ರಾಜ್ಯದಲ್ಲಿ ಅರಣ್ಯ ಒತ್ತುವರಿಯನ್ನು ತೆರವುಗೊಳಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ ಇದೀಗ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಸಹೋದರನ ವಿರುದ್ಧವೇ ಅರಣ್ಯ ಭೂಮಿ ಒತ್ತುವರಿ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ; ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ಸ್ಕಾಲರ್ ಶಿಪ್; ಈ ಅರ್ಹತೆ ಹೊಂದಿದ್ದರೆ ಅರ್ಜಿ ಸಲ್ಲಿಸಿ

ಬೀದರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಸಹೋದರ ಅಮರ್ ಖಂಡ್ರೆ 27 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಕುರಿತು ಬೀದರ್‌ನ ಪ್ರಾದೇಶಿಕ ಅರಣ್ಯ ಕಚೇರಿ ಮೂಲಕ ರಾಜ್ಯಪಾರಿಗೆ ದೂರು ಸಲ್ಲಿಸಲಾಗಿದೆ ಎನ್ನಲಾಗಿದೆ.
ದೂರಿನಲ್ಲಿ ಏನಿದೆ:?
ಬೀದರ್ ತಾಲೂಕಿನ ಹೊನ್ನಿಕೇರಿ ಗ್ರಾಮದ ಸರ್ವೆ ನಂಬರ್ 78 ರಲ್ಲಿ 22 ಎಕರೆ 21 ಗುಂಟೆ ಮತ್ತು ಅತಿವಾಳ ಗ್ರಾಮದ ಸರ್ವೆ ನಂಬರ್ 21ರಲ್ಲಿ 2.18 ಎಕರೆ, ಸರ್ವೆ ನಂಬರ್ 22ರಲ್ಲಿ 3.23 ಎಕರೆ ವಿಸ್ತೀರ್ಣದ ಅರಣ್ಯ ಜಮೀನನ್ನು ಸಚಿವ ಈಶ್ವರ್ ಖಂಡ್ರೆ ಅವರ ಸೋದರ ಹಾಗೂ ಬೀದರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ್ ಖಂಡ್ರೆ ಒತ್ತುವರಿ ಮಾಡಿದ್ದಾರೆ ಎಂದು ರಾಜೇಂದ್ರ ಎಂಬುವರು ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ; 10th, 12th ಪಾಸ್ ಆದವರಿಗೆ ಸಿಗಲಿದೆ 60,000 ಸ್ಕಾಲರ್ ಶಿಪ್; ಈ ಷರತ್ತು ಕಡ್ಡಾಯ
ದೂರಿನೊಂದಿಗೆ ಪಹಣಿಗಳು, ಜಂಗಲಾತ ಪಹಣಿ, ಗ್ರಾಮ ನಕಾಶೆ, ಟೊಂಚ ನಕಾಶೆ, ಗೂಗಲ್ ಮ್ಯಾಪ್, ಅನಧಿಕೃತವಾಗಿ ಕಬ್ಬ ಮಾಡಿರುವ ಅರಣ್ಯ ಇಲಾಖೆಯ ಭೂಮಿಯ ಪಹಣಿಗಳು, ಸ್ಥಳದ ವಿಡಿಯೋ ದೃಶ್ಯಾವಳಿ, ಫೋಟೋಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ.
ಇನ್ನು ರಾಜೇಂದ್ರ ಅವರು ಸಲ್ಲಿಸಿದ ದೂರಿಗೆ ಬೀದರ್ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿಯವರು ಹಿಂಬರಹ ನೀಡಿದ್ದಾರೆ. ಆದರೆ, ಈ ಹಿಂಬರಹ ರಾಜೇಂದ್ರ ಅವರಿಗೆ ತಲುಪಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ ಉಪ ವಲಯ ಅರಣ್ಯಾಧಿಕಾರಿಯವರು ಪರಿಶೀಲನೆ ಕೈಗೊಂಡು ಯಾವುದೇ ಒತ್ತುವರಿ ಆಗಿರುವುದಿಲ್ಲ ಎಂದು ತಿಳಿಸಿದ್ದನ್ನು ಹಿಂಬರಹದಲ್ಲಿ ಉಲ್ಲೇಖಿಸಿದ್ದಾರಾದರೂ ಈ ಸಂಬಂಧ ಪರಿಶೀಲನೆ ವರದಿಯನ್ನೇ ಮೇಲಾಧಿಕಾರಿಗಳಿಗೆ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.
ಕೃಪೆ: ದಿ ಫೈಲ್
ಇದನ್ನೂ ಓದಿ; ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ 10,000 ಸ್ಕಾಲರ್ ಶಿಪ್; ಈಗಲೇ ಅರ್ಜಿ ಸಲ್ಲಿಸಿ












