ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ; ಶಾಲೆಗಳಿಗೆ ರಜೆ ನೀಡಲು ಜಿಲ್ಲಾಡಳಿತ ಹಿಂದೇಟು

ಶೃಂಗೇರಿ/ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ತಾಲೂಕುಗಳಲ್ಲಿ ಪುನರ್ವಸು ಕಳೆದೆರಡು ದಿನಗಳಿಂದ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಕೊಪ್ಪ, ಶೃಂಗೇರಿ ಹಾಗೂ ಮೂಡಿಗೆರೆ ಮತ್ತು ಕಳಸ ತಾಲೂಕಿನಲ್ಲಿ ಜನ ಜೀವನ ಅಸ್ಥವ್ಯಸ್ಥವಾಗಿದೆ. ಹಲವೆಡೆಗಳಲ್ಲಿ ರಸ್ತೆ ಕುಸಿತವಾಗಿದ್ದರೆ, ರಭಸವಾಗಿ ಬೀಸುತ್ತಿರುವ ಮಳೆಯಿಂದಾಗಿ ನೂರಾರು ಕಡೆಗಳಲ್ಲಿ ಮರಗಳು ಉರುಳಿ ಮನೆ, ರಸ್ತೆ, ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು, ಜನ ಮನೆಗಳಿಂದ ಹೊರಬರಲು ಭಯ ಪಡುವಂತಾಗಿದೆ.

ಪರಿಸ್ಥಿತಿ ಹೀಗಿರುವಾಗ ಶಾಲಾಕಾಲೇಜುಗಳಿಗೆ ರಜೆ ಘೋಷಿಸಬೇಕಾಗಿದ್ದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಜೆ ನೀಡಲು ಮೀನಾ ಮೇಷ ಎಣಿಸುತ್ತಿದ್ದು, ಮಕ್ಕಳ ಪೋಷಕರನ್ನು ಆತಂಕಕ್ಕೆ ದೂಡಿದ್ದಾರೆ. (ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ)

ಅಕ್ಕಪಕ್ಕದ ಜಿಲ್ಲೆಗಳಾದ ಉಡುಪಿ, ದ ಕನ್ನಡ, ಉತ್ತರ ಕನ್ನಡ ಹಾಗೂ ಕೊಡುಗೆ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರೂ, ಪೋಷಕರು ಹಾಗೂ ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ರಜೆ ನೀಡುವಂತೆ ಮನವಿ ಮಾಡಿದ್ದರೂ ಜಿಲ್ಲಾಧಿಕಾರಿ ರಜೆ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಹಿಂದಿನ ಎಲ್ಲಾ ಜಿಲ್ಲಾಧಿಕಾರಿಗಳು ಅತಿ ಮಳೆ ಸಂಧರ್ಭದಲ್ಲಿ ಸುರಕ್ಷತಾ ದೃಷ್ಟಿಯಿಂದ ರಜೆ ಘೋಷಿಸುತ್ತಿದ್ದರು. ಆದರೆ ಡಿಸಿ ಮೀನಾ ನಾಗರಾಜ್ ರವರ ಮಕ್ಕಳ ಸುರಕ್ಷತೆಯ ನಿರ್ಲಕ್ಷ್ಯದ ಈ ನಡೆ ಆಶ್ಚರ್ಯ ಮೂಡಿಸುತ್ತಿದೆ.

ಕಳಸ ತಾಲೂಕಿನ ಮರಸಣಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಾಳಿಗಂಡಿ-ಅತ್ತಿಕೊಂಡ ಹೋಗುವ ರಸ್ತೆ ಬದಿಯ ಗುಡ್ಡ ಕುಸಿತವಾಗಿದೆ.

ಮಲೆನಾಡಿನ ಕುಗ್ರಾಮಗಳ ಬಹುತೇಕ ವಿದ್ಯಾರ್ಥಿಗಳು ಸಾಮಾನ್ಯವಾಗಿ ತುಂಬಿ ಹರಿಯುತ್ತಿರುವ ಹಳ್ಳ ಕೊಳ್ಳಗಳನ್ನು ದಾಟಿ ಬರಬೇಕಾಗಿದ್ದು, ಮರದ ಕಾಲು ಸಂಕಗಳು ಹಾಗೂ ದಟ್ಟ ಅಡವಿಯ ಕಾಲು ದಾರಿಗಳಲ್ಲಿ ಸಾಗಿ ಶಾಲೆಗಳಿಗೆ ತಲುಪ ಬೇಕಿದೆ. ಸಾಗುವಾಗ ಹಳ್ಳ, ಕೊಳ್ಳಗಳ ನೀರಿಗೆ ಸಿಕ್ಕಿ ಅಥವಾ ಬೀಸುತ್ತಿರುವ ಗಾಳಿಯ ರಭಸಕ್ಕೆ ಬೀಳುತ್ತಿರುವ ಮರಗಳಿಗೆ ಸಿಕ್ಕಿ ಅನಾಹುತವಾದರೆ ಯಾರು ಹೊಣೆ ಎಂದು ಪೋಷಕರು ಪ್ರಶ್ನಿಸಿದ್ದು, ಗ್ರಾಮೀಣ ವಿದ್ಯಾರ್ಥಿಗಳ ಸುರಕ್ಷತೆಯ ನಿರ್ಲಕ್ಷ್ಯ ಮಾಡದೆ ತುರ್ತು ರಜೆ ಘೋಷಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಇದಲ್ಲದೆ ಶಿವಮೊಗ್ಗದಲ್ಲೂ ಧಾರಕಾರ ಮಳೆ ಸುರಿಯುತ್ತಿದ್ದು ಜಿಲ್ಲಾಡಳಿತ ಸಾಗರ ಹಾಗೂ ಹೊಸನಗರದ ಶಾಲೆಗಳಿಗೆ ರಜೆ ಘೋಷಿಸಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.