ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಕನ್ನಡದ ನಟಿ ರನ್ಯಾ ರಾವ್ (Actress Ranya Rao) ಕೇಸ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ. ವಿಚಾರಣೆ ವೇಳೆ ಅನೇಕ ವಿಚಾರಗಳು ಹೊರಬರ್ತಿದೆ. ಡಿ.ಆರ್.ಐ ಅಧಿಕಾರಿಗಳು ಆರೋಪಿ ರಾನ್ಯಾ ಅವರನ್ನು 3 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಖ್ಯಾತ ರಾಜಕಾರಣಿಗಳಿಗೂ ಖ್ಯಾತ ನಟಿ ರನ್ಯಾ ರಾವ್ ಜೊತೆ ನಂಟಿದೆ ಎನ್ನುವ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ: ಅಂಗನವಾಡಿಯಲ್ಲಿ ಭರ್ಜರಿ ಜಾಬ್ ಆಫರ್; 10th, PUC ವಿದ್ಯಾರ್ಹತೆ: 15,000 ಸಂಬಳ

ಔತಣ ಕೂಟ ಕಾರ್ಯಕ್ರಮ ಮುಗಿದ 17 ದಿನದಲ್ಲೇ ಲಾಕ್:
ಹೌದು, ಕಳೆದ ಫೆಬ್ರವರಿ 15 ರಂದು ನಟಿ ರಾನ್ಯ-ಜತಿನ್ ಹಾಗೂ ಅಣ್ಣ ರುಷಭ್-ಸೌಂದರ್ಯ ಮದುವೆ ಸಮಾರಂಭದ ಔತಣ ಕೂಟ ಕಾರ್ಯಕ್ರಮವನ್ನು ಚಿಕ್ಕಮಗಳೂರು ತಾಲೂಕಿನ ಜೋಳಧಾಳ್ ಗ್ರಾಮದ ಐರಿಸ್ ಗ್ರೀನ್ ಪ್ಲಾಂಟೇಷನ್ ನಲ್ಲಿ ಆಯೋಜಿಸಲಾಗಿತ್ತು.
ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಹೊಸ ಘೋಷಣೆ; ಮಿಸ್ ಮಾಡ್ದೆ ಈ ಸುದ್ದಿ ಓದಿ
ಆಣೂರು ಸಮೀಪದ ಕೆಸರಿಕೆ ಮೂಲದವರಾದ ರಾನ್ಯ ತಾಯಿ ರೋಹಿಣಿ, ತನ್ನ ಹುಟ್ಟೂರಿನ ಅಕ್ಕಪಕ್ಕದ ಊರಿನವರು, ಸಂಬಂಧಿಕರಿಗಾಗಿ ಚಿಕ್ಕಮಗಳೂರು ತಾಲೂಕಿನ ಐರಿಸ್ ಗ್ರೀನ್ ಪ್ಲಾಂಟೇಷನ್ ನಲ್ಲಿ ಎರಡು ಜೋಡಿಗಳ ಮದುವೆ ಔತಣ ಕೂಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಕಾರ್ಯಕ್ರಮ ಮುಗಿದ 17 ದಿನದಲ್ಲೇ ರಾನ್ಯ ರಾವ್ ಲಾಕ್ ಆಗಿದ್ದಾರೆ.
ಇದನ್ನೂ ಓದಿ: ಒಂದೇ ಮೊಬೈಲ್ ಸಂಖ್ಯೆ ಎರಡು ಬ್ಯಾಂಕ್ ಖಾತೆಗೆ ಇದ್ಯಾ?; ಹಾಗಿದ್ರೆ ಈ ಸುದ್ದಿ ಓದಿ












