಜಿಲ್ಲೆಗಳಲ್ಲಿ ಸುತ್ತಾಡಿಸಿದ್ರು:
ನನ್ನ ಮೇಲೆ ದೈಹಿಕ ಹಲ್ಲೆ ನೀಡಿ ನನ್ನ ನಾಲ್ಕು ಜಿಲ್ಲೆಗಳಲ್ಲಿ ಸುತ್ತಾಡಿಸಿದ್ರು, ನನ್ನ ಮೇಲೆ ಹಲ್ಲೆ ಮಾಡಿರುವುದಕ್ಕೆ ಕಿಶೋರ್ ಹಾಗೂ ಅರುಣ್ ದೂರು ನೀಡಿದ್ದಾರೆ. ಸುವರ್ಣ ಸೌಧದ ಪಶ್ಚಿಮ ಬಾಗಿಲಿನಲ್ಲಿ ಹಲ್ಲೆಗೆ ಮುಂದಾದ ವೇಳೆ ಅವರಿಬ್ಬರೂ ನನ್ನ ಜೊತೆ ಇದ್ದರು. ಹಾಗಾಗಿ ದೂರು ನೀಡಿದ್ದಾರೆ ಎಂದರು.

ದೂರು ದಾಖಲಿಸಿಲು 15 ದಿನ!:
ನಾನು ನೀಡಿದ ದೂರು ದಾಖಲು ಮಾಡಿಕೊಳ್ಳಲು 15 ದಿನ ಸಮಯ ಇದೆ ಅನ್ನುತ್ತಾರೆ, ಆದರೆ ನನ್ನ ವಿರುದ್ಧ ಕೆಲವೇ ಕ್ಷಣಗಳಲ್ಲಿ ದೂರು ದಾಖಲು ಮಾಡುತ್ತಾರೆ. ನಾನು ಹೆಸರನ್ನು ಹಾಕಿ ದೂರು ನೀಡಿದ್ದೇನೆ. ಆಳುವವರಿಗೆ ಒಂದು ಕಾನೂನು, ವಿರೋಧ ಪಕ್ಷಕ್ಕೆ ಒಂದು ಕಾನೂನು ಇಲ್ಲ, ಇಲ್ಲಿ ಎಲ್ಲರಿಗೂ ಒಂದೇ ಕಾನೂನು ಅಂತ ಸಿಟಿ ರವಿ ಹೇಳಿದ್ದಾರೆ.


ಇದನ್ನೂ ಓದಿ; ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ; ಇಲ್ಲಿದೆ ನೋಡಿ ಡಿಟೈಲ್ಸ್


ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ರಾ ಸಭಾಪತಿ?:
1 ಗಂಟೆಗೆ ನನಗೆ ಸಭಾಪತಿ ಕರೆ ಮಾಡಿಲ್ಲ, ಖಾನಾಪುರ ಪೊಲೀಸ್ ಠಾಣೆಯಲ್ಲಿ ಇರುವಾಗ ಕಾಲ್ ಮಾಡಿದ್ರು. ಕೋರ್ಟ್‌ಗೆ ಹಾಜರು ಪಡಿಸದೇ ಇದ್ರೆ ಹಕ್ಕು ಚ್ಯುತಿ ಮಂಡನೆ ಮಾಡ್ತೀನಿ ಅಂತ ಎಚ್ಚರಿಸಿದ್ರು. ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ರು. ಬಿಡುಗಡೆ ಆದೇಶ ಬಂದ ಮೇಲೆ ನಾನು ಮಾತನಾಡಿದೆ, ಊರಿಗೆ ಹೋಗಿ ಬಂದ ಮೇಲೆ ಭೇಟಿ ಮಾಡುವುದಾಗಿ ಹೇಳಿದ್ದೇನೆ ಅಂತ ಸಿಟಿ ರವಿ ಹೇಳಿದರು.

ಪೊಲೀಸರ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ನಿರ್ಧಾರ:
ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ ಅಂತ ಸಿಟಿ ರವಿ ಎಚ್ಚರಿಸಿದ್ದಾರೆ. ಬೆಳಗಾವಿ ಪೊಲೀಸ್ ಕಮಿಷನರ್, ಎಸ್ಪಿ, ಗ್ರಾಮಾಂತರ ಎಸ್ಪಿ, DYSp ಸೇರಿದಂತೆ ಅವತ್ತು ರಾತ್ರಿ ಇದ್ದ ಪೊಲೀಸರ ಮೇಲೆ ಹಕ್ಕು ಚ್ಯುತಿ ಮಂಡನೆ ಮಾಡುತ್ತೇನೆ. ಇದಕ್ಕೆಲ್ಲ ನಿರ್ದೇಶನ ಯಾರು ನೀಡಿದ್ರು ಎಂಬುದು ತನಿಖೆಯಿಂದ ಗೊತ್ತಾಗುತ್ತದೆ. ಆವತ್ತು ಅಧಿಕಾರಿಗಳಿಗೆ ಯಾರ್ ಯಾರು ಕಾಲ್ ಮಾಡಿದ್ರು ಎಂಬುದು ತನಿಖೆಯಾಗ್ಬೇಕು ಅಂತ ಸಿಟಿ ರವಿ ಆಗ್ರಹಿಸಿದ್ದಾರೆ. ಪೊಲೀಸರು ಮೂರು ಮೂರು ಮೊಬೈಲ್ ಬಳಕೆ ಮಾಡಿದ್ರು. ಲೊಕೇಶನ್ ಸೇರಿದಂತೆ ಕಾಲ್ ಡೀಟೇಲ್ಸ್ ತೆಗೆದ್ರೆ ಎಲ್ಲವೂ ಹೊರ ಬರುತ್ತದೆ ಅಂತ ಸಿಟಿ ರವಿ ಹೇಳಿದ್ದಾರೆ.


ಇದನ್ನೂ ಓದಿ; ಇಂಡಿಯನ್‌ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ನಲ್ಲಿ ಜಾಬ್; ಅರ್ಜಿ ಸಲ್ಲಿಸುವ ಡೆರೆಕ್ಟ್‌ ಲಿಂಕ್‌ ಇಲ್ಲಿದೆ


ಬೆಳಗಾವಿಯನ್ನ ಗೂಂಡಾ ರಿಪಬ್ಲಿಕ್ ಮಾಡಲು ಬಿಡುವುದಿಲ್ಲ:
ಎಷ್ಟು ಹೊಲಿಗೆ ಹಾಕಿದ್ದಾರೆ ರವಿಯಣ್ಣ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಕೇಳಿರೋ ಪ್ರಶ್ನೆಗೆ ಉತ್ತರಿಸಿದ ಸಿಟಿ ರವಿ, ನಾನು ಗಂಭೀರ ಗಾಯವಾಗಿಲ್ಲ ಎಂದು ಹೇಳಿದ್ದೇನೆ. ನಾನು ಹೋರಾಟದಿಂದ ಬಂದವನು ಯಾವುದಕ್ಕೂ ಹೆದರುವುದಿಲ್ಲ. ಬೆಳಗಾವಿಯನ್ನ ಗೂಂಡಾ ರಿಪಬ್ಲಿಕ್ ಮಾಡಲು ಬಿಡುವುದಿಲ್ಲ. ಬೆಳಗಾವಿ ಚಲೋ ಬಗ್ಗೆ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.

ಪ್ರಧಾನಿ ಮೋದಿಯವರು ಬಿಜೆಪಿಯವರೇ ಅಲ್ವಾ?:
ಪ್ರಧಾನಿ ಮೋದಿಯವರಿಗೆ ದೂರು ಕೊಡ್ತೀನಿ ಎಂಬ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರೆಲ್ಲ ದುಶ್ಯಾಸನರು ಎಂದ ಮೇಲೆ ಪ್ರಧಾನಿ ಮೋದಿ ಬಳಿ ಯಾಕೆ ಹೋಗ್ತಾರೆ? ಪ್ರಧಾನಿ ಮೋದಿಯವರೂ ಕೂಡಾ ಬಿಜೆಪಿಯವರೇ ಅಲ್ವಾ? ಎಂದು ಕಿಡಿಕಾರಿದ್ದಾರೆ.


ಇದನ್ನೂ ಓದಿ; ಬೆಳೆವಿಮೆ ನೋಂದಣಿ ಕುರಿತು ಬಿಗ್‌ ಅಪ್ಡೇಟ್‌; ರೈತರೇ ಮಿಸ್‌ ಮಾಡ್ದೆ ಈ ಸುದ್ದಿ ಓದಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.