ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷನ ಮನೆಗೆ ಹೈ ಸೆಕ್ಯೂರಿಟಿ ನಿಯೋಜನೆ

 

ಚಿಕ್ಕಮಗಳೂರು:  (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮನೆಗೆ ಟೈಟ್ ಸೆಕ್ಯೂರಿಟಿಯನ್ನು ನಿಯೋಜನೆ ಮಾಡಲಾಗಿದೆ. ನಗರದ ಎಂ.ಜಿ. ರಸ್ತೆಯಲ್ಲಿರುವ ಅವರ ಮನೆಗೆ ಒಂದು ಕೆ.ಎಸ್.ಆರ್.ಪಿ. ತುಕಡಿ ನಿಯೋಜನೆ ಮಾಡಲಾಗಿದೆ.

 

ಇದನ್ನೂ ಓದಿ; ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ; ಈ ತಾಲೂಕುಗಳ ರೈತರ ಖಾತೆಗೆ ಹಣ ಜಮಾ

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ವಿರುದ್ಧದ ಅವಿಶ್ವಾಸ ಮಂಡನೆ ದಿನಕ್ಕೊಂದು ಪ್ರಹಸಕ್ಕೆ ಕಾರಣವಾಗಿದೆ. ಪಕ್ಷದ ಆಂತರಿಕ ಒಪ್ಪಂದದ ಪ್ರಕಾರ ರಾಜೀನಾಮೆ ಸಲ್ಲಿಸಿದ್ದ ಅಧ್ಯಕ್ಷ ಮತ್ತೆ ವಾಪಸ್ ಪಡೆದುಕೊಂಡರು. ಇದು ಬಿಜೆಪಿಗೆ ಮುಜುಗರ ತಂದಿದ್ದರಿಂದ ಅವರನ್ನು ಪಕ್ಷದಿಂದ ಅಮಾನತು ಕೂಡ ಮಾಡಲಾಗಿತ್ತು. ನಾಳೆ ನಗರಸಭೆ ಆವರಣವು ಹೊಸ ಬೆಳವಣಿಗೆಗೆ ನಾಂದಿ ಹಾಡಲಿದೆ.

 

ಡಿ.ಬಿ.ಚಂದ್ರೇಗೌಡರ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ನಿಧನ ಹಿನ್ನಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾರದ ಹಳ್ಳಿ ನಿವಾಸಕ್ಕೆ ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

 

ಇದನ್ನೂ ಓದಿ; ಪೌರ ಕಾರ್ಮಿಕರ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌; 1433 ಹುದ್ದೆ ಮಂಜೂರು

ಮೂಡಿಗೆರೆ ತಾಲೂಕು ದಾರದಹಳ್ಳಿ ಗ್ರಾಮದ ಡಿ.ಬಿ. ಚಂದ್ರೇಗೌಡರ ನಿವಾಸದ ಮುಂಭಾಗ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬುಧವಾರ ಮಧ್ಯಾಹ್ನ 1 ಗಂಟೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾರ್ಥಿವ ಶರೀರಕ್ಕೆ ಹೂಗುಚ್ಚವಿಟ್ಟು ನಮಿಸಿದರು. ಇದೇ ವೇಳೆ ಪೋಲಿಸ್ ಸಿಬ್ಬಂದಿಗಳು ಸಕಲ ಸರ್ಕಾರಿ ಗೌರವವನ್ನು ಸಲ್ಲಿಸಿದರು.

 

ನಂತರ ಸುದ್ದಿಗಾರರ ಜೊತೆ ಮಾತನಾಡಿ ಚಂದ್ರೇಗೌಡ ಒಳ್ಳೆ ಸ್ಪೀಕರ್ ಎಂದು ಪ್ರಶಂಸೆ ಪಡೆದುಕೊಂಡಿದ್ದರು. ಯಾಕಂದ್ರೆ, ಆವತ್ತು ಸ್ಪೀಕರ್ ಆಗಿ ಕೆಲಸ ಮಾಡುವುದು ಬಹಳ ಕಷ್ಟ ಇತ್ತು. ಬಿಜೆಪಿ ಬೆಂಬಲ ಪಡೆದು ರಾಮಕೃಷ್ಣ ಹೆಗ್ಡೆ ಸಿಎಂ ಆಗಿದ್ರು, ಚಂದ್ರೇಗೌಡ ಸ್ಪೀಕರ್ ಆಗಿ ಚಾಕಚಕ್ಯತೆಯಿಂದ ಕೆಲಸ ಮಾಡಿದ್ರು. ಆಮೇಲೆ ಜನತಾ ಪಾರ್ಟಿಯಲ್ಲಿ ಬಹಳ ದಿನ ನಮ್ಮ ಜೊತೆಯಲ್ಲಿ ಇದ್ದರು ಮತ್ತೆ ಕಾಂಗ್ರೆಸ್ ಸೇರಿ ಎಂ.ಎಲ್.ಎ. ಹಾಗೂ ಮಂತ್ರಿ ಆಗಿದ್ರು. ಅವರು ರಾಜಕೀಯ ಆಗಿ ನಾಲ್ಕು ಸದನದಲ್ಲೂ ಸದಸ್ಯರಾಗಿದ್ದರು ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ 4 ಸದನದಲ್ಲೂ ಸದಸ್ಯರಾಗಿದ್ದರು ಆ ರೀತಿ ನಾಲ್ಕು ಸದನದಲ್ಲೂ ಸದಸ್ಯರಾಗೋದು ತೀರಾ ಅಪರೂಪ ಪ್ರಜಾಪ್ರಭುತ್ವದ ನಾಲ್ಕು ವೇದಿಕೆಯಲ್ಲೂ ಇದ್ದರು. 87 ವರ್ಷದ ಅವರು ನಮ್ಮನ್ನ ಅಗಲಿದ್ದಾರೆ. ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ನಷ್ಟ ಭರಿಸುವ ಶಕ್ತಿ ನೀಡಲಿ ಎಂದರು.

ಇದನ್ನೂ ಓದಿ; ಪಡಿತರ ಚೀಟಿದಾರರೇ ಗಮನಿಸಿ; ಈ ಕೆಲಸ ಮಾಡದಿದ್ದರೆ ರೇಷನ್​ ಕಾರ್ಡ್ ಕ್ಯಾನ್ಸಲ್; ನಿಮ್ಮ ರೇಷನ್ ಕಾರ್ಡ್ ರದ್ದಾಗಲು ಕಾರಣ ಇಲ್ಲಿದೆ

ಡಿ.ಬಿ.ಚಂದ್ರೇಗೌಡರ ಅಂತಿಮ ದರ್ಶನ ಪಡೆದ ಕೇಂದ್ರ ಸಚಿವೆ ಹಾಗೂ ಡಿ.ಎನ್.ಜೀವಾರಾಜ್:
ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ವಿಧಿವಶ ಹಿನ್ನೆಲೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಚಿವ ಡಿ.ಎನ್.ಜೀವಾರಾಜ್ ಅಂತಿಮ ದರ್ಶನವನ್ನು ಪಡೆದುಕೊಂಡರು. ನಂತರ ಶೋಭಾ ಕರಂದ್ಲಾಜೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದರೊಂದಿಗೆ ತರೀಕೆರೆ ಶಾಸಕ ಜಿ.ಎಸ್ ಶ್ರೀನಿವಾಸ್, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವೆ ಮೋಟಮ್ಮ, ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಕಡೂರು ಶಾಸಕ ಆನಂದ, ಮಾಜಿ ಶಾಸಕ ಬಿಬಿ ನಿಂಗಯ್ಯ ಅವರು ಡಿ.ಬಿ. ಚಂದ್ರೇಗೌಡರ ಅಂತಿಮ ದರ್ಶನವನ್ನು ಪಡೆದುಕೊಂಡರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.